ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡು ಭಾಗವಹಿಸಿದ ಕಾರ್ಯಕ್ರಮದಲ್ಲಿ ಉಗ್ರ ಸಂಘಟನೆ ಖಲಿಸ್ತಾನ ಪರ ಘೋಷಣೆ ಕೂಗಲಾಗಿದೆ. ಈ ಘಟನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಕೆನಡಾ ರಾಯಭಾರಿಗೆ ಸಮನ್ಸ್ ನೀಡಿದೆ.
ಟೊರಂಟೊ(ಏ.29) ಕೆನಾಡದಲ್ಲಿ ಅತೀ ಹೆಚ್ಚಿನ ಸಿಖ್ ಸಮುದಾಯ ನೆಲೆಸಿದೆ. ಹೀಗಾಗಿ ಕೆನಡಾದಲ್ಲಿ ಸಿಖ್ ಆಚರಣೆ, ಸಂಭ್ರಮ ಭಾರತದಷ್ಟೇ ವಿಜ್ರಂಭಣೆಯಿಂದ ನಡೆಯುತ್ತದೆ. ಇದರ ಜೊತೆಗೆ ಭಾರತದಲ್ಲಿ ಇದೀಗ ಪುಟಿದೆದ್ದಿರುವ ಖಲಿಸ್ತಾನ ಉಗ್ರ ಸಂಘಟನೆಯ ಆಂದೋಲನಕ್ಕೆ ನೆಲೆ ನೀಡಿದ್ದು ಇದೇ ಕೆನಡಾ ಅನ್ನೋ ಆರೋಪವೂ ಇದೆ. ಇದೀಗ ಕೆನಡಾ ಹಾಗೂ ಭಾರತ ನಡುವಿನ ಸಂಬಂಧದ ನಡುವೆ ಮತ್ತೊಮ್ಮೆ ಇದೇ ಖಲಿಸ್ತಾನ್ ಬಿರುಕು ಮೂಡಿಸುವ ಸಾಧ್ಯತೆಗಳು ಗೋಚರಿಸುತ್ತಿದೆ. ಕೆನಡಾ ರಾಜಧಾನಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡು ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಖಲಿಸ್ತಾನ್ ಪರ ಘೋಷಣೆ ಕೂಗಲಾಗಿದೆ. ಇದು ಘಟನೆಗೆ ಭಾರತ ಆಕ್ರೋಶ ವ್ಯಕ್ತಪಡಿಸಿರುವ ಭಾರತ, ಕೆನಡಾ ರಾಯಭಾರಿಗೆ ಸಮನ್ಸ್ ನೀಡಿದೆ.
ಟೊರೊಂಟೋದಲ್ಲಿ ಖಾಲ್ಸಾ ದಿನಾಚರಣೆ ಅಂಗವಾಗಿ ಸಿಖ್ ಸಮುದಾಯ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡು ಸೇರಿದಂತೆ ಸರ್ಕಾರದ ಕೆಲ ಸಚಿವರು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಟ್ರುಡು ಮಾತನಾಡುತ್ತಿದ್ದಂತೆ ಉಗ್ರ ಸಂಘಟನೆ ಖಲಿಸ್ತಾನಿ ಪರ ಘೋಷಣೆಗಳು ಮೊಳಗಿದೆ.
ತನ್ನ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ: ಕೆನಡಾ ಆರೋಪ ತಳ್ಳಿ ಹಾಕಿದ ಭಾರತ
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರುಡು, ಕೆನಾಡದಲ್ಲಿರುವ ಸಿಖ್ ಸಮುದಾಯದ ಹಕ್ಕು, ಸ್ವಾತಂತ್ರ್ಯವನ್ನು ಕೆನಡಾ ಸರ್ಕಾರ ರಕ್ಷಿಸಲಿದೆ ಎಂದಿದ್ದಾರೆ. ಟ್ರುಡು ಭಾಷಣದ ವೇಳೆ ಕಾರ್ಯಕ್ರಮದಲ್ಲಿದ್ದ ಖಲಿಸ್ತಾನ್ ಪರ ಘೋಷಣೆ ಕೂಗಿದ್ದಾರೆ. ಟ್ರುಡು ಸರ್ಕಾರದ ಸಚಿವರು ಭಾಷಣದ ವೇಳೆಯೂ ಖಲಿಸ್ತಾನ ಪರ ಘೋಷಣೆ ಕೇಳಿಬಂದಿದೆ.
ಕೆನಾಡದಲ್ಲಿ 8 ಲಕ್ಷಕ್ಕೂ ಅಧಿಕ ಸಿಖ್ ಸಮುದಾಯದ ಮಂದಿ ವಾಸವಿದ್ದಾರೆ. ಕೆನಡಾ ಹಾಗೂ ಸಿಖ್ ಸಮುದಾಯದ ನಡುವೆ ಆತ್ಮೀಯತೆ ಇದೆ. ಸಿಖ್ ಸಮುದಾಯಕ್ಕೆ ಕೆನಡಾ ಎಲ್ಲಾ ರೀತಿಯ ಸಹಕಾರ, ರಕ್ಷಣೆ ನೀಡಲಿದೆ ಎಂದು ಟ್ರುಡು ಹೇಳಿದ್ದಾರೆ. ತಾರತಮ್ಮ, ದ್ವೇಷಗಳಿಂದ ಸಿಖ್ ಸಮುದಾಯವನ್ನು ಕೆನಡಾ ಸರ್ಕಾರ ರಕ್ಷಿಸಲಿದೆ ಎಂದಿದ್ದಾರೆ.
ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಬಂಧಿಸಿ: ಕೆನಡಾದಲ್ಲಿ ಇರುವ ಬಗ್ಗೆ ಮಾಹಿತಿ ರವಾನಿಸಿದ ಭಾರತ
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಸೃಷ್ಟಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತ ಸರ್ಕಾರ , ಭಾರತದಲ್ಲಿರುವ ಕೆನಡಾ ರಾಯಭಾರಿಗೆ ಸಮನ್ಸ್ ನೀಡಿದೆ. ಇದು ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತರಲಿದೆ ಅನ್ನೋ ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಭಾರತ ಹಲವು ಬಾರಿ ಕೆನಡಾ ರಾಯಭಾರಿ ಅಧಿಕಾರಿಗಳನ್ನು ಕರೆಸಿ ಚಾಟಿ ಬೀಸಿದೆ. ಪದೇ ಪದೇ ಖಲಿಸ್ತಾನ, ಭಾರತ ವಿಚಾರದಲ್ಲಿ ಮೂಗು ತೂರಿಸಿದ ಕಾರಣ ಭಾರತ ಚಾಟಿ ಬೀಸಿತ್ತು. ಇದೀಗ ಮತ್ತೆ ಕೆನಡಾ ಭಾರತವನ್ನು ಕೆರಳಿಸುವ ಪ್ರಯತ್ನ ಮಾಡಿದೆ.
