ಮಾ ಸಾಹೇಬ್, ಬಾಳಾ ಸಾಹೇಬ್ ಇರಬೇಕಿತ್ತು: ಸುಪ್ರಿಯಾ ಎಮೋಶನಲ್ ಟ್ವಿಟ್‌ನಲ್ಲೇನಿತ್ತು?
ಮಾ ಸಾಹೇಬ್, ಬಾಳಾ ಸಾಹೇಬ್ ನೆನೆದ ಸುಪ್ರಿಯಾ| ಉದ್ಧವ್ ಠಾಕ್ರೆ ತಾಯಿ ಮೀನಾತಾಯಿ ಹಾಗೂ ತಂದೆ ಬಾಳ್ ಠಾಕ್ರೆ ನೆನೆದು ಭಾವುಕ| ಉದ್ಧವ್ ಸಿಎಂ ಆಗುವುದನ್ನು ಅವರಿಬ್ಬರು ಕಣ್ಣಾರೆ ನೋಡಬೇಕಿತ್ತು ಎಂದ ಸುಪ್ರಿಯಾ| ಉದ್ಧವ್ ಪ್ರಮಾಣವಚನಕ್ಕೂ ಮುನ್ನ ಸುಪ್ರಿಯಾ ಭಾವನಾತ್ಮಕ ಟ್ವಿಟ್|
ಮುಂಬೈ(ನ.28): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಜೊನೆಗೂ ಅಂತ್ಯ ಕಂಡಿದ್ದು, ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಸರ್ಕಾರ ರಚಿಸಿದೆ.
ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳಿಂದ ಒಟ್ಟು 6 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಠಾಕ್ರೆ ಶಪಥ: ಆಹ್ವಾನವಿದ್ದರೂ ಸೋನಿಯಾ, ರಾಹುಲ್ ಗೈರು?
ಈ ಮಧ್ಯೆ ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಭಾವನಾತ್ಮಕ ಟ್ವಿಟ್ ಮಾಡಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಮಾ ಸಾಹೇಬ್(ಉದ್ಧವ್ ತಾಯಿ ಮೀನಾತಾಯಿ) ಬಾಳಾ ಸಾಹೇಬ್(ಉದ್ಧವ್ ತಂದೆ ಬಾಳ್ ಠಾಕ್ರೆ) ಇರಬೇಕಿತ್ತು ಎಂದು ಹೇಳಿದ್ದಾರೆ.
ಮಾ ಸಾಹೇಬ್ ಹಾಗೂ ಬಾಳಾ ಸಾಹೇಬ್ ತಮ್ಮನ್ನು ಮಗಳಂತೆ ಕಾಣುತ್ತಿದ್ದರು ಎಂದಿರುವ ಸುಪ್ರಿಯಾ, ಈ ದಿನ ಅವರಿಬ್ಬರು ಇದ್ದಿದ್ದರೆ ಉದ್ಧವ್ ಠಾಕ್ರೆ ಹಾಗೂ ನಮಗೆಲ್ಲರಿಗೂ ಆಶೀರ್ವಾದ ದೊರಕುತ್ತಿತ್ತು ಎಂದು ಹೇಳಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಶಿವಸೇನೆಯ ಬಾಳಾ ಠಾಕ್ರೆ ಹಾಗೂ ಎನ್‌ಸಿಪಿ ಯ ಶರದ್ ಪವಾರ್ ಕಡುವಿರೋಧಿಗಳಾಗಿದ್ದರೂ, ವೈಯಕ್ತಿಕವಾಗಿ ಅನೋನ್ಯ ಸಂಬಂಧ ಹೊಂದಿದ್ದರು.
ಮಹಾರಾಷ್ಟ್ರದಲ್ಲಿ ಇನ್ಮುಂದೆ ಠಾಕ್ರೆ ಸರ್ಕಾರ್
2006ರಲ್ಲಿ ಸುಪ್ರಿಯಾ ಸುಳೆ ರಾಜ್ಯಸಭೆ ಚುನಾವಣೆ ಸ್ಪರ್ಧಿಸಿದ್ದಾಗ, ಬಾಳಾ ಠಾಕ್ರೆ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಪ್ರಿಯಾ ಅವರ ರಾಜ್ಯಸಭೆಯ ಹಾದಿ ಸುಗಮಗೊಳಿಸಿದ್ದರು.
ಇದೀಗ ಶಿವಸೇನೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚಿಸುತ್ತಿದ್ದು, ಉದ್ಧವ್ ಠಾಕ್ರೆ ಸಿಎಂ ಆಗುವಲ್ಲಿ ಶರದ್ ಪವಾರ್ ಹಾಗೂ ಸುಪ್ರಿಯಾ ಸುಳೆ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.