36 ಗಂಟೆ, 8 ಕಾರ್ಯಕ್ರಮ, 7 ನಗರ, 5,300 ಕಿ.ಮೀ ಪ್ರಯಾಣ,ಇದು ಪ್ರಧಾನಿ ಮೋದಿ 2 ದಿನದ ವೇಳಾಪಟ್ಟಿ!
ನರೇಂದ್ರ ಮೋದಿ ರಜೆ ಹಾಕದೇ, ದಣಿವರಿಯದೇ ಕೆಲಸ ಮಾಡುವ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಯಾಣ, ಕಾರ್ಯಕ್ರಮ, ಆಡಳಿತ, ಸಭೆ ಇವೆಲ್ಲವನ್ನೂ ಮೋದಿ ಸುಲಭವಾಗಿ ನಿಭಾಯಿಸುತ್ತಾರೆ. ಇದೀಗ ಏಪ್ರಿಲ್ 24 ಹಾಗೂ 25ರ ವೇಳಾಪಟ್ಟಿ ಅಚ್ಚರಿ ಹುಟ್ಟಿಸುವಂತಿದೆ.
ನವದೆಹಲಿ(ಏ.22): ಪ್ರಧಾನಿ ನರೇಂದ್ರ ಮೋದಿ ದೇಶದ ಉದ್ದಗಲಕ್ಕೂ ಪ್ರಯಾಣ ಮಾಡಿ ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳುತ್ತಾರೆ. ವಿದೇಶಿ ಪ್ರಯಾಣ, ಸತತ ಸಭೆ, ಆಡಳಿತ ಹೀಗೆ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಇದೀಗ ಏಪ್ರಿಲ್ 24 ಹಾಗೂ 25ರ ಪ್ರಧಾನಿ ಮೋದಿ ವೇಳಾಪಟ್ಟಿ ಎಲ್ಲರ ಹುಬ್ಬೇರಿಸಿದೆ. ಕಾರಣ ಈ ಎರಡು ದಿನದಲ್ಲಿ ಮೋದಿ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದರ ಜೊತೆಗೆ ಸತತ ಪ್ರಯಾಣ. 36 ಗಂಟೆಯಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 5,300 ಕಿಲೋಮೀಟರ್ ಪ್ರಯಾಣ ಮಾಡಲಿದ್ದಾರೆ. 8 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. 7 ವಿವಿಧ ನಗರದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೆಹಲಿಯಿಂದ ಆರಂಭಗೊಂಡು ದಕ್ಷಿಣ ಕೇರಳಕ್ಕೂ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಡುವಿಲ್ಲದ ಕಾರ್ಯಕ್ರಮ, ಪ್ರಯಾಣದ ನಡುವೆಯೂ ಮೋದಿ ಅದೇ ಉತ್ಸಾಹ, ಅದೇ ಚೈತನ್ಯದಲ್ಲಿ ಹೇಗಿರುತ್ತಾರೆ ಅನ್ನೋ ಚರ್ಚೆ ಇದೀಗ ಶುರುವಾಗಿದೆ.
ಏಪ್ರಿಲ್ 24 ರಂದು ಬೆಳಗ್ಗೆ ದೆಹಲಿಯಿಂದ ಪ್ರಧಾನಿ ಮೋದಿ ಮಧ್ಯ ಪ್ರದೇಶಕ್ಕೆ ಆಗಮಿಸಲಿದ್ದಾರೆ. ಮಧ್ಯಪ್ರದೇಶದ ಐತಿಹಾಸಿಕ ಪ್ರಸಿದ್ಧ ಕಜುರಾಹೋಗೆ ಆಗಮಿಸಲಿದ್ದಾರೆ. ಇದು ದೆಹಲಿಯಿಂದ 500 ಕಿಲೋಮೀಟರ್ ದೂರದಲ್ಲಿದೆ. ಬಳಿಕ ಅಲ್ಲಿದಂ ರೇವಾ ಜೆಲ್ಲಿಗೆ ತೆರಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೇವಾದಿಂದ ಮತ್ತೆ ಖಜುರಾಹೋ ಮರಳಲಿದ್ದಾರೆ. ಇದು 280 ಕಿಲೋಮೀಯರ್ ದೂರದ ಪ್ರಯಾಣ.
