ಇರಾನ್‌ನಲ್ಲಿ ತಣ್ಣಗಾಗದ ಹಿಜಾಬ್ ಹೋರಾಟ: ಭದ್ರತಾ ಸಿಬ್ಬಂದಿಯ ಥಳಿತಕ್ಕೆ 15 ವರ್ಷದ ಬಾಲಕಿ ಬಲಿ
ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಆರಂಭವಾಗಿರುವ ಮಹಿಳೆಯರ ಹೋರಾಟ ಇನ್ನು ತಣ್ಣಗಾಗಿಲ್ಲ. ಇರಾನ್ ಆಡಳಿತ ಪರ ಇರುವ ಆಡಳಿತ ಗೀತೆ ಹಾಡಲು ಶಾಲಾ ಬಾಲಕಿ ನಿರಾಕರಿಸಿದ ಹಿನ್ನೆಲೆ ಆಕೆಯನ್ನು ಭದ್ರತಾ ಸಿಬ್ಬಂದಿ ಹೊಡೆದು ಕೊಂದಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.
ತೆಹ್ರಾನ್: ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಆರಂಭವಾಗಿರುವ ಮಹಿಳೆಯರ ಹೋರಾಟ ಇನ್ನು ತಣ್ಣಗಾಗಿಲ್ಲ. ಇರಾನ್ ಆಡಳಿತ ಪರ ಇರುವ ಆಡಳಿತ ಗೀತೆ ಹಾಡಲು ಶಾಲಾ ಬಾಲಕಿ ನಿರಾಕರಿಸಿದ ಹಿನ್ನೆಲೆ ಆಕೆಯನ್ನು ಭದ್ರತಾ ಸಿಬ್ಬಂದಿ ಹೊಡೆದು ಕೊಂದಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.
ದಿ ಗಾರ್ಡಿಯನ್ ವರದಿ ಪ್ರಕಾರ, ಇರಾನ್‌ನ ಶಾಲೆಯ ಮೇಲೆ ಭದ್ರತಾ ಪಡೆಗಳು ನಡೆಸಿದ ದಾಳಿಯ ಬಳಿಕ ಭದ್ರತಾ ಪಡೆಗಳಿಂದ ಥಳಿತಕ್ಕೊಳಗಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇರಾನ್ ಆಡಳಿತ ಪರ ಇರುವ ಗೀತೆಯನ್ನು ಹಾಡಬೇಕೆಂದು ಭದ್ರತಾ ಪಡೆಗಳು ಮಕ್ಕಳಿಗೆ ಹೇಳಿದ್ದು, ಈ ವೇಳೆ ನಿರಾಕರಿಸಿದ ವಿದ್ಯಾರ್ಥಿನಿಯನ್ನು ಭದ್ರತಾ ಸಿಬ್ಬಂದಿ ಥಳಿಸಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 13 ರಂದು ಅರ್ದಾಬಿಲ್‌ನ (Ardabil) ಶಾಹೆದ್ ಬಾಲಕಿಯರ ಪ್ರೌಢಶಾಲೆಯಲ್ಲಿ (Shahed girls high school)ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಥಳಿಸಿದ್ದರಿಂದ ಗಾಯಗೊಂಡ ಹಲವು ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಅಸ್ರಾ ಪನಾಹಿ (Asra Panahi) ಸಾವನ್ನಪ್ಪಿದ್ದಾಳೆ ಎಂದು ಶಿಕ್ಷಕರ ಸಿಂಡಿಕೇಟ್‌ನ ಸಮನ್ವಯ ಮಂಡಳಿ ಹೇಳಿದೆ. ಆದರೆ ವಿದ್ಯಾರ್ಥಿನಿಯ ಸಾವಿಗೆ ಭದ್ರತಾ ಪಡೆ ಕಾರಣ ಎಂಬ ಆರೋಪವನ್ನು ಇರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ನಗ್ನತೆ ಪ್ರಚಾರವಲ್ಲ, ಆಯ್ಕೆ ಸ್ವಾತ್ರಂತ್ರ್ಯ; ಬುರ್ಕಾ ಬಿಚ್ಚೆಸೆದು 'ಸೇಕ್ರೆಡ್ ಗೇಮ್' ನಟಿಯ ಬೆತ್ತಲೆ ಪ್ರತಿಭಟನೆ
