Asianet Suvarna News Asianet Suvarna News

ಮೊಬೈಲ್ ಕಸಿದು ತಮಾಷೆ ಮಾಡಿದಕ್ಕೆ ಗೆಳೆಯನ ಮೇಲೆ ಮಚ್ಚಿನಿಂದ ಹಲ್ಲೆ!

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಒರ್ವನಿಗೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ ಪ್ರಕರಣದ ಎಲ್ಲ ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

A young man attacked by his friends or a trivial reason accused arrested at madhur bar bapujinagar bengaluru rav
Author
First Published May 18, 2024, 11:18 AM IST

ಬೆಂಗಳೂರು (ಮೇ.18): ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಒರ್ವನಿಗೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ ಪ್ರಕರಣದ ಎಲ್ಲ ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬಾಪೂಜಿನಗರದ ಮಧುರ ಬಾರ್ ಬಳಿ ಮೂರು ದಿನದ ಹಿಂದೆ ನಡೆದ ಘಟನೆ. ವಿಜಯ್ ಎಂಬಾತನ ಮೇಲೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದ ಕಿರಾತರು. ಹತ್ಯೆ ಬಳಿಕ ಪರಾರಿಯಾಗಿದ್ದ ಮನೋಜ್, ತರುಣ್, ಕಿರಣ್ ಓರ್ವ ಅಪ್ರಾಪ್ತನ ಬಂಧಿಸಲಾಗಿದೆ.

ಬೆಂಗಳೂರು: ಜಗಳದ ವೇಳೆ ತಳ್ಳಾಟ, ವಿದ್ಯುತ್‌ ತಾಗಿ ಪೋಕ್ಸೋ ಆರೋಪಿ ಸಾವು

ಘಟನೆ ಹಿನ್ನೆಲೆ

ಎಲ್ಲರೂ ಸ್ನೇಹಿತರೇ ಆಗಿದ್ದಾರೆ. ತಿಂಗಳ ಹಿಂದೆ ವಿಜಯ್ ಮೊಬೈಲ್ ಕಸಿದುಕೊಂಡು ವಾಪಸ್ ಕೊಟ್ಟು ತಮಾಷೆ ಮಾಡಿದ್ದ ಮನೋಜ್. ಇದಾದ ಬಳಿಕ ಕಳೆದ ವಾರ ಒಂದೇ ಬಾರ್‌ನಲ್ಲಿ ಕುಡಿಯಲು ಸೇರಿದ್ದ ಮನೋಜ್, ವಿಜಯ್. ಈ ವೇಳೆ ಮೊಬೈಲ್ ಕಸಿದುಕೊಂಡ ವಿಚಾರ ಪ್ರಸ್ತಾಪಿಸಿ ಮತ್ತೆ ತಮಾಷೆ ಮಾಡಿದ್ದ. ಇದರಿಂದ ಕೋಪಗೊಂಡು ಮೂವರನ್ನ ಕರೆದುಕೊಂಡು ಬಂದು ಹಲ್ಲೆ ನಡೆಸಿದ ಮನೋಜ್. ನನಗೇ ಅವಮಾನ ಮಾಡ್ತಿಯಾ ಅಂತಾ ವಿಜಯ್ ಮೇಲೆ ಮಚ್ಚಿನಿಂದ ಹೊಡೆದಿದ್ದ ಆರೋಪಿ. ಮಚ್ಚಿನೇಟಿನಿಂದ ತೀವ್ರ ಗಾಯಗೊಂಡಿದ್ದ ವಿಜಯ್ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ.

Latest Videos
Follow Us:
Download App:
  • android
  • ios