ಕೇರಳ ಲವ್ ಜಿಹಾದ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೈ ಕೋರ್ಟ್ ನಿರಾಕರಿಸಿದೆ. ಕ್ರಿಶ್ಚಿಯನ್ ಮಹಿಳೆಯೊಂದಿಗೆ ಮುಸ್ಲಿ ಹುಡುಗನ ವಿವಾಹಕ್ಕೆ ಆಕ್ಷೇಪಿಸಿ, ಹುಡುಗಿಯ ತಂದೆ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕೊಚ್ಚಿ (ಏ.19): ಕೇರಳದಲ್ಲಿ (Kerala) ಲವ್ ಜಿಹಾದ್ (Love Jihad) ವಿವಾದದ ಕೇಂದ್ರಬಿಂದುವಾಗಿರುವ ಜೋಯಿಸ್ನಾ ಮೇರಿ ಜೋಸೆಫ್ (Joisna Mary Joseph) ಮಂಗಳವಾರ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಮತ್ತು ತನ್ನ ಮದುವೆಗೆ ಪೋಷಕರು ಒಪ್ಪಿಗೆ ನೀಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಶೆಜಿನ್ (Shejin) ಎಂಬ ಮುಸ್ಲಿಂ ಪುರುಷನೊಂದಿಗಿನ ವಿವಾಹದ ವಿರುದ್ಧ ಜೋಯಿಸ್ನಾ (Joisna ) ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ( Kerala High Court) ವಜಾಗೊಳಿಸಿದ ನಂತರ ಆಕೆ ಈ ಹೇಳಿಕೆ ನೀಡಿದ್ದಾಳೆ. "ನಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಹಾಗಾಗಿ ನಾನು ಅವನೊಂದಿಗೆ ಹೋಗಬೇಕೆಂದು ಬಯಸಿದ್ದೆ. ನಾನು ಅವನನ್ನು ಇಷ್ಟಪಟ್ಟೆ ಮತ್ತು ಅವನೊಂದಿಗೆ ಬದುಕಲು ಪ್ರಾರಂಭಿಸಿದೆ. ನಾನು ನನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ಹೇಳಿದೆ. ಇದು 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಮಾಡಿದ ನಿರ್ಧಾರ. ನಾವಿಬ್ಬರೂ ನಮ್ಮ ಪೋಷಕರೊಂದಿಗೆ ಮಾತನಾಡುತ್ತೇವೆ. ನಾವು ಅವರಿಗೆ ಮನವರಿಕೆ ಮಾಡುತ್ತೇವೆ ಎನ್ನುವ ವಿಶ್ವಾಸವಿದೆ' ಎಂದು ಜೋಯಿಸ್ನಾ ಹೇಳಿದ್ದಾರೆ.

ಜೋಯಿಸ್ನಾ ತನ್ನ ಕೊನೆಯವರೆಗೂ ಕ್ರಿಶ್ಚಿಯನ್ ಆಗಿ ಬದುಕಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಜೋಯಿಸ್ನಾ ಅವರ ಪತಿ ಶೆಜಿನ್ ಹೇಳಿದ್ದಾರೆ. "ತೀರ್ಪು ನಮ್ಮ ಪರವಾಗಿ ಬರಲಿದೆ ಎನ್ನುವ ವಿಶ್ವಾಸವಿತ್ತು. 18 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ವ್ಯಕ್ತಿಗಳು, ಭಾರತದಲ್ಲಿ ನಾವು ಬಯಸಿದಂತೆ ಬದುಕಲು ಕಾನೂನಿನಲ್ಲಿ ಅನುಮತಿ ಇದೆ. ನಾವಿಬ್ಬರೂ ನನ್ನ ತಂದೆಯ ಸಹೋದರನ ಬಳಿ ಇದ್ದಾಗ ಎಸ್‌ಡಿಪಿಐ ಕೇಂದ್ರದಲ್ಲಿ ಇದ್ದೇವೆ ಎಂಬ ಆರೋಪ ಬಂದಿದೆ. ಅಂತಹ ವಿವಾದವು ಆ ಸಮಯದಲ್ಲಿ ಹರಡಿತು" ಎಂದು ಅವರು ಹೇಳಿದರು.

