Asianet Suvarna News Asianet Suvarna News

ವಿಶ್ವ ಹಿಂದು ಪರಿಷತ್ ನಾಯಕನ ಹತ್ಯೆ ಕೇಸ್, ಮುಖ್ತರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ!

ಬಹುಜನ ಸಮಾಜವಾದಿ ಪಾರ್ಟಿ ನಾಯಕ, ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮುಖ್ತರ್ ಅನ್ಸಾರಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಮುಖ್ತರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ಕೋರ್ಟ್ ಪ್ರಕಟಿಸಿದೆ.
 

VHP leader Kidnap and Murder case Gangster Mukhtar Asnari convicted  court sentence 10 year jail term ckm
Author
First Published Apr 29, 2023, 2:32 PM IST

ಲಖನೌ(ಏ.29): ವಿಶ್ವಹಿಂದೂ ಪರಿಷತ್ ನಾಯಕ ನಂದಕಿಶೋರ್ ರುಂಗ್ತಾ ಹಾಗೂ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕಿಡ್ನಾಪ್ ಹಾಗೂ ಹತ್ಯೆ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಪ್ರಕಟಗೊಂಡಿದೆ. ಈ ಕೊಲೆಯ ಪ್ರಮುಖ ಆರೋಪಿ , ಬಹುಜನ ಸಮಾಜವಾದಿ ಪಾರ್ಟಿ ನಾಯಕ ಮುಖ್ತರ್ ಅನ್ಸಾರಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದರ ಜೊತೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಘಾಜಿಪುರ ಕೋರ್ಟ್ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮುಖ್ತರ್ ಅನ್ಸಾರಿ ಸಹೋದರ ಅಫ್ಜಲ್ ಅನ್ಸಾರಿ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿರುವ ಮುಖ್ತರ್ ಅನ್ಸಾರಿ 5 ಬಾರಿ ಶಾಸಕನಾಗಿ ಮೆರೆದಿದ್ದ. ಇದೇ ಅವಧಿಯಲ್ಲಿ ಮುಖ್ತರ್ ಅನ್ಸಾರಿ ಮೇಲೆ ಹಲವು ಕೊಲೆ ಹಾಗೂ ಕಿಡ್ನಾಪ್ ಪ್ರಕರಣ ದಾಖಲಾಗಿದೆ. 1996ರಲ್ಲಿ ವಿಶ್ವಹಿಂದೂ ಪರಿಷತ್ ನಾಯಕ ನಂದಕಿಶೋರ್ ರುಂಗ್ತ ಹಾಗೂ 2005ರಲ್ಲಿ ಬಿಜೆಪಿ ನಾಯಕ ಕೃಷ್ಣಾನಂದ ರೈ   ಅಹರಣ ಹಾಗೂ ಕೊಲೆ ಪ್ರಕರಣದಲ್ಲಿ ಇದೀಗ ಕೋರ್ಟ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದೆ.

 

ದಾಳಿ ಬೆನ್ನಲ್ಲೇ ಅತೀಕ್‌ನನ್ನು ಆಸ್ಪತ್ರೆ ದಾಖಲಿಸಿಲ್ಲ ಯಾಕೆ? ಯುಪಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ!

