Love Jihad ಹಿಂದೂ ಹುಡುಗಿ ಪ್ರೀತಿಸಿ ಕಿಡ್ನಾಪ್ ಆರೋಪ, ಎರಡು ಮುಸ್ಲಿಮ್ ಮನೆಗೆ ಬೆಂಕಿ!
- 2ರ ಹರೆಯದ ಹಿಂದೂ ಹುಡುಗಿಯನ್ನು ಕಿಡ್ನಾಪ್ ಆರೋಪ
- ಜಿಮ್ ಮಾಲೀಕನ ಸಾಜಿದ್ ಮನೆ ಮೇಲೆ ದಾಳಿ, ಬೆಂಕಿ
- ಉತ್ತರ ಪ್ರದೇಶದ ಆಗ್ರಾದಲ್ಲಿ ಪರಿಸ್ಥಿತಿ ಉದ್ವಿಘ್ನ
ಆಗ್ರಾ(ಏ.16): ಹಿಂದೂ ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಕಿಡ್ನಾಪ್ ಮಾಡಿದ ಆರೋಪದಡಿ ಉತ್ತರ ಪ್ರದೇಶದ ಆಗ್ರಾಗದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಜಿಮ್ ಮಾಲಿಕ ಸಾಜಿದ್ ಪ್ರೀತಿಯ ನಾಟಕವಾಡಿ 22 ಹರೆಯದ ಹಿಂದೂ ಹುಡುಗಿಯನ್ನು ಕಿಡ್ನಾಪ್ ಮಾಡಿರುವುದಾಗಿ ಧರ್ಮ ಜಾಗರಣ ಸಮನ್ವಯ ಸಂಘ ಆರೋಪಿಸಿದೆ. ಇಷ್ಟೇ ಅಲ್ಲ ಸಾಜಿದ್ ಮನೆ ಮೇಲೆ ದಾಳಿ ಮಾಡಿ ಮನೆಗೆ ಬೆಂಕಿ ಹಚ್ಚಲಾಗಿದೆ.
ಆಗ್ರಾದ ರುನಾಕ್ತ ನಿವಾಸಿಯಾಗಿರುವ ಸಾಜಿದ್ ಪಟ್ಟಣದಲ್ಲಿ ಜಿಮ್ ನಡೆಸುತ್ತಿದ್ದ. ಇಲ್ಲಿಗೆ ಬರವು ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಎಂದು ಧರ್ಮ ಜಾಗರಣ ಸಮನ್ವಯ ಸಂಘ ಆರೋಪಿಸಿದೆ. 22 ಹರೆಯದ ಹಿಂದೂ ಹುಡುಗಿಗೆ ಪ್ರೀತಿಯ ನಾಟಕವಾಡಿ ಮಾರುಕಟ್ಟೆಗೆ ತೆರಳಿದ್ದ ಹುಡುಗಿಯನ್ನು ಸಾಜಿದ್ ಕಿಡ್ನಾಪ್ ಮಾಡಿದ್ದಾನೆ ಎಂದು ಧರ್ಮ ಜಾಗರಣ ಸಮನ್ವಯ ಸಂಘ ಆರೋಪಿಸಿದೆ. ಇದೇ ಕಾರಣಕ್ಕೆ ಸಾಜಿದ್ ಮನೆ ಮೇಲೆ ದಾಳಿ ಮಾಡಲಾಗಿದೆ. ಮನೆಗೆ ಬೆಂಕಿ ಹಚ್ಚಿ ಸಾಜಿದ್ ಬಂಧಿಸುವಂತೆ ಘೋಷಣೆ ಕೂಗಿದ್ದಾರೆ.ಮನೆ ಮೇಲಿನ ದಾಳಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
'ಮದ್ವೆ ಅಂತ ಬಂದಾಗ ಜಾತಿ, ಧರ್ಮದವರನ್ನೇ ಆಯ್ಕೆ ಮಾಡ್ಕೊಳ್ಳಿ, ಇಲ್ಲಂದ್ರೆ ನನಗಾದ ಸ್ಥಿತಿ ನಿಮ್ಗೂ ಆಗುತ್ತೆ'
ಹುಡುಗಿಯ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಸಿಕಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಸಾಜಿದ್ ಕಿಡ್ನಾಪ್ ಮಾಡಿರುವುದಾಗಿ ಮಾತುಗಳು ಕೇಳಿಬಂದಿದೆ. ಇತ್ತ ಸಾಜಿದ್ ಕೂಡ ಪತ್ತೆಯಾಗಿಲ್ಲ. ಇನ್ನು ತೀವ್ರ ಹುಡುಕಾಟ ನಡೆಸಿದ ಪೊಲೀಸರು 2 ದಿನದ ಬಳಿಕ ಹಿಂದೂ ಹುಡುಗಿಯನ್ನು ಪತ್ತೆಹಚ್ಚಿದ್ದಾರೆ. ಆದರೆ ಸಾಜಿದ್ ತಲೆ ಮರೆಸಿಕೊಂಡಿದ್ದಾನೆ.