ಆದರೆ ಬಾಲಕಿ ಪನಾಹಿಯ ಚಿಕ್ಕಪ್ಪ (Auncle) ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ದೇಶದ ದೂರದರ್ಶನಕ್ಕೆ ನೀಡಿದ ಹೇಳಿಕೆಯಲ್ಲಿ ಆಕೆ ಹುಟ್ಟಿನಿಂದಲೇ ಇದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಶುಕ್ರವಾರ (ಆಕ್ಟೋಬರ್ 14) ಬಾಲಕಿ ಪನಾಹಿ ಸಾವಿನ ನಂತರ ಶಾಲಾ ಶಿಕ್ಷಕರ ಸಂಘವು ಈ ಕ್ರೂರ ಮತ್ತು ಅಮಾನವೀಯ ದಾಳಿಗಳನ್ನು ಖಂಡಿಸಿ ಭಾನುವಾರ (ಆ.16) ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, ಇರಾನ್‌ನ ಶಿಕ್ಷಣ ಸಚಿವ ಯೂಸೆಫ್ ನೂರಿ ಅವರ ರಾಜೀನಾಮೆಗೆ ಆಗ್ರಹಿಸಿತ್ತು. ಆಕ್ಟೋಬರ್ 12 ರಂದು ಭದ್ರತಾ ಸಿಬ್ಬಂದಿ ನಡೆಸಿದ ಈ ದಾಳಿಯಲ್ಲಿ ಏಳು ಮಕ್ಕಳು ಗಾಯಗೊಂಡಿದ್ದು, 10 ವಿದ್ಯಾರ್ಥಿಗಳನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು.
ಇರಾನ್ ಹಿಜಾಬ್ ವಿರೋಧಿ ಹೋರಾಟ ಮತ್ತಷ್ಟು ತೀವ್ರ: ಬೀದಿಗಿಳಿದ ವಿದ್ಯಾರ್ಥಿನಿಯರು, ಅಸ್ಕರ್ ಪುರಸ್ಕೃತರು
ಮಾನವ ಹಕ್ಕುಗಳ (Human Rights) ಕಛೇರಿಯ ವಕ್ತಾರ ರವಿನಾ ಶಾಮದಾಸಾನಿ (Ravina Shamdasani) ಅವರು ಹೇಳುವಂತೆ, 'ಕೆಲವು ಮೂಲಗಳಿಂದ ಬಂದ ಮಾಹಿತಿಗಳ ಪ್ರಕಾರ ಇರಾನ್‌ನ ಕನಿಷ್ಠ ಏಳು ಪ್ರಾಂತ್ಯಗಳಲ್ಲಿ ನಡೆದ ಗುಂಡಿನ ದಾಳಿ ಹಾಗೂ ಮಾರಣಾಂತಿಕ ದಾಳಿಗಳಿಂದಾಗಿ 23 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ನಿಂದ (Hijab) ಮುಖ ಮುಚ್ಚಿಕೊಳ್ಳಬೇಕೆಂಬ ಕಟ್ಟುನಿಟ್ಟಿನ ನಿಯಮವಿದ್ದು, ಮುಖವನ್ನು ಸರಿಯಾಗಿ ಮುಚ್ಚಿಲ್ಲ ಎಂದು ಕಳೆದ ತಿಂಗಳು 22 ವರ್ಷದ ಮಹ್ಸಾ ಅಮಿನಿ ಬಂಧನವಾಗಿ ನಂತರ ಆಕೆ ಭದ್ರತಾ ಸಿಬ್ಬಂದಿ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದರು. ಇದಾದ ಬಳಿಕ ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಮಹಿಳೆಯರು ಬೀದಿ ಬೀದಿಗಳಲ್ಲಿ ಪ್ರತಿಭಟನೆ (Protest) ಆರಂಭಿಸಿದ್ದರು. ಮಹಿಳೆಯರು ತಮ್ಮ ಸ್ಕಾರ್ಫ್‌ಗಳನ್ನು (Scarf) ಕಿತ್ತೆಸೆದು ಈ ಹೋರಾಟದಲ್ಲಿ ಭಾಗಿಯಾಗಿದ್ದರು.