ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ಪೋಷಕರ ವರ್ತನೆಯನ್ನು ಅನುಕರಿಸುವ ಪುಟ್ಟ ಬಾಲಕನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕನ ವರ್ತನೆಗಳು ನೆಟ್ಟಿಗರನ್ನು ರಂಜಿಸಿದ್ದು, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಸಮಯದಲ್ಲಿ ಆರೋಗ್ಯ ಇಲಾಖೆಯ ಉದ್ಯೋಗಿಗಳ ಹೊರತಾಗಿ ಪ್ರತಿ ಐಟಿ ಸಂಸ್ಥೆಗಳು ಸೇರಿದಂತೆ ಬಹುತೇಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅಂದರೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಿದವು. ಇದರಿಂದ ಕೋವಿಡ್ ನಂತರವೂ ಕೆಲಸದ ಆಯಾಮವೇ ಬದಲಾಯ್ತು. ಕೋವಿಡ್ ನಂತರವೂ ಕೆಲ ಸಂಸ್ಥೆಗಳು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ನೀಡಿದರೆ ಮತ್ತೆ ಕೆಲ ಸಂಸ್ಥೆಗಳು ಹೈಬ್ರಿಡ್ ಮಾದರಿಯ ಅಂದರೆ ಕೆಲವು ದಿನ ಕಚೇರಿ ಕೆಲವು ದಿನ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿತ್ತು. ಇದರಿಂದಾಗಿ ಅನೇಕರು ತಮ್ಮ ತಮ್ಮ ಊರುಗಳಲ್ಲೇ ಕೆಲಸ ಮಾಡುವ ಅವಕಾಶ ದೊರೆಯಿತು. ಹೀಗಾಗಿ ಬಹುತೇಕ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮನೆಯಲ್ಲಿರುವ ಮಕ್ಕಳಿಗೆ ಪೋಷಕರು ಕೆಲಸದ ವೇಳೆ ಹೇಗೆ ವರ್ತಿಸುತ್ತಾರೆ ಎಂಬುದು ಸ್ಪಷ್ಟವಾಗಿ ಕಾಣಸಿಗುವುದು. ಇದನ್ನೇ ಇಲ್ಲೊಬ್ಬ ಬಾಲಕ ಅನುಕರಣೆ ಮಾಡಿದ್ದು ಆತನ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಪುಟ್ಟ ಮಕ್ಕಳು ಪೋಷಕರ ಎಲ್ಲಾ ವಿಚಾರಗಳನ್ನು ಅನುಕರಣೆ ಮಾಡುತ್ತಾರೆ. ಅವರ ಹಾವಭಾವದಿಂದ ಹಿಡಿದು ಅವರ ಎಲ್ಲಾ ಚಟುವಟಿಕೆಗಳವರೆಗೆ ಮಕ್ಕಳು ಅನುಕರಣೆ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಮಕ್ಕಳ ಮುಂದೆ ಕೆಟ್ಟ ವರ್ತನೆ ತೋರಬಾರದು ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬ ಪುಟ್ಟ ಬಾಲಕ ತನ್ನ ಪೋಷಕರ ವರ್ಕ್ ಫ್ರಮ್ ಹೋಮ್ ಕೆಲಸವನ್ನು ಅಣಕು ಮಾಡಿದ್ದು ಆತನ ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಬಾಲಕ ಐಮ್ ಆಡಿಬಲ್ ಎಂದು ಕೇಳುತ್ತಾನೆ.(ನನ್ನ ಮಾತು ನಿಮಗೆ ಕೇಳಿಸುತ್ತಿದೆಯಾ) ಐಮ್ ಶೇರಿಂಗ್ ಮೈ ಸ್ಕ್ರಿನ್( ನಾನು ನನ್ನ ಕಂಪ್ಯೂಟರ್ ಸ್ಕ್ರಿನ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ) ಹೆಲೋ ಅಮರ್ , ಐ ವಿಲ್ ಚೆಕ್ ಐ ವಿಲ್ ಚೆಕ್ ವಾಟ್ ಇಸ್ ದ ಇಶ್ಯೂ( ಹೆಲೋ ಅಮರ್ ತೊಂದರೆ ಏನು ನಾನು ಚೆಕ್ ಮಾಡುತ್ತೇನೆ) ಹೆಲೋ ಏಕ್ ಕಾಫಿ ಲೇಕರ್ ಆವೋ ಮೇರಾ ಧಿಮಾಕ್ ನಹಿ ಚಲ್ ರಹಾ ಹೇ( ಹೆಲೋ ನನಗೊಂದು ಕಾಫಿ ತಗೊಂಡು ಬಾ ನನ್ನ ತಲೆ ಓಡ್ತಾ ಇಲ್ಲ) ಹೀಗೆ ಬಾಲಕ ತನ್ನ ಪೋಷಕರು ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ಏನೇನ್ ಮಾಡ್ತಾರೋ ಅದನ್ನೆಲ್ಲಾ ಮಾಡಿದ್ದು ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.