ಇತ್ತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಪ್ಪಿತಸ್ತರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮನ ಮೇಲೆ ದಾಳಿ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ನಡೆಸುವವರಿಗೆ 10 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಫೆ.10ರಿಂದ ವಿವಿಧ ಹಂತಗಳಲ್ಲಿ ಮತದಾನ ಆರಂಭವಾಗಲಿದೆ. ಅದಕ್ಕೆ ಎರಡು ದಿನ ಇರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಲವ್ ಜಿಹಾದ್‌ಗೆ ಜೈಲುಶಿಕ್ಷೆ ವಿಧಿಸುವ ಪ್ರಸ್ತಾಪವಿದೆ.
ಲವ್ ಜಿಹಾದ್‌ಗೆ ಬ್ರೇಕ್, ಮತಾಂತರಕ್ಕೆ ನಿಷೇಧ, ಸರ್ಕಾರದ ಮೆಗಾಪ್ಲ್ಯಾನ್.?
ಮದುವೆ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತು: ಅಪೂರ್ವ
ನನ್ನ ಮದುವೆ ಹಿಂದೆ ‘ಲವ್ ಜಿಹಾದ್’ ಉದ್ದೇಶ ಅಡಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾದ. ಬುರ್ಕಾ, ಹಿಜಾಬ್ ಹಾಕಬೇಕು, ಮಾಂಸ ತಿನ್ನಬೇಕು, ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದ. ಇದು ಗದಗದಲ್ಲಿ ಇತ್ತೀಚೆಗೆ ಪತಿ ಇಜಾಜ್‌ನಿಂದ 23 ಬಾರಿ ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಪುರಾಣಿಕ್ ಅಲಿಯಾಸ್ ಅರ್ಫಾಬಾನು ತನ್ನ ಗಂಡನ ವಿರುದ್ಧ ಮಾಡಿರುವ ಗಂಭೀರ ಆರೋಪ. ಕಾಲೇಜಿಗೆ ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಒಂದು ದಿನ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ತಾಯಿ, ಕುಟುಂಬಸ್ಥರಿಗೆ ವಿಡಿಯೋ ತೋರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಅನಿವಾರ್ಯವಾಗಿ ಮದುವೆಯಾದೆ. ಆ ಬಳಿಕ ತನ್ನ ಮತ್ತೊಂದು ಮುಖ ತೋರಿಸಲು ಆರಂಭಿಸಿದ. ಮತಾಂತರ ಮಾಡಿಸಿದ, ಆತನ ಜನರಿರುವ ಓಣಿಗೆ ಕರೆದೊಯ್ದು ಅವರ ಸಂಸ್ಕೃತಿ ಪಾಲಿಸುವಂತೆ, ಮಾಂಸ ಸೇವಿಸುವಂತೆ, ಬುರ್ಕಾ, ಹಿಜಾಬ್ ಧರಿಸುವಂತೆ ಒತ್ತಾಯಿಸಿದ. ತನ್ನ ಮಾತು ಕೇಳುವಂತೆ ಮಾಡುತ್ತಿದ್ದ. ಈ ವಿಚಾರಗಳಿಗಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎಂದು ದೂರಿದರು.