Asianet Suvarna News Asianet Suvarna News

ಐತಿಹಾಸಿಕ ತೀರ್ಪು ನೀಡಿದ ಪಾಕ್‌ ಕೋರ್ಟ್‌, ಅತ್ಯಾಚಾರ ಸಂತ್ರಸ್ತ ಮಹಿಳೆಯ ಕನ್ಯತ್ವ ಪರೀಕ್ಷೆ ರದ್ದು!

ರೇಪ್‌ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಕನ್ಯತ್ವ ಪರೀಕ್ಷೆ ಮಾಡುವ ನಿಯಮವನ್ನು ಪಾಕಿಸ್ತಾನದ ಲಾಹೋರ್‌ ಹೈಕೋರ್ಟ್‌ ರದ್ದು ಮಾಡಿದೆ. ಈ ಅಭ್ಯಾಸ ಕಾನೂನುಬಾಹಿರ. ಇದು "ಯಾವುದೇ ವೈದ್ಯಕೀಯ ಆಧಾರವನ್ನು ಹೊಂದಿಲ್ಲ" ಮತ್ತು "ಮಹಿಳೆಯರ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತದೆ ಮತ್ತು ಆದ್ದರಿಂದ ಬದುಕುವ ಹಕ್ಕು ಮತ್ತು ಘನತೆಯ ಹಕ್ಕಿಗೆ ವಿರುದ್ಧವಾಗಿದೆ" ಎಂದು ಹೇಳಿದೆ.
 

historic judgment in Pakistan Lahore High Court has Outlaws Virginity Tests For Rape Survivors san
Author
First Published Sep 6, 2022, 4:28 PM IST

ಲಾಹೋರ್‌ (ಸೆ. 6): ತನ್ನ ಐತಿಹಾಸಿಕ ನಿರ್ಧಾರ ಮಾಡಿರುವ ಪಾಕಿಸ್ತಾನದ ಲಾಹೋರ್‌ ಹೈ ಕೋರ್ಟ್‌, ರೇಪ್‌ ಪ್ರಕರಣದ ವೇಳೆ ಅತ್ಯಾಚಾರ ಸಂತ್ರಸ್ತೆಯ ಕನ್ಯತ್ವ ಪರೀಕ್ಷೆಯನ್ನು ರದ್ದು ಮಾಡಿದೆ. ಪಂಜಾಬ್‌ ಪಾಂತ್ರ್ಯದ ಈ ಕೋರ್ಟ್‌, ಈ ಸಂಪೂರಣ ಅಭ್ಯಾಸವೇ ಕಾನೂನು ಬಾಹಿರವಾಗಿದೆ. ಇದಕ್ಕೆ ಯಾವುದೇ ವೈದ್ಯಕೀಯ ಆಧಾರವೂ ಇಲ್ಲ. ಅದಲ್ಲದೆ, ಸಂತ್ರಸ್ತ ಮಹಿಳೆಯ ವೈಯಕ್ತಿಕ ಗೌರವವನ್ನು ಹಾಳು ಮಾಡುವುದಲ್ಲದೆ, ಆಕೆಯ ಬದುಕುವ ಹಕ್ಕು ಮತ್ತು ಘನತೆಯ ಹಕ್ಕಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ತೀರ್ಪುನೀಡಿದೆ. ತೀರ್ಪನ್ನು ನೀಡಿದ ನ್ಯಾಯಮೂರ್ತಿ ಆಯೇಷಾ ಮಲಿಕ್ ಅವರು ತಮ್ಮ ತೀರ್ಪಿನಲ್ಲಿ ಕನ್ಯತ್ವ ಪರೀಕ್ಷೆಯು ಅತ್ಯಂತ ಅಮಾನುಷವಾಗಿದೆ. ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಅಧಾರವೂ ಇದಕ್ಕೆ ಇಲ್ಲ. ಅದರೆ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವೈದ್ಯಕೀಯ ಪ್ರೋಟೋಕಾಲ್‌ಗಳ ಹೆಸರಿನಲ್ಲಿ ಕನ್ಯತ್ವ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಪರೀಕ್ಷಕರು ಅಂತಹ ಪರೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅವರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಪ್ರಸ್ತುತ ಪರೀಕ್ಷೆಯನ್ನು ಟು ಫಿಂಗರ್‌ ಟೆಸ್ಟ್‌ ಎಂದು ಕರೆಯಲಾಗುತ್ತದೆ. ಇದರಲ್ಲಿ ವೈದ್ಯಕೀಯ ಪರೀಕ್ಷಕರು, ಸಾಮಾನ್ಯವಾಗಿ ಆದರೆ ಯಾವಾಗಲೂ ಸ್ತ್ರೀಯಲ್ಲ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಕನ್ಯಾಪೊರೆ ಮತ್ತು ಯೋನಿ ಪ್ರದೇಶವನ್ನು ಅವರು ಕನ್ಯೆಯರೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡುತ್ತಾರೆ.

