Asianet Suvarna News Asianet Suvarna News

ಆ.15ಕ್ಕೆ ಪೊಲೀಸ್ ವೇಷದಲ್ಲಿ ಕೆಂಪು ಕೋಟೆ ಮೇಲೆ ಖಲಿಸ್ತಾನ ಉಗ್ರ ದಾಳಿ ಸಾಧ್ಯತೆ; ಗುಪ್ತಚರ ಇಲಾಖೆ ಎಚ್ಚರಿಕೆ!

  • 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ
  • ಖಲಿಸ್ತಾನ ಉಗ್ರರರ ಟಾರ್ಗೆಟ್‌ನಲ್ಲಿ ಮೋದಿ ಧ್ವಜಾರೋಹಣ
  • ಪೊಲೀಸ್ ವೇಷದಲ್ಲಿ ಕೆಂಪು ಕೋಟೆ ಮೇಲೆ ಖಲಿಸ್ತಾನ ಉಗ್ರರ ದಾಳಿ ಸಾಧ್ಯತೆ
Khalistan terror could attempt to disrupt peace in Red fort ahead of Independence Day celebrations ckm
Author
Bengaluru, First Published Aug 13, 2021, 6:52 PM IST | Last Updated Aug 13, 2021, 6:52 PM IST

ನವದೆಹಲಿ(ಆ.13): ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಕಲ ತಯಾರಿ ಪೂರ್ಣಗೊಂಡಿದೆ. ಅಮೃತ ಮಹೋತ್ಸವ ಸಂಭ್ರಮಕ್ಕೆ ದೇಶ ಸಜ್ಜಾಗಿದೆ. ಆದರೆ ಭಾರತದ ಸಂಭ್ರಮಕ್ಕೆ ಅಡ್ಡಿಯಾಗಲು ಉಗ್ರರು ಪ್ಲಾನ್ ಮಾಡಿದ್ದಾರೆ ಅನ್ನೋ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ.

ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ!

ಸ್ವಾತಂತ್ರ್ಯ ದಿನಾಚರಣೆಗೆ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಹೈಸೆಕ್ಯೂರಿಟಿ ನಿಯೋಜಿಸಲಾಗಿದೆ.  ಕೆಂಪು ಕೋಟೆ ಸೇರಿದಂತೆ ಸಂಪೂರ್ಣ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಕೆಂಪು ಕೋಟೆ ಮೇಲೆ ದಾಳಿ ನಡೆಸಲು ಖಲಿಸ್ತಾನ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

 

ಭದ್ರತೆ ಹೆಚ್ಚಿರುವ ಕಾರಣ ಖಲಿಸ್ತಾನ ಉಗ್ರರು ಪೊಲೀಸ್ ವೇಷದಲ್ಲಿ ಕೆಂಪು ಕೋಟೆ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನತ್ತೆ ಖಲಿಸ್ತಾನ ಉಗ್ರರು ಪ್ರಯತ್ನಿಸುವ ಸಾಧ್ಯತೆ ಇದೆ. ಇದಕ್ಕಾಗಿ ಖಲಿಸ್ತಾನ ಸಂಘಟನೆ ಸಂಚು ರೂಪಾಸಿದ್ದಾರೆ ಎಂದು ಇಂಟೆಲಿಜೆನ್ಸ್ ವರದಿ ನೀಡಿದೆ.

ಸ್ವಾತಂತ್ರ್ಯ ದಿನಕ್ಕೂ ಮೊದಲು ರಾಷ್ಟ್ರಪತಿ ಕೋವಿಂದ್‌ಗೆ VR9 ಭದ್ರತೆಯ ಹೊಸ ಮರ್ಸಿಡಿಸ್ ಕಾರು!

ಇದರ ಬೆನ್ನಲ್ಲೇ ದೆಹಲಿಯಲ್ಲಿ ಭದ್ರತಾ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.  ಪಾಕಿಸ್ತಾನ ಪೋಷಿತ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಕೂಡ ದೆಹಲಿ ಮೇಲೆ ದಾಳಿ ಮಾಡುವ ಸಾಧ್ಯತೆ ಕುರಿತು ಇಲಾಖೆ ಮಾಹಿತಿ ನೀಡಿತ್ತು. ಈ ಕುರಿತು ಭದ್ರತಾ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ದೆಹಲಿ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ರೈತ ಸಂಘಟನೆ ಆಯೋಜಿಸಿ ಟ್ರಾಕ್ಟರ್ ರ್ಯಾಲಿ ವೇಳೆ ಖಲಿಸ್ತಾನ ಉಗ್ರರು ರೈತರ ಸೋಗಿನಲ್ಲಿ ದಾಳಿ ಮಾಡಿರುವ ಕುರಿತು ತನಿಖೆ ನಡೆಯುತ್ತಿದೆ. ಇದೀಗ ಪೊಲೀಸರ ಸೋಗಿನಲ್ಲಿ ದಾಳಿಗೆ ಸಂಚು ನಡೆದಿದೆ.

75th independence day; 1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ!

ಸಿಸಿಟಿವಿ ಸೇರಿದಂತೆ ಎಲ್ಲಾ ತಂತ್ರಜ್ಞಾನ ಬಳಸಿ ದೆಹಲಿಯಲ್ಲಿ ಕಟ್ಟೆಚ್ಚೆರ ವಹಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ದೆಹಲಿ ಮಾತ್ರವಲ್ಲ, ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಉಗ್ರರು ಒಳನಸುಳಿ ವಿದ್ವಂಸಕ ಕೃತ್ಯ ಎಸಗುವ ಸಾಧ್ಯತೆ ಕುರಿತು ಭದ್ರತಾ ಅಧಿಕಾರಿಗಳಿಗೆ ಸೂಚನೆ ಸಿಕ್ಕಿದೆ. ಹೀಗಾಗಿ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು, ಮುಂಬೈ, ಜೈಪುರ್, ಅಹಮ್ಮದಾಬಾದ್, ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಯಾವ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios