Asianet Suvarna News Asianet Suvarna News

ರಾಹುಲ್ ಗಾಂಧಿ ಬೆನ್ನಲ್ಲೇ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹ!

ಬಿಜೆಪಿ ನಾಯಕ, ವಿಶ್ವ ಹಿಂದೂ ಪರಿಷತ್ ನಾಯಕನ ಅಪರಹಣ ಹಾಗೂ ಹತ್ಯೆ ಪ್ರಕರಣದಲ್ಲಿ ಬಿಎಸ್‌ಪಿ ನಾಯಕ ಅಫ್ಜಲ್‌ ಅನ್ಸಾರಿ ಅಪರಾಧಿ ಎಂದು ಸಾಬೀತಾಗಿದೆ. ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

Kidnap and Murder case Uttar Pradesh BSP MP Afzal Ansari disqualified from Lok sabha ckm
Author
First Published May 1, 2023, 9:22 PM IST

ನವದೆಹಲಿ(ಮೇ.01): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ ಜೈಲು ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ಇದೀಗ ರಾಹುಲ್ ಗಾಂಧಿ ಬೆನ್ನಲ್ಲೇ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಬಿಜೆಪಿ ನಾಯಕ, ಹಿಂದೂ ಮುಖಂಡರ ಅಪಹರಣ ಹಾಗೂ ಹತ್ಯೆ ಪ್ರಕರಣದಲ್ಲಿ ಬಹುಜನ ಸಮಾಜವಾದಿ ಪಾರ್ಟಿ ಸಂಸದ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. 

ಉತ್ತರ ಪ್ರದೇಶದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಹತ್ಯೆ ಮತ್ತು ವಿಎಚ್‌ಪಿ ನಾಯಕ ನಂದಕಿಶೋರ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌, ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿ ಹಾಗೂ ಆತನ ಸೋದರ ಅಫ್ಜಲ್‌ ಅನ್ಸಾರಿಗೆ ಸ್ಥಳೀಯ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಸಂಸದ ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಶನಿವಾರ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಜೊತೆಗೆ ಇಬ್ಬರಿಗೂ ಕ್ರಮವಾಗಿ 5 ಲಕ್ಷ ಮತ್ತು 1 ಲಕ್ಷ ರು. ದಂಡ ವಿಧಿಸಿದೆ.

ವಿಶ್ವ ಹಿಂದು ಪರಿಷತ್ ನಾಯಕನ ಹತ್ಯೆ ಕೇಸ್, ಮುಖ್ತರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ!

ಕ್ರಿಮಿನಲ್‌ ಪ್ರಕರಣಗಳಲ್ಲಿ ಯಾವುದೇ ಜನಪ್ರತಿನಿಧಿ 2 ವರ್ಷಕ್ಕಿಂತ ಶಿಕ್ಷೆಗೆ ಗುರಿಯಾದರೆ ತಕ್ಷಣವೇ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ. ಇದರಂತೆ ಅಫ್ಜಲ್ ಅನ್ಸಾರಿ ಎಪ್ರಿಲ್ 29 ರಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಎಂದು ಲೋಕಸಭಾ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ. 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಮುಖ್ತಾರ್‌ ಅನ್ಸಾರಿ ಹಾಗೂ ಆತನ ಸೋದರ ಅಫ್ಜಲ್‌ ಅನ್ಸಾರಿ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅತೀ ಹಿಂದೂ ಮುಖಂಡರು, ರಾಜಕೀಯ ನಾಯಕರ ಅಪಹರಣ ಮಾಡಿ ಹತ್ಯೆ ಮಾಡಿದ ಹಲವು ಪ್ರಕರಣ ಇವರಿಬ್ಬರ ಮೇಲಿದೆ.  5 ಬಾರಿ ಶಾಸಕರಾಗಿದ್ದ ಮುಖ್ತಾರ್‌ 1995ರಲ್ಲಿ ನಂದಕಿಶೋರ್‌ ಅಪಹರಣ ಮಾಡಿದ್ದ, 2005ರಲ್ಲಿ ಕೃಷ್ಣಾನಂದ ರಾಯ್‌ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಘಾಜೀಪುರ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಇದರಿಂದ ಘಾಜಿಪುರ ಕ್ಷೇತ್ರದ ಸಂಸದ ಅಫ್ಜಲ್ ಅನ್ಸಾರಿ ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ಮುಖ್ತಾರ್ ಅನ್ಸಾರಿ ಸಹಚರ, ಶಾರ್ಪ್ ಶೂಟರ್ ಎನ್ ಕೌಂಟರ್! 

ಮೋದಿ ಸಮುದಾಯವನ್ನು ಟೀಕಿಸಿದ ಕಾರಣ ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ ಪ್ರಕಟಿಸಿತ್ತು. ಹೀಗಾಗಿ ವಯನಾಡು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ರಾಹುಲ್ ಗಾಂಧಿ ತಮ್ಮ ಸ್ಥಾನದಿಂದ ಅನರ್ಹರಾಗಿದ್ದರು. ‘ಮೋದಿ’ ಸಮುದಾಯ ಕುರಿತ ಹೇಳಿಕೆ ವಿರುದ್ಧ ಮಾನನಷ್ಟಪ್ರಕರಣದಡಿ ಸೂರತ್‌ ಕೋರ್ಚ್‌ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ರಾಹುಲ್‌ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಶಿಕ್ಷೆಗೆ ತಡೆ ನೀಡಿ ಎಂದು ರಾಹುಲ್‌ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ ಕೋರ್ಚ್‌ ತಿರಸ್ಕರಿಸಿತ್ತು. ಹೀಗಾಗಿ ರಾಹುಲ್‌ ಗುಜರಾತ್‌ ಹೈಕೋರ್ಚ್‌ ಮೊರೆ ಹೋಗಿದ್ದಾರೆ.

ರಾಹುಲ್ ಗಾಂಧಿಗೂ ಮೊದಲು ಉತ್ತರಪ್ರದೇಶದ ಎಸ್‌ಪಿ ಶಾಸಕ ಆಜಂ ಖಾನ್‌, ಅವರ ಪುತ್ರ ಅಬ್ದುಲ್ಲಾ ಆಜಂ, ಬಿಎಪಿಯ ವಿಕ್ರಮ ಸೈನಿ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.

Follow Us:
Download App:
  • android
  • ios