ಅತ್ಯಾಚಾರದಂಥ ಪ್ರಕರಣದಲ್ಲಿ (Rape Survivor), ಅತ್ಯಾಚಾರ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಕನ್ಯತ್ವ ಪರೀಕ್ಷೆ (Virginity Test) ಎನ್ನುವುದು ಕಾನೂನು ಬಾಹಿರವಾಗಿದ್ದರೂ, ಇಂದಿಗೂ ವಿಶ್ವದ ಕನಿಷ್ಠ 20 ದೇಶಗಳಲ್ಲಿ ಕನ್ಯತ್ವ ಪರೀಕ್ಷೆಯನ್ನು ಅತಿಯಾಗಿ ಬಳಕೆ ಮಾಡಲಾಗುತ್ತಿದೆ ಎಂದು 2018ರಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿತ್ತು.

ಇತರ ವಕೀಲರೊಂದಿಗೆ ಇಂತಹ ಪರೀಕ್ಷೆಗಳ ವಿರುದ್ಧ ಅರ್ಜಿ ಸಲ್ಲಿಸಿದ ಸಹರ್ ಬಂಡಿಯಲ್, ಕನ್ಯಾಪೊರೆಯನ್ನು ಮಹಿಳೆಯ "ಶುದ್ಧತೆ" ಯ ಸೂಚಕವಾಗಿ ಪರಿಗಣಿಸಲಾಗುತ್ತದೆ. "ಲೈಂಗಿಕತೆಗೆ ಒಗ್ಗಿಕೊಂಡಿರುವ" ಮಹಿಳೆಯರನ್ನು ಗುರಿಯಾಗಿಸಲು ಅವರು ಕಾರಣವಾಗುತ್ತಾರೆ, ಪರೀಕ್ಷೆಗಳು ನ್ಯಾಯ ಪ್ರಕ್ರಿಯೆಗೆ ಅಡ್ಡಿಯಾಗುತ್ತವೆ ಎಂದು ಅವರು ಹೇಳಿದ್ದರು. ಪರೀಕ್ಷೆಗಳ ವಿರುದ್ಧ ಅರ್ಜಿಯನ್ನು ಮಾರ್ಚ್ ಮತ್ತು ಜೂನ್ 2020 ರಲ್ಲಿ ಕಾರ್ಯಕರ್ತರು, ವಕೀಲರು, ಪತ್ರಕರ್ತರು ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರೊಂದಿಗೆ ಇಬ್ಬರು ವಕೀಲರು ಸಲ್ಲಿಸಿದ್ದಾರೆ. ಪಂಜಾಬ್ ನ್ಯಾಯಾಲಯವು ಟು ಫಿಂಗರ್‌ ಪರೀಕ್ಷೆಯನ್ನು ನಿಷೇಧಿಸಿತ್ತು ಮತ್ತು ಸೋಮವಾರದ ತೀರ್ಪಿನಲ್ಲಿ, ಇತರ ಎಲ್ಲಾ ಕನ್ಯತ್ವ ಪರೀಕ್ಷೆಗಳಿಗೆ ಅದೇ ನಿಷೇಧವನ್ನು ವಿಧಿಸಲಾಗಿದೆ. ತೀರ್ಪಿನ (Pakistan Court) ನಂತರ, ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಅವರು ಈ ನಿರ್ಧಾರವು "ನಿಜಕ್ಕೂ ಒಂದು ಹೆಗ್ಗುರುತು ತೀರ್ಪು" ಎಂದು ಟ್ವೀಟ್ ಮಾಡಿದ್ದಾರೆ.

