Asianet Suvarna News Asianet Suvarna News

ಕಾರು ಹಿಟ್ & ರನ್: ಎತ್ತರಕ್ಕೆ ಹಾರಿ ಕೆಳಗೆ ಬಿದ್ದರೂ ಯುವತಿ ಪವಾಡಸದೃಶ ಪಾರು: ವೀಡಿಯೋ ವೈರಲ್

ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸದೇ ಯುವತಿಯೊಬ್ಬಳು ರಸ್ತೆ ದಾಟಲು ಹೋಗಿದ್ದು, ಈ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲೆ ಹಾರಿ ಕೆಳಗೆ ಬಿದ್ದಿದ್ದಾಳೆ. ಆದರೂ ಆಕೆ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. 

Madhya Pradesh high speed car Hit and run Girl Miraculous escape by death video goes viral in Social Media akb
Author
First Published Jun 11, 2024, 5:08 PM IST

ಭೋಪಾಲ್: ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸದೇ ಯುವತಿಯೊಬ್ಬಳು ರಸ್ತೆ ದಾಟಲು ಹೋಗಿದ್ದು, ಈ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲೆ ಹಾರಿ ಕೆಳಗೆ ಬಿದ್ದಿದ್ದಾಳೆ. ಆದರೂ ಆಕೆ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಆದರೆ ಆಕೆ ರಸ್ತೆಯಿಂದ ಮೇಲೆಳುತ್ತಿದ್ದಂತೆ ಕಾರು ಚಾಲಕ ಮಾತ್ರ ಒಮ್ಮೆ ಕಾರು ನಿಲ್ಲಿಸಿದಂತೆ ಮಾಡಿ ಆ ಸ್ಥಳದಿಂದ ಬುರ್ರನೇ ಎಸ್ಕೇಪ್ ಆಗಿದ್ದು, ಈ ವೇಳೆ ಅಲ್ಲಿದ್ದವರೆಲ್ಲಾ ಕಾರನ್ನು ತಡೆಯುವ ಪ್ರಯತ್ನ ಮಾಡಿದರು ಕಾರು ಚಾಲಕ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ. ಆದರೆ ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಧ್ಯಪ್ರದೇಶದ ಒಬೆದುಲ್ಲಾಗಂಜ್ ಬಳಿ ಇರುವ ಅರ್ಜುನ್ ನಗರ್ ಬ್ರಿಡ್ಜ್ ಬಳಿ ಈ ಗಟನೆ ನಡೆದಿದೆ. ಸರ್ವೀಸ್ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಕಾರು ಗುದ್ದಿದ್ದ ರಭಸಕ್ಕೆ ಹುಡುಗಿ  10 ಅಡಿಯಷ್ಟು ದೂರ ಹಾರಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ರಸ್ತೆಯಿಂದ ಎಬ್ಬಿಸಿದ ಸ್ಥಳೀಯರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾನವೀಯತೆ ಮರೆತ ಚಾಲಕ ಕಾರನ್ನು ಒಮ್ಮೆ ನಿಲ್ಲಿಸಿದಂತೆ ಮಾಡಿ ರಿವರ್ಸ್‌ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಕಾರು ಚಾಲಕ ಕಾರಿನೊಂದಿಗೆ ಜೂಟ್ ಹೇಳಿದ್ದಾನೆ.  

ಒಂಟೆಗೆ ಕಾರು ಡಿಕ್ಕಿ: ಅಪಘಾತದ ರಭಸಕ್ಕೆ ಕಾರಿನೊಳಗೆ ಸಿಲುಕಿ ನೋವು ತಡೆಯಲಾಗದೇ ಒಂಟೆಯ ಅರಚಾಟ

ಕೂಡಲೇ ಹುಡುಗಿಯ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದರು ಯುವತಿಗೆ ಅಂತಹ ದೊಡ್ಡ ಗಂಭೀರ ಗಾಯವೇನು ಆಗದೇ ಪವಾಡಸದೃಶವಾಗಿ ಪಾರಾಗಿದ್ದಾಳೆ. ಈ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಕಾರು ಚಾಲಕನಿಗಾಗಿ ಬಲೆ ಬೀಸಿದ್ದಾರೆ.

ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್‌

 

 

Latest Videos
Follow Us:
Download App:
  • android
  • ios