Iran Anti-Hijab Protest: ಸೆಲೆಬ್ರಿಟಿ ಚೆಫ್‌ ಹೊಡೆದು ಕೊಂದ ಇರಾನ್‌ ಪಡೆ

Iran Anti Hijab Movement: ಇರಾನಿನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದಕ್ಕೆ ಬೆಂಬಲ ನೀಡಿದ ಸೆಲೆಬ್ರಿಟಿ ಚೆಫ್‌ ಶಹಿದಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗಿದೆ. 

Iran's celebrity cheff shahidi killed by revolutionary gaurd forces for supporting anti hijab protest

ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಇದಕ್ಕೆ ಬೆಂಬಲ ನೀಡಿದ್ದ ಸೆಲೆಬ್ರಿಟಿ ಚೆಫ್‌ ಮೆಹ್ರಶದ್‌ ಶಹಿದಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಶಹಿದಿ ಇರಾನಿನ ಖ್ಯಾತ ಅಡುಗೆಬಟ್ಟ. ಇರಾನಿನ ಜೇಮಿ ಒಲಿವರ್‌ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಕೇವಲ 19 ವರ್ಷದ ಶಹಿದಿ ಹಿಜಾಬ್‌ ವಿರೋಧಿ ಪ್ರತಿಭಟನೆಗೆ ಬೆಂಬಲ ಕೊಟ್ಟರು ಎಂಬ ಕಾರಣಕ್ಕೆ ಇರಾನ್‌ ಸೈನ್ಯ ಶಹಿದಿ  ಅವರನ್ನು ಹತ್ಯೆ ಮಾಡಿದೆ. 20ನೇ ಹುಟ್ಟುಹಬ್ಬಕ್ಕೆ ಒಂದು ದಿನ ಇರುವಾಗ ಅವರನ್ನು ಹತ್ಯೆ ಮಾಡಲಾಗಿದೆ. ಶನಿವಾರ ಅವರ ಅಂತಿಮ ಕ್ರಿಯೆಗೆ ಸಾವಿರಾರು ಜನ ಆಗಮಿಸಿದ್ದು, ಸೇನೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದಿ ಟೆಲಿಗ್ರಾಫ್‌ ವರದಿಯ ಪ್ರಕಾರ ಶಹಿದಿಯನ್ನು ಅರಾಕ್‌ ನಗರದಲ್ಲಿ ಪ್ರತಿಭಟನೆ ವೇಳೆ ಬಂಧಿಸಲಾಗಿತ್ತು. ನಂತರ ಇರಾನ್‌ ರೆವೊಲ್ಯೂಷನರಿ ಗಾರ್ಡ್‌ಗಳ ಲಾಠಿ ಏಟಿನಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪೊಲೀಸರ ಲಾಠಿ ಏಟು ಶಹಿದಿ ತಲೆಗೆ ಬಿದ್ದಿದ್ದರಿಂತ ಮೃತಪಟ್ಟಿದ್ಧಾರೆ. ಆದರೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಕುಟುಂಬಸ್ಥರಿಗೆ ಬೆದರಿಕೆ ಹಾಕಲಾಗಿದೆ. ಇತ್ತ ಇರಾನ್‌ ಅಧಿಕಾರಿಗಳು ಶಹಿದಿ ಸಾವಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇರಾನ್‌ನ ಮುಖ್ಯ ನ್ಯಾಯಮೂರ್ತಿ ಅಬ್ದೊಲ್‌ಮೆಹ್ದಿ ಮೌಸಾವಿ ಪ್ರಕಾರ ಶಹಿದಿಯಲ್ಲಿ ದೇಹದಲ್ಲಿ ಯಾವ ಮುರಿದ ಗಾಯಗಳೂ ಇಲ್ಲ. ಶಹಿದಿ ಕೈ, ಕಾಲು ಮತ್ತು ತಲೆಗೆ ಪೆಟ್ಟು ಬಿದ್ದಿರುವ ಕುರುಹುಗಳಿಲ್ಲ ಎಂದಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಶಹಿದಿ ಸಾವಿನ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇರಾನಿಯನ್‌ ಅಮೆರಿಕನ್‌ ಬರಹಗಾರ್ತಿ ಡಾ. ನೀನಾ ಅನ್ಸಾರಿ ಅವರು ಪ್ರತಿಕ್ರಿಯೆ ನೀಡಿದ್ದು, "ಶಹಿದಿ ಒಬ್ಬ ಪ್ರತಿಭಾನ್ವಿತ ಚೆಫ್‌ ಆಗಿದ್ದರು. ಇರಾನಿನ ಭದ್ರತಾ ಪಡೆ ಅವರನ್ನು ನಿಷ್ಕರುಣೆಯಿಂದ ಕೊಲೆಗೈದಿದೆ. ಅವರು ಬದುಕಿದ್ದರೆ ಭಾನುವಾರ 20ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದಿತ್ತು. ಇರಾನ್‌ ಪಡೆಯ ಈ ಕೃತ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ," ಎಂದು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ: ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರತಿಭಟನೆ, ಭಾರತದಲ್ಲಿ ಬೇಕು, ದ್ವಂದ್ವ ನಿಲುವಿನ ಸಮರ ಯಾಕೆ?

