ಉದ್ಧವ್ ಠಾಕ್ರೆ ಸೋದರತ್ತೆ ಸುಪ್ರಿಯಾ ಸುಳೆ ಅತ್ತೆ: ಫ್ಯಾಮಿಲಿ ಒಂದಾಗಲ್ವೆ ಮತ್ತೆ?

ಮಹಾರಾಷ್ಟ್ರದಲ್ಲಿ ಅಂತ್ಯಗೊಂಡ ರಾಜಕೀಯ ಹೈಡ್ರಾಮಾ| ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಅಸ್ತಿತ್ವಕ್ಕೆ| ಇಂದು ಸಂಜೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಉದ್ಧವ್ ಠಾಕ್ರೆ| ಉದ್ಧವ್ ಠಾಕ್ರೆ ಹಾಗೂ ಸುಪ್ರಿಯಾ ಸುಳೆ ಪರಸ್ಪರ ಸಂಬಂಧಿಗಳು| ಸುಪ್ರಿಯಾ ಪತಿ ಸದಾನಂದ್ ಸುಳೆ ಬಾಳಾಸಾಹೇಬ್ ಠಾಕ್ರೆ ಸಹೋದರಿಯ ಪುತ್ರ| ಉದ್ಧವ್ ಠಾಕ್ರೆ ಸೋದರತ್ತೆ ಪುತ್ರನ ಜೊತೆ ಸುಪ್ರಿಯಾ ಸುಳೆ ಮದುವೆ| ಪವಾರ್ ಹಾಗೂ ಠಾಕ್ರೆ ಕುಟುಂಬದ ನಡುವೆ ಅವಿನಾಭಾವ ಸಂಬಂಧ|

Know The Relationship Between Pawar and Thackeray Family

ಮುಂಬೈ(ನ.28): ಮಹಾರಾಷ್ಟ್ರದಲ್ಲಿ ಕೊನೆಗೂ ರಾಜಕೀಯ ಹೈಡ್ರಾಮಾ ಅಂತ್ಯಗೊಂಡಿದೆ. ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಸಂಜೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಸಿಎಂ ಆಗುವುದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಪುತ್ರಿ ಸುಪ್ರಿಯಾ ಸುಳೆ ಪಾತ್ರ ಅತ್ಯಂತ ಮಹತ್ವದ್ದು.

ಹಾಗೆ ನೋಡಿದರೆ ಕಡು ರಾಜಕೀಯ ವಿರೋಧಿಗಳಾಗಿದ್ದರೂ ಶರದ್ ಪವಾರ್ ಹಾಗೂ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ವೈಯಕ್ತಿಕವಾಗಿ ಒಳ್ಳೆಯ ಸಂಬಂಧ ಹೊಂದಿದ್ದರು.

2006ರಲ್ಲಿ ಸುಪ್ರಿಯಾ ಸುಳೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ, ಪಕ್ಷದಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಪ್ರಿಯಾ ರಾಜ್ಯಸಭೆ ಹಾದಿಯನ್ನು ಸುಗಮಗೊಳಿಸಿದ್ದರು.

ಮಾ ಸಾಹೇಬ್, ಬಾಳಾ ಸಾಹೇಬ್ ಇರಬೇಕಿತ್ತು: ಸುಪ್ರಿಯಾ ಎಮೋಶನಲ್ ಟ್ವಿಟ್‌ನಲ್ಲೇನಿತ್ತು?

ರಾಜಕೀಯವಾಗಿ ವಿರೋಧಿಗಳಾಗಿದ್ದರೂ ಠಾಕ್ರೆ ಹಾಗೂ ಪವಾರ್ ಕುಟುಂಬ ವೈಯಕ್ತಿಕವಾಗಿ ಸುಮಧುರ ಬಾಂಧವ್ಯವನ್ನು ಹೊಂದಿವೆ. ಇದಕ್ಕೆ ಕಾರಣ ಸುಪ್ರಿಯಾ ಸುಳೆ ಅವರ ಪತಿ ಸದಾನಂದ್ ಸುಳೆ ಎಂದರೆ ನಿಮಗೆ ಅಚ್ಚರಿಯಾದೀತು.

ಬಂಡೆದ್ದ ಅಜಿತ್‌ ಮನವೊಲಿಸಿದ್ದು ಈ ಪತಿ-ಪತ್ನಿ!

ಹೌದು, ಸುಪ್ರಿಯಾ ಪತಿ ಸದಾನಂದ್ ಸುಳೆ ಬಾಳಾಸಾಹೇಬ್ ಠಾಕ್ರೆ ಅವರ ಸ್ವಂತ ಸಹೋದರಿಯ ಪುತ್ರ. ಹೌದು, ಸದಾನಂದ್ ಸುಳೆ ಉದ್ಧವ್ ಠಾಕ್ರೆ ಅವರ ಸೋದರತ್ತೆಯ ಮಗನಾಗಿದ್ದು, ಬಿಜೆಪಿ ಸಾಂಗತ್ಯ ಬೆಳೆಸಿದ್ದ ಅಜಿತ್ ಪವಾರ್ ಅವರನ್ನು ಎನ್‌ಸಿಪಿಗೆ ವಾಪಸ್ ಕರೆತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಸದಾನಂದ್ ಸುಳೆ ಅವರನ್ನು ಸುಪ್ರಿಯಾ ವಿವಾಹವಾಗಿದ್ದರು. ಇವರಿಬ್ಬರ ಮದುವೆಯ ಕುರಿತಾದ ಮಾತುಕತೆ ಖುದ್ದು ಬಾಳಾಸಾಹೇಬ್ ನೇತೃತ್ವದಲ್ಲೇ ನಡೆದಿದ್ದು ವಿಶೇಷ. ಸುಪ್ರಿಯಾ ಸುಳೆ ಬಾಳಾಸಾಹೇಬ್ ಅವರನ್ನು ಕಾಕಾ ಎಂತಲೇ ಕರೆಯುತ್ತಿದ್ದರು.

ಮಹಾರಾಷ್ಟ್ರದಲ್ಲಿ ಇನ್ಮುಂದೆ ಠಾಕ್ರೆ ಸರ್ಕಾರ್‌

ಹೀಗೆ ಶರದ್ ಪವಾರ್ ಹಾಗೂ ಬಾಳಾಸಾಹೇಬ್ ಠಾಕ್ರೆ ಕುಟುಂಬ ಪರಸ್ಪರ ಸಂಬಂಧ ಹೊಂದಿದ್ದು, ಈ ಸಂಬಂಧವೇ ಸದ್ಯ ಮೈತ್ರಿ ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ.

Latest Videos
Follow Us:
Download App:
  • android
  • ios