Asianet Suvarna News Asianet Suvarna News

ಹಿಜಾಬ್‌ಗೆ ಬೆಂಕಿ ಇಟ್ಟು ಇರಾನ್ ಪ್ರತಿಭಟನೆಗೆ ಬೆಂಬಲಿಸಿದ ಕೇರಳದ ಮುಸ್ಲಿಂ ಮಹಿಳೆಯರು

 ಹಿಜಾಬ್‌ ಕಡ್ಡಾಯ ಮಾಡಿರುವ ಇರಾನ್ ನಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾರತಕ್ಕೂ ಕಾಲಿಟ್ಟಿದೆ. ಕೇರಳದ ಕೋಝಿಕ್ಕೋಡ್ ನಲ್ಲಿ ನವೆಂಬರ್ 6 ರಂದು ಹಿಜಾಬ್ ಗೆ ಬೆಂಕಿ ಹಚ್ಚಿ ಮುಸ್ಲಿಂ ಮಹಿಳೆಯರು ಪ್ರತಿಭಟನೆಗೆ ನಡೆಸಿದ್ದಾರೆ.

Kerala Muslim women burn Hijabs in solidarity with Iran protests gow
Author
First Published Nov 7, 2022, 10:33 PM IST

ತಿರುವನಂತಪುರಂ (ನ.7): ಹಿಜಾಬ್‌ ಕಡ್ಡಾಯ ಮಾಡಿರುವ  ಇರಾನ್ ನಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾರತಕ್ಕೂ ಕಾಲಿಟ್ಟಿದೆ.  ಕೇರಳದ ಕೋಝಿಕ್ಕೋಡ್ ನಲ್ಲಿ ನವೆಂಬರ್ 6 ರಂದು ಹಿಜಾಬ್ ಗೆ ಬೆಂಕಿ ಹಚ್ಚಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಇದು ಭಾರತದಲ್ಲಿ ಹಿಜಾಬ್ ಖಂಡಿಸಿ ನಡೆದ ಮೊದಲ ಪ್ರತಿಭಟನೆಯಾಗಿದೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ಘಟನೆ ನಡೆದಿದೆ.  ಮುಂದಿನ ತಿಂಗಳು ಮಲಪ್ಪುರಂನಲ್ಲಿ ನಡೆಯಲಿರುವ ಮತ್ತೊಂದು ಸೆಮಿನಾರ್‌ಗೆ ಮುನ್ನ "ಅಭಿಮಾನಿಗಳು-ವಿಜ್ಞಾನ ಮತ್ತು ಮುಕ್ತ ಚಿಂತನೆ" ಎಂಬ ಸೆಮಿನಾರ್ ಅನ್ನು ಕೋಝಿಕೋಡ್‌ನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಭಾಗವಾಗಿ, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿಗೆ ಒಗ್ಗಟ್ಟಿನಿಂದ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಸುಟ್ಟು ಹಾಕಿದರು.

ಇಸ್ಲಾಮಿಕ್ ಮುಕ್ತ ಚಿಂತಕರ ಸಂಘಟನೆಯ ಆರು ಮುಸ್ಲಿಂ ಮಹಿಳೆಯರು ಹಿಜಾಬ್‌ ಅನ್ನು ಸುಡುವ ನೇತೃತ್ವ ವಹಿಸಿದ್ದರು.  ಇರಾನ್ ವಿರುದ್ಧ ಒಗ್ಗಟ್ಟಿನಿಂದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಮತ್ತು ಫಲಕಗಳನ್ನು ಪ್ರದರ್ಶಿಸಿ ಹಿಜಾಬ್ ಸುಟ್ಟರು.  ಈ ಮೂಲಕ ಭಾರತದಲ್ಲಿ ಹಿಜಾಬ್ ಗೆ ಬೆಂಕಿ ಇಟ್ಟು ಪ್ರತಿಭಟಿಸಿದ ಮೊದಲ ಘಟನೆಯಾಗಿದೆ.  ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ. ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇರಾನ್‌ನಲ್ಲಿ ನಡೆದ ಇದೇ ರೀತಿಯ ಘಟನೆಗಳಿಂದ ಪ್ರೇರಿತವಾದ ಹಿಜಾಬ್ ದಹನವು ಕೇರಳದ ಕೋಝಿಕೋಡ್‌ನಲ್ಲಿ ಭಾನುವಾರ ನಡೆದಿರುವುದ ಗಮನಾರ್ಹ ಸಂಗತಿ.

