ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಬಂಧಿಸಿ: ಕೆನಡಾದಲ್ಲಿ ಇರುವ ಬಗ್ಗೆ ಮಾಹಿತಿ ರವಾನಿಸಿದ ಭಾರತ
ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಬಂಧಿಸಿ ಎಂದು ಕೆನಡಾಗೆ ಭಾರತ ಮನವಿ ಮಾಡಿದೆ. ಆತನ ಇರುವಿಕೆಯ ಮಾಹಿತಿ ರವಾನಿಸಿದೆ.
ನವದೆಹಲಿ (ಮಾ.25): ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಕೆನಡಾದಲ್ಲಿ ಖಲಿಸ್ತಾನಿ ಟೈಗರ್ ಫೋರ್ಸ್ ಉಗ್ರ ಸಂಘಟನೆಯ ಮುಂದಾಳತ್ವ ವಹಿಸಿಕೊಂಡು ಭಾರತದಲ್ಲಿ ಹಲವು ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಖಲಿಸ್ತಾನಿ ಉಗ್ರ ಅರ್ಶ್‌ದೀಪ್ ಸಿಂಗ್ ಗಿಲ್‌ನನ್ನು ಬಂಧಿಸುವಂತೆ ಕೆನಡಾ ಸರ್ಕಾರಕ್ಕೆ ಭಾರತ ಮನವಿ ಮಾಡಿದೆ.
ಮೋದಿ ತಾಯಿ ಬಗ್ಗೆ ತಮಿಳುನಾಡು ಸಚಿವ ಕೀಳುನುಡಿ: ವಿವಾದ
ಅರ್ಶ್‌ದೀಪ್ ಕೆನಡಾದಲ್ಲಿ ನೆಲೆಸಿರುವ ಸ್ಥಳ, ಆತ ಬಳಸುವ ವಾಹನ, ಇತ್ತೀಚಿನ ಭಾವಚಿತ್ರ ಸೇರಿದಂತೆ ಆತನ ಹಲವು ಮಾಹಿತಿಗಳನ್ನು ಕೆನಡಾ ಸರ್ಕಾರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ರವಾನಿಸಿದ್ದು, ಆತನನ್ನು ಬಂಧಿಸಬೇಕೆಂದು ಮನವಿ ಮಾಡಿದೆ.
ಐಸಿಸ್ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್ ಅಲಿ ಬಂಧನ
ಯಾರು ಈ ಅರ್ಶ್‌ದೀಪ್ ಸಿಂಗ್?: ಅರ್ಶ್‌ದೀಪ್ 2020ರಲ್ಲಿ ಕೆನಡಾಕ್ಕೆ ತೆರಳಿ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ಭಾರತ ಸರ್ಕಾರ ಕಳೆದ ವರ್ಷ ಭಯೋತ್ಪಾದಕ ಎಂಬುದಾಗಿಯೂ ಘೋಷಿಸಿತ್ತು. ಪ್ರಮುಖವಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಂಜಾಬ್‌ನ ಕಾಂಗ್ರೆಸ್ ನಾಯಕ ಬಲ್ಜೀಂದರ್ ಸಿಂಗ್ ಬಲ್ಲಿಯನ್ನು ಮನೆಯಲ್ಲಿ ಗುಂಡಿಕ್ಕಿ ಕೊಂದು ಅದರ ಹೊಣೆ ಹೊತ್ತಿದ್ದ. ಅಲ್ಲದೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಮತ್ತು ಐಎಸ್‌ಐ ಜೊತೆ ಸೇರಿ ಭಾರತದ ಹಲವು ಧಾರ್ಮಿಕ ನಾಯಕರನ್ನು ಕೊಲ್ಲುವ ಸಂಚು ರೂಪಿಸಿದ್ದ.