ಎಪ್ರಿಲ್ 28 ರಿಂದ ಕರ್ನಾಟಕದಲ್ಲಿ ಮೋದಿ ಪ್ರಚಾರ ಆರಂಭ, ಯೋಗಿ ಆದಿತ್ಯನಾಥ್ ಸಾಥ್!
ಖಜುರಾಹೋದಿಂದ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ. 1,700 ಕಿಲೋಮೀಟರ್ ವಾಯುಮಾರ್ಗದ ಮೂಲಕ ಮೋದಿ ಸಂಚಾರ ಮಾಡಲಿದ್ದಾರೆ. ಕೊಚ್ಚಿಯಲ್ಲಿ ಆಯೋಜಿಸಿರುವ ಯುವ ಕಾಂಕ್ಲೇವ್‌ನಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. 24 ರಂದು ಮೋದಿ ಕೊಚ್ಚಿಯಲ್ಲಿ ತಂಗಲಿದ್ದಾರೆ. ಏಪ್ರಿಲ್ 25ರ ಬೆಳಗ್ಗೆ ಕೊಚ್ಚಿಯಿಂದ 190 ಕಿಲೋಮೀಟರ್ ದೂರದಲ್ಲಿರುವ ತಿರುವನಂತಪುರಂಗೆ ತೆರಳಲಿದ್ದಾರೆ. ತಿರುವನಂತಪುರಂನಲ್ಲಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕಸ್ಥಾಪನೆ ನೆರವೇರಿಸಲಿದ್ದಾರೆ.
ತಿರುವಂತನಪುರಂನಿಂದ ಮೋದಿ, ಗುಜರಾತ್‌ನ ಸೂರತ್ ಮಾರ್ಗವಾಗಿ ಸಿಲ್ವಾಸಕ್ಕೆ ಆಗಮಿಸಲಿದ್ದಾರೆ. ತಿರುವನಂತಪುರಂನಿಂದ ಸಿಲ್ವಾಸ ಬರೋಬ್ಬರಿ 1,570 ಕಿಲೋಮೀಟರ್ ಪ್ರಯಾಣವಾಗಿದೆ. ಸಿಲ್ವಾಸದಲ್ಲಿ ಮೋದಿ ನಮೋ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಬಳಿಕ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.
ಆಫ್ರಿಕಾದಿಂದ ಬಂದ ಚೀತಾಗಳಿಗೆ ಮರುನಾಮಕರಣ: ಮೋದಿ ಸಲಹೆಯಂತೆ ಹೆಸರು ಸೂಚಿಸಿದ್ದ ಜನತೆ
ಸಿಲ್ವಾಸದಿಂದ ಸೂರತ್‌ಗೆ ಮರಳಲಿರುವ ಮೋದಿ, ಸೂರತ್‌ನಿಂದ ಕೇಂದ್ರಾಡಳಿತ ಪ್ರದೇಶವಾಗಿರುವ ದಮನ್‌ಗೆ ತೆರಳಿದ್ದಾರೆ. ಸೂರತ್‌ನಿಂದ ದಮನ್ ಪ್ರಯಾಣ 110 ಕಿಲೋಮೀಟರ್ ಪ್ರಯಾಣ. ದಮನ್‌ನಲ್ಲಿ ದೇವ್ಕಾ ಸೀಫ್ರಂಟ್ ಉದ್ಘಾಟಿಸಲಿದ್ದಾರೆ. ಬಳಿಕ 940 ಕಿಲೋಮೀಟರ್ ಪ್ರಯಾಣದ ಮೂಲಕ ದೆಹಲಿಗೆ ಮರಳಲಿದ್ದಾರೆ. ಒಟ್ಟಾರೆ 36 ಗಂಟೆಯಲ್ಲಿ ಮದೋಿ 5,300 ಕಿಲೋಮೀಟರ್ ಪ್ರಯಾಣ ಮಾಡಲಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ ಆಗಮಿಸಿ ಬಳಿಕ ಗುಜರಾತ್ ಮೂಲಕ ದೆಹಲಿಗೆ ವಾಪಾಸ್ಸಾಗಲಿದ್ದಾರೆ. ಇಷ್ಟು ಪ್ರಯಾಣ, ಕಾರ್ಯಕ್ರಮ, ಭೇಟಿ ಕೇವಲ 36 ಗಂಟೆಯಲ್ಲಿ ನಿಗದಿಪಡಿಸಲಾಗಿದೆ.