Women harassment ಕನ್ಯತ್ವ ಪರೀಕ್ಷೆಯಲ್ಲಿ ಮದುಮಗಳು ಫೇಲ್, 10 ಲಕ್ಷ ರೂಪಾಯಿಗೆ ಅತ್ತೆಯ ಡಿಮ್ಯಾಂಡ್!

ಈ ಕುರಿತಾಗಿ ಹೇಳಿಕೆ ನೀಡಿರುವ ಅರ್ಜಿದಾರರು "ಸ್ವಾಗತವಾದ ಬೆಳವಣಿಗೆ ಮತ್ತು ತನಿಖಾ ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಸುಧಾರಿಸುವ ಮತ್ತು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಬಲಿಪಶುಗಳಿಗೆ ನ್ಯಾಯಯುತವಾಗಿಸುವ ಸರಿಯಾದ ದಿಕ್ಕಿನಲ್ಲಿ ಹೆಚ್ಚು ಅಗತ್ಯವಿರುವ ಹೆಜ್ಜೆ" ಎಂದು (Lahore High Cour) ಹೇಳಿದರು.

ಮದ್ವೆಯಾದ ಮೊದಲ ದಿನವೇ ವಧುವಿಗೆ ಕನ್ಯತ್ವ ಪರೀಕ್ಷೆ, ಬಿಳಿ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಯಾಗದಿದ್ರೆ ಕಾದಿದೆ ಘೋರ ಶಿಕ್ಷೆ !

ಭಾರತದಲ್ಲಿಯೂ ನಿಷೇಧ: ಎಪ್ರಿಲ್ 21 ರಂದು ಮದ್ರಾಸ್ ಹೈಕೋರ್ಟ್‌ನ (Madurai Bench of Madras High Court) ಮಧುರೈ ಪೀಠವು ಲೈಂಗಿಕ ದೌರ್ಜನ್ಯದಿಂದ ಬದುಕುಳಿದ ಮಹಿಳೆಯ ಮೇಲೆ ನಡೆಸಲಾಗಿರುವ ಅವೈಜ್ಞಾನಿ ಟು ಫಿಂಗರ್‌ ಟೆಸ್ಟ್‌ ಅನ್ನು ನಿಷೇಧಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಅಭ್ಯಾಸವು ಅಸಾಂವಿಧಾನಿಕ  ಎಂದು ಹೇಳುವ ಹಿಂದಿನ ತೀರ್ಪುಗಳನ್ನು ಇದೇ ವೇಳೆ ಉಲ್ಲೇಖಿಸಿತ್ಉತ. 2013 ರಲ್ಲಿ ಸುಪ್ರೀಂ ಕೋರ್ಟ್ ಕೂಡ ಈ ಅಭ್ಯಾಸವನ್ನು ಅಸಾಂವಿಧಾನಿಕ ಎಂದು ಪರಿಗಣಿಸಿತ್ತು ಮತ್ತು ಪರೀಕ್ಷೆಯನ್ನು ನಡೆಸಬಾರದು ಎಂದು ಹೇಳಿತ್ತು. ಈ ನಿರ್ದೇಶನಗಳ ಹೊರತಾಗಿಯೂ, ತಮಿಳುನಾಡು ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಇದನ್ನು ಇನ್ನೂ ನಡೆಸಲಾಗುತ್ತಿತ್ತು. ಇದರ ಬೆನ್ನಲ್ಲಿಯೇ ಹೈಕೋರ್ಟ್‌ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪುನರುಚ್ಚಾರ ಮಾಡಿತ್ತು.

Follow Us:
Download App:
  • android
  • ios