ಲಕ್ನೌ(ಆ.  09)  ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಪೊಲೀಸರು ಪಾತಕಿ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ ಸಹಚರನನ್ನು ಎನ್ ಕೌಂಟರ್ ಮಾಡಿದ್ದಾರೆ.

ರಾಕೇಶ್ ಪಾಂಡೆ ಅಲಿಯಾಸ್ ಹನುಮಾನ್ ಪಾಂಡೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಸರೋಜಿನಿನಗರದಲ್ಲಿ  ಎನ್ ಕೌಂಟರ್ ನಡೆದಿದ್ದು ಅನ್ಸಾರಿ ಮತ್ತು ಮುನ್ನಾ ಭಜರಂಗಿ ಶಿಷ್ಯನಾಗಿ ಗುರುತಿಸಸಿಕೊಂಡಿದ್ದ ಪಾಂಡೆ ಶಾರ್ಪ್ ಶೂಟರ್ ಆಗಿದ್ದ.

6 ವರ್ಷದ ಬಾಲಕಿ ಮೇಲೆ ರೇಪ್; ಗುಪ್ತಾಂಗಕ್ಕೆ ಗಾಯ ಮಾಡಿದ ಪಿಶಾಚಿ

2005 ರ ನವೆಂಬರ್  29  ರಂದು ನಡೆದಿದ್ದ ಮೊಹಮ್ಮದಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ರಾಗಿದ್ದ ಕೃಷ್ಣಾನಂದ ರಾಯ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಖ್ತಾರ್ ಅನ್ಸಾರಿ ಜೈಲಿನಲ್ಲಿದ್ದಾನೆ.  ಪೊಲೀಸರ ಗುಂಡಿಗೆ ಬಲಿಯಾಗಿರುವ ಪಾಂಡೆ ತಲೆಗೆ  ಲಕ್ಷ ರೂ.  ಬಹುಮಾನ ಘೋಷಿಸಲಾಗಿತ್ತು.

ಗಾಯಗೊಂಡಿದ್ದ ಪಾಂಡೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಾವಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ.   ಪಾಂಡೆ ಅನ್ಸಾರಿ ಗ್ಯಾಂಗ್ ನಲ್ಲಿ  23  ವರ್ಷಗಳಿಂದ ಗುರುತಿಸಿಕೊಂಡಿದ್ದ.  ಇನ್ನೊಬ್ಬ ಗ್ಯಾಂಗ್ ಸ್ಟರ್  ಎಂಬಾತನನ್ನು ಮತ್ತೊಬ್ಬ ಗ್ಯಾಂಗ್ ಸ್ಟರ್ ಸಿನೀಲ್ ರಾಥಿ  2018 ರಲ್ಲಿ ಹೊಡೆದುಹಾಕಿದ್ದ.