ಸುದೀರ್ಘ ವಿಚಾರಣೆ ಬಳಿಕ ಘಾಜಿಪುರ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಷ್ಟಕ್ಕೆ ಅನ್ಸಾರಿ ಮೇಲಿ ದೂರು ಹಾಗೂ ವಿಚಾರಣೆ ಮುಗಿದಿಲ್ಲ. ಕಳೆದ ವರ್ಷ 2001ರಲ್ಲಿ ನಡೆದ ಉಸುರಿ ಚತ್ತಿ ಗ್ಯಾಂಗ್ ವಾರ್ ಘಟನೆಯ ಪ್ರಮುಖ ರೂವಾರಿಯಾಗಿದ್ದ ಅನ್ಸಾರಿ ಮೇಲೆ ಕೇಸ್ ದಾಖಲಾಗಿತ್ತು. ಕಳೆದ ವರ್ಷ ಮುಖ್ತರ್ ಅನ್ಸಾರಿ ವಿರುದ್ದ ಘಾಜಿಪುರ ಕೋರ್ಟ್ 5 ಪ್ರಕರಣ ಸಂಬಂಧ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಮತ್ತೆರೆಡು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಮತ್ತೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದ ಪ್ರಕರಣಗಳಲ್ಲಿ ಘಾಜಿಪುರ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಪೇದೆ ಕೊಲೆ ಪ್ರಕರಣವೂ ಸೇರಿದೆ. ಈ ಕೊಲೆಯಲ್ಲೂ ಮುಖ್ತರ್ ಅನ್ಸಾರಿ ಅಪರಾಧಿ ಎಂದು ಸಾಬೀತಾಗಿತ್ತು. ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್, ಮಾಫಿಯಾ ಡಾನ್ ಎಂದೇ ಗುರುತಿಸಿಕೊಂಡಿದ್ದ ಮುಖ್ತರ್ ಅನ್ಸಾರಿ ಇದೀಗ ಜೈಲಿನಲ್ಲೇ ಕೊಳೆಯಬೇಕಾಗಿದೆ.

 

ಗ್ಯಾಂಗ್‌ಸ್ಟರ್‌ನ ಮತ್ತಷ್ಟು ರಹಸ್ಯ ಬಯಲು: ಅತೀಕ್‌ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತದ ಕಲೆಯ ದುಪ್ಪಟ್ಟಾ ಪತ್ತೆ

ಉತ್ತರ ಪ್ರದೇಶದಲ್ಲಿ ಮಾಫಿಯಾವನ್ನು ಮಣ್ಣಲ್ಲಿ ಹೂತು ಹಾಕುತ್ತೇನೆ ಎಂದು ಘೋಷಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಒಬ್ಬೊಬ್ಬ ಗ್ಯಾಂಗ್‌ಸ್ಟರ್ ಕತೆ ಮುಗಿಸುತ್ತಿದ್ದಾರೆ. 

ಡೀಸಿ ಕೊಂದಿದ್ದ ಬಿಹಾರದ ಡಾನ್‌ ಆನಂದ್‌ ಜೈಲಿಂದ ಬಿಡುಗಡೆ
ಬಿಹಾರದ ಪಟನಾ ಜಿಲ್ಲಾಧಿಕಾರಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಹಾರದ ಗ್ಯಾಂಗ್‌ಸ್ಟರ್‌ ಹಾಗೂ ಮಾಜಿ ಸಂಸದ ಆನಂದ್‌ ಮೋಹನ್‌ ಸಿಂಗ್‌ 15 ವರ್ಷಗಳ ಜೈಲುವಾಸದ ಬಳಿಕ ಗುರುವಾರ ಮುಂಜಾನೆ ಸಹರ್ಸಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.14 ರಿಂದ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಸಿಎಂ ನಿತೀಶ್‌ ಕುಮಾರ್‌ ಸರ್ಕಾರ ಇತ್ತೀಚೆಗೆ ಜೈಲು ನಿಯಮ ತಿದ್ದುಪಡಿ ಮಾಡಿತ್ತು. ಈ ಹಿನ್ನೆಲೆ ಡಾನ್‌ ಆನಂದ್‌ ಸೇರಿ ಒಟ್ಟು 27 ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಡಾನ್‌ ಆನಂದ್‌ಗೆ ಅನುಕೂಲವಾಗಲೆಂದೇ ನಿತೀಶ್‌ ಸರ್ಕಾರ ಈ ಅನಗತ್ಯ ಕ್ರಮ ಜಾರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

Follow Us:
Download App:
  • android
  • ios