\ಇರಾನ್‌ನಲ್ಲಿ ತಣ್ಣಗಾಗದ ಹಿಜಾಬ್ ಹೋರಾಟ: ಭದ್ರತಾ ಸಿಬ್ಬಂದಿಯ ಥಳಿತಕ್ಕೆ 15 ವರ್ಷದ ಬಾಲಕಿ ಬಲಿ

ಘಟನೆ ಹಿನ್ನೆಲೆ: ಇರಾನ್‌ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದೆ. ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಮಹ್ಸಾ ಅಮಿನಿಯನ್ನು ಇರಾನ್‌ನ ನೈತಿಕತೆ ಪೋಲೀಸ್ (Moral Police) ನವರು ಸರಿಯಾಗಿ ಹಿಜಾಬ್ ಧರಿಸದಿದ್ದಕ್ಕೆ ಬಂಧಿಸಿದರು. ಅಂದರೆ ಆ ಮಹಿಳೆ ತಮ್ಮ ಕೂದಲನ್ನು (Hair) ಸಂಪೂರ್ಣವಾಗಿ ಮುಚ್ಚಿಕೊಂಡಿರಲಿಲ್ಲ ಎಂಬ ಕಾರಣ ನೀಡಿ ಬಂಧಿಸಲಾಗಿತ್ತು.ಕಳೆದ ವಾರದ ಆರಂಭದಲ್ಲಿ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಆಕೆಯನ್ನು ಬಂಧಿಸಿದ ನಂತರ ಕೋಮಾಕ್ಕೆ ಜಾರಿದ್ದ ಮಹಿಳೆ ಶುಕ್ರವಾರ ನಿಧನರಾಗಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಮಹಿಳಾ ಹಕ್ಕುಗಳ ಪ್ರತಿಭಟನೆ (Protest) ಹೆಚ್ಚಾಗಿದೆ. ಆಕೆಯನ್ನು ಥಳಿಸಲಾಯಿತು ಎಂಬ ಸಾಮಾಜಿಕ ಮಾಧ್ಯಮದ (Social Media) ಅನುಮಾನಗಳನ್ನು ಇರಾನ್‌ ಪೊಲೀಸರು ತಳ್ಳಿಹಾಕಿದ್ದು, ಬಂಧಿತ ಇತರ ಮಹಿಳೆಯರೊಂದಿಗೆ ಅವಳು ಇದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

Iran Anti-Hijab Protest: ಸೆಲೆಬ್ರಿಟಿ ಚೆಫ್‌ ಹೊಡೆದು ಕೊಂದ ಇರಾನ್‌ ಪಡೆ

ಆದರೂ ಪೊಲೀಸರ ಹೇಳಿಕೆಯಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ಹಲವಾರು ಪ್ರತಿಭಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿವೆ. ಕೆಲವು ವಿಡಿಯೋಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಇರಾನ್ ಪಡೆಗಳು ಅಶ್ರುವಾಯು ಬಳಸುತ್ತಿರುವುದನ್ನು ಕಾಣಬಹುದು. 7 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಧಾರ್ಮಿಕ ಶಿರಸ್ತ್ರಾಣವನ್ನು ಧರಿಸಬೇಕೆಂಬ ಇರಾನಿನ ತೀವ್ರವಾದಿ ನಿಯಮಕ್ಕೆ ವಿರೋಧದ ಸಾಂಕೇತಿಕ ಕ್ರಿಯೆಯಲ್ಲಿ, ಕೆಲವು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ಗಳನ್ನು ಸುಟ್ಟುಹಾಕಿದ ಘಟನೆಗಳು ನಡೆದಿದೆ.
 

Follow Us:
Download App:
  • android
  • ios