* ಟ್ರ್ಯಾಕ್ಟರ್‌ ದಾಳಿ ರೀತಿಯ ಅಹಿತಕರ ಘಟನೆ ತಡೆಗೆ ಮುಂಜಾಗ್ರತೆ* ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ* ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಭಾರೀ ಬಿಗಿಭದ್ರತೆ

ನವದೆಹಲಿ(ಆ.09): ಗಣರಾಜ್ಯೋತ್ಸವದ ವೇಳೆ ರೈತರು ಟ್ರಾಕ್ಟರ್‌ ರಾರ‍ಯಲಿ ನಡೆಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿರುವ ದೆಹಲಿ ಪೊಲೀಸರು ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಪ್ರವೇಶ ದ್ವಾರದ ಬಳಿ ಹಡಗಿನ ಬೃಹತ್‌ ಕಂಟೇನರ್‌ಗಳನ್ನು ಗೋಡೆಗಳಂತೆ ಪೊಲೀಸರು ನಿಲ್ಲಿಸಿದ್ದಾರೆ. ಜೊತೆಗೆ ಕಂಟೇನರ್‌ಗಳನ್ನು ಅಲಂಕರಿಸಿ, ಬಣ್ಣಗಳನ್ನು ಬಳಿಯಲಾಗಿದೆ. ಜಮ್ಮು- ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್‌ ದಾಳಿಯ ಕಾರಣದಿಂದಾಗಿಯೂ ರಾಷ್ಟ್ರ ರಾಜಧಾನಿ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to load tweet…

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನೂರಾರು ಟ್ರಾಕ್ಟರ್‌ಗಳಲ್ಲಿ ಆಗಮಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಆಸ್ತಿ- ಪಾಸ್ತಿಗೆ ಹಾನಿ ಸಂಭವಿಸಿತ್ತು.