"ನಾನು ಧಾರ್ಮಿಕನಲ್ಲ. ಜೋಯಿಸ್ನಾ ಸಾಯುವವರೆಗೂ ಕ್ರಿಶ್ಚಿಯನ್ ಆಗಿ ಬದುಕಲು ನನಗೆ ಯಾವುದೇ ಸಮಸ್ಯೆ ಇಲ್ಲ. ಅದು ಅವಳ ವೈಯಕ್ತಿಕ ವಿಷಯ. ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನ ವಿಷಯದಲ್ಲಿ, ಅವಳು ಹಸ್ತಕ್ಷೇಪ ಮಾಡಲಿಲ್ಲ. ಅದು ಹಾಗೆಯೇ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಸಾಯುವವರೆಗೂ ಎಲ್ಲರೂ ನಮಗೆ ಶಾಂತಿಯಿಂದ ಇರಲು ಅವಕಾಶ ನೀಡಬೇಕು,’’ ಎಂದು ಹೇಳಿದರು.

ಒಂದು ದಿನದ ಹಿಂದೆ ಹೈಕೋರ್ಟ್‌ನ ವಿಭಾಗೀಯ ಪೀಠವು (Division Bench of the High Court ) ಶೆಜಿನ್‌ನೊಂದಿಗೆ ಜೋಯಿಷ್ನಾಳನ್ನು ಕಳುಹಿಸಲು ಒಪ್ಪಿಗೆ ನೀಡಿತು. ಮಹಿಳೆ ನ್ಯಾಯಾಲಯದಲ್ಲಿ ತಾನು ಯಾವುದೇ ಬಂಧನದಲ್ಲಿಲ್ಲ ಎಂದು ಮತ್ತು ಆಕೆಯ ಒಪ್ಪಿಗೆಯೊಂದಿಗೆ ಶೆಜಿನ್‌ನೊಂದಿಗೆ ಹೋಗಿದ್ದೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದರು,

Love Jihad : ಲವ್ ಕೇಸರಿ ಶುರು ಮಾಡಿ.. ತಲವಾರ್ ಹಂಚಿದ ಶ್ರೀರಾಮಸೇನೆ!

ಜೋಯಿಸ್ನಾ ಅವರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ಆಕೆಯ ತಂದೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಶೆಜಿನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸದಸ್ಯರಾಗಿದ್ದಾರೆ. ಈ ಹಿಂದೆ, ಕೋಝಿಕ್ಕೋಡ್ ಜಿಲ್ಲೆಯ ಸಿಪಿಐಎಂ ನಾಯಕರೊಬ್ಬರು ಅಂತರ್ಧರ್ಮೀಯ ವಿವಾಹ ಲವ್ ಜಿಹಾದ್‌ನ ಭಾಗವಾಗಿದೆ ಎಂಬ ಜೋಯಿಸ್ನಾ ಅವರ ತಂದೆಯ ಆರೋಪವನ್ನು ಬೆಂಬಲಿಸಿದ್ದರು.

Love Jihad ಹಿಂದೂ ಹುಡುಗಿ ಪ್ರೀತಿಸಿ ಕಿಡ್ನಾಪ್ ಆರೋಪ, ಎರಡು ಮುಸ್ಲಿಮ್ ಮನೆಗೆ ಬೆಂಕಿ!

ಇತ್ತೀಚೆಗೆ ಹುಬ್ಬಳ್ಳಿಯಲ್ಲೂ ಲವ್ ಜಿಹಾದ್ ಪ್ರಕರಣದ ನಡೆದಿತ್ತು. ಹಿಂದು ಹುಡುಗಿ (Hindu Girl) ಹಾಗೂ ಮುಸ್ಲಿಂ ಹುಡುಗನ (Muslim Boy) ಪ್ರೇಮ ಪ್ರಕರಣ (Love) ಲವ್ ಜಿಹಾದ್ (Love Jihad)ಕಡೆಗೆ ದಾರಿ ಮಾಡಿಕೊಟ್ಟಿದೆ. ಯುವತಿಯ ಪೋಷಕರು ಇದು ಲವ್ ಜಿಹಾದ್ ಎಂದಿದ್ದು, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಪ್ರೀತಿ ಹೆಸರಲ್ಲಿ ನಡೆದಿರುವ ಲವ್ ಜಿಹಾದ್ ಇದಾಗಿದೆ. ಮದುವೆಯಾದ ಬಳಿಕ ಆಕೆಯನ್ನು ಮತಾಂತರ ಮಾಡುವ ಹುನ್ನಾರ ಇದರಲ್ಲಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಸ್ನೇಹ ಎನ್ನುವ ಯುವತಿ ಇಲ್ಲಿನ ಕಮರಿಪೇಟೆ ನಿವಾಸಿಯಾಗಿದ್ದರೆ, ಮುಸ್ಲಿಂ ಯುವಕ ಇಬ್ರಾಹಿಂ ಕೇಶಾವಾಪುರ ನಿವಾಸಿಯಾಗಿದ್ದರು.