Asianet Suvarna News Asianet Suvarna News

ಪಶ್ಚಿಮ ಬಂಗಾಳ ಸಿಎಂ ಮಮತಾ ರೇಟ್‌ ಎಷ್ಟು ಎಂದ ನ್ಯಾಯಮೂರ್ತಿ ಅಭಿಜಿತ್‌ಗೆ ನೋಟಿಸ್‌

ಮಮತಾ ಬ್ಯಾನರ್ಜಿಯ ರೇಟು 10 ಲಕ್ಷ ರು.ನಾ ಎಂದ ಅಭಿಜಿತ್‌ ಗಂಗೋಪಾಧ್ಯಾಯ ವಿರುದ್ಧ ಚು. ಆಯೋಗಕ್ಕೆ ಟಿಎಂಸಿ ದೂರು

ECI issues notice to BJP's Abhijit Gangopadhyay over making offensive comments against Mamata Banerjee gow
Author
First Published May 18, 2024, 9:50 AM IST

ಕೋಲ್ಕತಾ (ಮೇ.18): ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರೇಟ್‌ ಎಷ್ಟು?’ ಎಂದು ಕೇಳಿ ವಿವಾದಕ್ಕೀಡಾಗಿದ್ದ ಮಾಜಿ ನ್ಯಾಯಮೂರ್ತಿಯೂ ಆಗಿರುವ ತಮ್ಲುಕ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೂಲಿ ವಿರುದ್ಧ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಇದರ ಬೆನ್ನಲ್ಲೇ ಅವರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ.

ಟಿಎಂಸಿ ನಾಯಕ ಡೆರಿಕ್‌ ಓ ಬ್ರಿಯಾನ್‌ ಸಲ್ಲಿಸಿರುವ ದೂರಿನಲ್ಲಿ, ‘ಗೌರವಾನ್ವಿತ ಪದವಿಯಲ್ಲಿದ್ದ ಮಾಜಿ ನ್ಯಾ. ಅಭಿಜಿತ್‌ ಗಂಗೂಲಿ ಅವರು, ‘ಮಮತಾ ನಿಮ್ಮ ರೇಟ್‌ ಎಷ್ಟು? ಮಮತಾ 10 ಲಕ್ಷ ರು.ಗೆ ಮಾರಾಟವಾಗಿದ್ದೀರಿ’ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ರೀತಿ ಮಹಿಳೆಯೊಬ್ಬರ ಘನತೆಗೆ ಕುಂದು ತಂದ ಕಾರಣಕ್ಕಾಗಿ ಅಭಿಜಿತ್‌ ಅವರನ್ನು ಚುನಾವಣಾ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು’ ಎಂದು ಮನವಿ ಮಾಡಿದ್ದಾರೆ. ಅಭಿಜಿತ್‌ ಗಂಗೂಲಿ ಪ್ರಸ್ತುತ ತಮ್ಲುಕ್‌ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

Swati Maliwal assault case ಕೇಜ್ರಿವಾಲ್ ಆಪ್ತನಿಂದ ಹಲ್ಲೆಗೊಳಗಾದ ಸಂಸದೆ ಸ್ವಾತಿ ದಾಖಲಿಸಿದ್ದ ದೂರಿನ ವಿವರ ಬಹಿರಂಗ

ಗಂಗೂಲಿಯವರ ಹೇಳಿಕೆಗಳು ತೃಣಮೂಲ ಕಾಂಗ್ರೆಸ್‌ನಿಂದ ಖಂಡನೆಗೆ ಕಾರಣವಾಯಿತು. ಅಭಿಜಿತ್ ಗಂಗೂಲಿಯವರ ಈ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ ಟಿಎಂಸಿ,  ಅಭಿಜಿತ್ ಸ್ತ್ರೀದ್ವೇಷಿ , ನಾರಿ ವಿರೋಧಿಗಳ ಏಜೆಂಟ್ ಎಂದು ಕರೆದಿದೆ, ಬಂಗಾಳದ ತಾಯಂದಿರು ಮತ್ತು ಸಹೋದರಿಯರು ಅವರನ್ನು ಎಂದಿಗೂ ಸಹಿಸುವುದಿಲ್ಲ. ಅವರ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ತಕ್ಷಣ ಮಧ್ಯಪ್ರವೇಶಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದೆ.

ಪುತ್ರ ನಿಮ್ಮ ಸುಪರ್ದಿಗೆ ಒಪ್ಪಿಸಿದ್ದೇನೆ, ಆಶೀರ್ವದಿಸಿ ಗೆಲ್ಲಿಸಿ: ಸೋನಿಯಾ ಗಾಂಧಿ ಭಾವುಕ ಮಾತು

ತೃಣಮೂಲ ಕಾಂಗ್ರೆಸ್ ನಾಯಕ ಸಂತಾನು ಸೇನ್ ಕೂಡ ಗಂಗೂಲಿ ಹೇಳಿಕೆಯನ್ನು ಖಂಡಿಸಿದ್ದು, ಮಾಜಿ ನ್ಯಾಯಾಧೀಶರೊಬ್ಬರು "ಮಹಿಳಾ ಮುಖ್ಯಮಂತ್ರಿಯನ್ನು ನಿಂದಿಸಲು" ಇಂತಹ ಪದಗಳನ್ನು ಬಳಕೆ ಮಾಡುವುದು "ನಾಚಿಕೆಗೇಡು" ಎಂದು ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಮಹಿಳೆಯರಿಗೆ ಈ ರೀತಿ ಅವಮಾನ ಆಗುವುದು ಬಿಜೆಪಿಯವರ ಗ್ಯಾರಂಟಿ  ಎಂದೂ ಟೀಕಿಸಿದ್ದಾರೆ.

Latest Videos
Follow Us:
Download App:
  • android
  • ios