ದೇಶದ ಸಂವಿಧಾನದ ಮೂಲ ವಿನ್ಯಾಸಕ್ಕೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು’ ಪ್ರಕಟವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾನೂನು ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಆ ಪ್ರಕರಣದ ಸಂಪೂರ್ಣ ವಾದ ಹಾಗೂ ವಿವರಗಳುಳ್ಳ ವೆಬ್‌ ಪುಟವನ್ನು ಸುಪ್ರೀಂಕೋರ್ಚ್‌ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಚ್‌ ವೆಬ್‌ಸೈಟಿನಲ್ಲಿ ಈ ಪುಟ ಲಭ್ಯವಿದೆ.

ಪಿಟಿಐ ನವದೆಹಲಿ (ಏ.25) : ದೇಶದ ಸಂವಿಧಾನದ ಮೂಲ ವಿನ್ಯಾಸಕ್ಕೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು’ ಪ್ರಕಟವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾನೂನು ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಆ ಪ್ರಕರಣದ ಸಂಪೂರ್ಣ ವಾದ ಹಾಗೂ ವಿವರಗಳುಳ್ಳ ವೆಬ್‌ ಪುಟವನ್ನು ಸುಪ್ರೀಂಕೋರ್ಚ್‌ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ವೆಬ್‌ಸೈಟಿನಲ್ಲಿ ಈ ಪುಟ ಲಭ್ಯವಿದೆ.

Add Asianetnews Kannada as a Preferred SourcegooglePreferred

ದೇಶದ ಸಂವಿಧಾನದಲ್ಲಿರುವ ಯಾವುದೇ ಅಂಶಗಳಿಗೆ ಬೇಕಾದರೂ ಸಂಸತ್ತು ತಿದ್ದುಪಡಿ ತರಬಹುದು ಎಂಬ ಅಭಿಪ್ರಾಯ 1973ರವರೆಗೂ ಇತ್ತು. ಆದರೆ, ಕಾಸರಗೋಡಿನ ಕೇಶವಾನಂದ ಭಾರತಿ(Kesavananda Bharati Case) ಸ್ವಾಮಿಗಳು ಭೂಸುಧಾರಣೆ ಕಾಯ್ದೆಯಡಿ ಕೇರಳ ಸರ್ಕಾರ ತಮ್ಮ ಮಠದ ಆಸ್ತಿ ವಶಪಡಿಸಿಕೊಳ್ಳಲು ಬಂದಾಗ ಧಾರ್ಮಿಕ ಹಕ್ಕಿನ ಪ್ರಶ್ನೆ ಮುಂದಿಟ್ಟು ಕೋರ್ಟ್ ಹೋಗಿದ್ದರು.

ವೆಬ್‌ಪುಟವನ್ನು ಇಲ್ಲಿ ಪರಿಶೀಲಿಸಿ: http://judgments.ecourts.gov.in/KBJ/

ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ 13 ನ್ಯಾಯಾಧೀಶರ ಪೀಠ 7:6 ಬಹುಮತದಲ್ಲಿ ಕೇಶವನಾಂದ ಸ್ವಾಮಿಗಳ ಪರ ತೀರ್ಪು ನೀಡಿತ್ತು. ಆ ತೀರ್ಪಿನಲ್ಲಿ ‘ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತಿಗೆ ಅಧಿಕಾರ ಇದೆಯಾದರೂ, ಸಂವಿಧಾನದ ಮೂಲ ವಿನ್ಯಾಸವನ್ನು ರೂಪಿಸಿರುವ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು( fundamental rights ), ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ ವಿಂಗಡಣೆ, ಜಾತ್ಯತೀತತೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿ ತರುವಂತಿಲ್ಲ’ ಎಂದು ಹೇಳಲಾಗಿತ್ತು. ಅದು ‘ಮೂಲ ವಿನ್ಯಾಸ’ ತೀರ್ಪು ಅಥವಾ ‘ಮೂಲಭೂತ ಹಕ್ಕುಗಳ’ ತೀರ್ಪು ಎಂದು ಖ್ಯಾತಿ ಪಡೆದಿದೆ.

ಗರ್ಭಪಾತ ಬಯಸುವ ಅಪ್ರಾಪ್ತರ ಗುರುತು ಬಹಿರಂಗಪಡಿಸಬೇಕಿಲ್ಲ, ಐತಿಹಾಸಿಕ ತೀರ್ಪಿನಲ್ಲಿದೆ ಸ್ಪಷ್ಟ ಉಲ್ಲೇಖ!

ಈ ಐತಿಹಾಸಿಕ ತೀರ್ಪಿಗೆ (historical judgment)ಸೋಮವಾರ 50 ವರ್ಷ ಸಂದ ಹಿನ್ನೆಲೆಯಲ್ಲಿ ಸಂಶೋಧಕರು, ಕಾನೂನು ಅಭ್ಯಾಸಿಗಳು ಹಾಗೂ ಆಸಕ್ತರಿಗೆ ಅನುಕೂಲವಾಗಲಿ ಎಂದು ಪ್ರಕರಣದ ಎಲ್ಲಾ ವಾದಗಳು, ಲಿಖಿತ ವಾದಗಳು ಹಾಗೂ ತೀರ್ಪನ್ನು ಒಳಗೊಂಡ ವೆಬ್‌ ಪುಟವನ್ನು ಸುಪ್ರಿಂಕೋರ್ಚ್‌ ಬಿಡುಗಡೆ ಮಾಡಿದೆ.

ಐತಿಹಾಸಿಕ ತೀರ್ಪು ನೀಡಿದ ಪಾಕ್‌ ಕೋರ್ಟ್‌, ಅತ್ಯಾಚಾರ ಸಂತ್ರಸ್ತ ಮಹಿಳೆಯ ಕನ್ಯತ್ವ ಪರೀಕ್ಷೆ ರದ್ದು!