ಏನಿದು ಹಿಜಾಬ್‌ ವಿರೋಧಿ ಚಳವಳಿ?:

ಇರಾನ್‌ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದೆ. ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಮಹ್ಸಾ ಅಮಿನಿಯನ್ನು ಇರಾನ್‌ನ ನೈತಿಕತೆ ಪೋಲೀಸ್ (Moral Police) ನವರು ಸರಿಯಾಗಿ ಹಿಜಾಬ್ ಧರಿಸದಿದ್ದಕ್ಕೆ ಬಂಧಿಸಿದರು. ಅಂದರೆ ಆ ಮಹಿಳೆ ತಮ್ಮ ಕೂದಲನ್ನು (Hair) ಸಂಪೂರ್ಣವಾಗಿ ಮುಚ್ಚಿಕೊಂಡಿರಲಿಲ್ಲ ಎಂಬ ಕಾರಣ ನೀಡಿ ಬಂಧಿಸಲಾಗಿತ್ತು.ಕಳೆದ ವಾರದ ಆರಂಭದಲ್ಲಿ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಆಕೆಯನ್ನು ಬಂಧಿಸಿದ ನಂತರ ಕೋಮಾಕ್ಕೆ ಜಾರಿದ್ದ ಮಹಿಳೆ ಶುಕ್ರವಾರ ನಿಧನರಾಗಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಈಕೆಯ ಸಾವಿನ ನಂತರ ಇರಾನ್‌ನಲ್ಲಿ ಮಹಿಳಾ ಹಕ್ಕುಗಳ ಪ್ರತಿಭಟನೆ (Protest) ಹೆಚ್ಚಾಗಿದೆ. ಆಕೆಯನ್ನು ಥಳಿಸಲಾಯಿತು ಎಂಬ ಸಾಮಾಜಿಕ ಮಾಧ್ಯಮದ (Social Media) ಅನುಮಾನಗಳನ್ನು ಇರಾನ್‌ ಪೊಲೀಸರು ತಳ್ಳಿಹಾಕಿದ್ದು, ಬಂಧಿತ ಇತರ ಮಹಿಳೆಯರೊಂದಿಗೆ ಅವಳು ಇದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: Hijab ಧರಿಸದ್ದಕ್ಕೆ ಯುವತಿ ಬಂಧನ: ಕೋಮಾದಲ್ಲಿದ್ದ ಮಹಿಳೆ ಸಾವು

ಆದರೂ ಪೊಲೀಸರ ಹೇಳಿಕೆಯಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ಹಲವಾರು ಪ್ರತಿಭಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿವೆ. ಕೆಲವು ವಿಡಿಯೋಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಇರಾನ್ ಪಡೆಗಳು ಅಶ್ರುವಾಯು ಬಳಸುತ್ತಿರುವುದನ್ನು ಕಾಣಬಹುದು. 7 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಧಾರ್ಮಿಕ ಶಿರಸ್ತ್ರಾಣವನ್ನು ಧರಿಸಬೇಕೆಂಬ ಇರಾನಿನ ತೀವ್ರವಾದಿ ನಿಯಮಕ್ಕೆ ವಿರೋಧದ ಸಾಂಕೇತಿಕ ಕ್ರಿಯೆಯಲ್ಲಿ, ಕೆಲವು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ಗಳನ್ನು ಸುಟ್ಟುಹಾಕಿದ ಘಟನೆಗಳು ನಡೆದಿದೆ.

Latest Videos
Follow Us:
Download App:
  • android
  • ios