ನವದೆಹಲಿ(ಜೂ.06): ಪಂಜಾಬ್‌ನ ಖಲಿಸ್ತಾನ ಉಗ್ರಗಾಮಿಗಳ ಗುಂಪು ಹತ್ತಿಕ್ಕಲು ನಡೆಸಿದ ಕಾರ್ಯಚರಣೆ ಆಪರೇಶನ್ ಬ್ಲೂ ಸ್ಟಾರ್. 1984, ಜೂನ್ 6 ರಂದು ಅಂತ್ಯಗೊಂಡ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಇಂದು 37 ವರ್ಷ ಸಂದಿದೆ. ಇದರ ಹಿನ್ನಲೆಯಲ್ಲಿ ಸಿಖ್ ಸಂಘಟನೆಗಳು ಅಮೃತ ಸರದ ಸ್ವರ್ಣ ಮಂದಿರದಲ್ಲಿ ಕೆಲ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಸ್ವರ್ಣಮಂದಿರದಲ್ಲಿ ಉಗ್ರಗಾಮಿಗಳ ಖಲಿಸ್ತಾನ ಧ್ವಜ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ವಿಶ್ವಸಂಸ್ಥೆಗೆ ದೇಣಿಗೆ ನೀಡಿ ದಿಲ್ಲಿ ರೈತ ಹೋರಾಟ ಪರ ಖಲಿಸ್ತಾನ್‌ ಲಾಬಿ!

ಅಮೃತಸರದ ಸ್ವರ್ಣಮಂದಿರದಲ್ಲಿ ಭಾರಿ ಶಸ್ತ್ರಾಸ್ತ್ರವನ್ನು ತುಂಬಿ ಬಂಡುಕೋರರಿಗೆ ಪೂರೈಕೆ ಮಾಡುತ್ತಿದ್ದ ಖಲಿಸ್ತಾನದ ಹೋರಾಟದ ಗುರು, ಬಂಡುಕೋರ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಹಾಗೂ ಆತನ ತಂಡವನ್ನು ಹತ್ತಿಕ್ಕಿಲ್ಲು ಅಂದಿನ ಪ್ರಧಾನಿ ಇಂದಿರಾಗಾಂಧಿ ನಡೆಸಿದ ಕಾರ್ಯಚರಣೆ ಆಪರೇಶನ್ ಬ್ಲೂ ಸ್ಟಾರ್. ಇದೀಗ ಆ ಕಾರ್ಯಾಚರಣೆಗೆ 37 ವರ್ಷ ತುಂಬಿದ ಬೆನ್ನಲ್ಲೇ ಸ್ವರ್ಣಮಂದಿರದಲ್ಲಿ ಪ್ರತ್ಯೇಕ ಖಲಿಸ್ತಾನ ಧ್ವಜ ಕಾಣಿಸಿಕೊಂಡಿದೆ. ಇತ್ತೀಚೆಗೆ ನಡೆದ ದೆಹಲಿ ಟ್ರಾಕ್ಟರ್ ರ್ಯಾಲಿಯಲ್ಲೂ ಖಲಿಸ್ತಾನ ಧ್ವಜ ಕಾಣಿಸಿಕೊಂಡಿತ್ತು.

ಕಳೆದ ವರ್ಷವೂ ಇದೇ ರೀತಿ ಖಲಿಸ್ತಾನ ಧ್ವಜ ಕಾಣಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಸ್ವರ್ಣಮಂದಿರದಲ್ಲಿ ಪಂಜಾಬ್ ಸರ್ಕಾರ 6,000 ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದೆ. ಇನ್ನು ಪಂಜಾಬ್‌ನಲ್ಲಿರುವ ಸಿಖ್ ಮಂದಿರಗಳಲ್ಲೂ ಪೊಲೀಸ್ ಪಡೆಯನ್ನು ಹೆಚ್ಚಿಸಿದೆ. ಈ ಮೂಲಕ ಯಾವುದೇ ಅಹಿತರ ಘಟನೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡಿದೆ. ಇದರ ನಡುವೆ ಖಲಿಸ್ತಾನ ಧ್ವಜ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.

 

ರೈತರ ಚಕ್ಕಾ ಜಾಮ್ ಪ್ರತಿಭಟನೆ ನಡುವೆ ಹಾರಾಡಿತಾ ಖಲಿಸ್ತಾನ್ ಭಿಂದ್ರನ್‌ವಾಲೆ ಧ್ವಜ?

ಭಾರತದಲ್ಲಿ ಖಲಿಸ್ತಾನಿ ಹೋರಾಟಕ್ಕೆ ಶತ್ರು ರಾಷ್ಟ್ರ ಪಾಕಿಸ್ತಾನ ನೆರವು ನೀಡುತ್ತಿದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಇದೀಗ ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗೋ ಮೂಲಕ ಪಾಕಿಸ್ತಾನದ ಕೈಕಟ್ಟಿದಂತಾಗಿದೆ. ಹೀಗಾಗಿ ಖಲಿಸ್ತಾನ ಹೋರಾಟ ಮೂಲಕ ಪಂಜಾಬ್‌ ಶಾಂತಿ ಕದಡುವ ಯತ್ನ ಪಾಕಿಸ್ತಾನ ಮಾಡುತ್ತಿದೆ ಅನ್ನೋ ಆರೋಪ ಬಲಗೊಳ್ಳುತ್ತಿದೆ.

ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ! 

ಈ ಆರೋಪದ ನಡುವೆ ಆಪರೇಶನ್ ಬ್ಲೂ ಸ್ಟಾರ್ 37 ವರ್ಷಾಚಣೆರೆ ಹಿನ್ನಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾನು ಇರುವವರೆಗೂ ಖಲಿಸ್ತಾನ್, ಪಾಕಿಸ್ತಾನ್ ಅಥವಾ ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಆಸ್ಪದ ನೀಡುವುದಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.