ವೀಡಿಯೋ ನೋಡಿದವರು ವೆರೈಟಿ ಕಾಮೆಂಟ್ ಮಾಡಿದ್ದಾರೆ. 10 ವರ್ಷ ಅನುಭವ ಇರುವ ಫ್ರೆಶರ್‌ಗಳು ಬೇಕು ಎಂದು ಸಂಸ್ಥೆ ಕೇಳಿದಾಗ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರೊಡಕ್ಷನ್ ಸಮಸ್ಯೆ ನೋಡ್ತಿದ್ದೇನೆ ಕೆಲ ಸಮಯ ಹಿಡಿಯುವುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕ ಕಾರ್ಪೋರೇಟ್ ಪ್ರಪಂಚಕ್ಕೆ ಸಿದ್ಧಗೊಳ್ಳುತ್ತಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಜನರೇಷನ್‌ನ ಮಕ್ಕಳು ತಮ್ಮ ಅಪ್ಪ ಅಮ್ಮ ದಿನದ ಕೊನೆಯಲ್ಲಿ ಕಳುಹಿಸುತ್ತೇನೆ ಎಂಬುದನ್ನು ಕೇಳುತ್ತಾ ಬೆಳೆಯುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೋ ನೀವು ಹೇಳೋದು ನಮಗೆ ಕೇಳಿಸ್ತಿಲ್ಲ, ನಿಮ್ಮ ಮೈಕನ್ನು ಒಮ್ಮೆ ಚೆಕ್ ಮಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೇನ್ ಝೆಡ್ ಜನರೇಷನ್‌ನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡಿದ್ದೀರಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕ ನಮ್ಮಂತಹ ಐಟಿ ಮಂದಿಯನ್ನು ಚೆನ್ನಾಗಿ ಅನುಕರಣೆ ಮಾಡ್ತಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಾಲಕ ಸೀದಾ ಮ್ಯಾನೇಜರ್ ಆಗಿ ಬಿಡ್ತಾನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ಬಾಲಕ ಪೋಷಕರನ ಕೆಲಸವನ್ನು ಅಣಕಿಸುತ್ತಿರುವ ವೀಡಿಯೋ ಭಾರಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
ಇದನ್ನೂ ಓದಿ: ಕಾರಿನೊಳಗೆ ಲಾಕ್ ಮಾಡಿಕೊಂಡ ಬಾಲಕಿ: ಯುವಕ ನೀಡಿದ ಐಡಿಯಾದಿಂದ ಒಪನ್ ಆಯ್ತು ಕಾರ್ ಡೋರ್
ಇದನ್ನೂ ಓದಿ: ಅಪ್ಪ ಅಂದ್ರೆ ಆಕಾಶ ಅನ್ನೋದನ್ನಾ ನಿಜ ಮಾಡಿದ ತಂದೆ : ಕ್ಯಾನ್ಸರ್‌ನಿಂದ ಚೇತರಿಸಿದ ಮಗನ ಆಸೆ ಈಡೇರಿಸಿದ್ದು ಹೀಗೆ...
