ಎರ್ನಾಕುಳಂ(ಅ.02): ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ತನಕ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಕ್ಟೋಬರ್ 3ರಿಂದ ಆರಂಭಿಸಿ ಒಂದು ತಿಂಗಳ ತನಕ ನಿಷೇಧಾಜ್ಞೆ ಜಾರಿಯಲ್ಲಿದೆ.

ಝೀರೋ ಪ್ರಕರಣಗಳು ಸಿಗುತ್ತಿದ್ದ ಕೇರಳದಲ್ಲಿ ಈಗಿನ ಪ್ರತಿದಿನದ ಕೊರೋನಾ ಪ್ರಕರಣಗಳ ಸಂಖ್ಯೆ ಸುಮಾರು 8 ಸಾವಿರದ ಗಡಿ ದಾಟಿಯಾಗಿದೆ. ಇದೀಗ ಕೇರಳದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದರ ವೇಗ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಪತ್ನಿ ಮೆಲೇನಿಯಾಗೆ ಕೊರೋನಾ ಪಾಸಿಟಿವ್..!

ಅತ್ಯಂತ ಹೆಚ್ಚು ಆಕ್ಟಿವ್ ಪ್ರಕರಣಗಳಿರುವ 3ನೇ ರಾಜ್ಯವಾಗಿದೆ ಕೇರಳ. ಗುರುವಾರ ಸಂಜೆ ಕೇರಳದ ಒಟ್ಟು ಕೊರೋನಾ ಕೇಸುಗಳ ಸಂಖ್ಯೆ 72,339. ಸೆಕ್ಷನ್ 144ರ ಅನ್ವಯ 5ಕ್ಕಿಂತ ಹೆಚ್ಚು ಜನರು ಒಟ್ಟು ಸೇರುವಂತಿಲ್ಲ.

 ಸಾಮಾಜಿಕವಾಗಿ ಮತ್ತು ರಾಜಕೀಯವಾಗಿಯೂ 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ವೈರಸ್ ವೇಗವಾಗಿ ಹರಡುತ್ತಿರುವ ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್‌ಗಳನ್ನು ಸೀಲ್‌ಡೌನ್ ಮಾಡಲು ಆದೇಶ ನೀಡಲಾಗಿದೆ.

ಸಾರ್ವಜನಿಕರೇ ಎಚ್ಚರ: ಮಾಸ್ಕ್‌ ಧರಿಸದಿದ್ರೆ ಕ್ರಿಮಿನಲ್‌ ಕೇಸ್‌..!

ಆಫೀಸ್‌, ಕಚೇರಿಗೆ ತೆರಳುವವರಿಗೆ, ಉದ್ಯಮ, ಮಾರುಕಟ್ಟೆಗೆ ವ್ಯಾಪಾರಿಗಳಿಗೆ ರಿಯಾಯಿತಿ ಇದೆ. ಸೆಪ್ಟೆಂಬರ್‌ನಲ್ಲಿ ಕೇರಳದ ಕೊರೋನಾ ಪ್ರಕರಣಗಳು ದಪ್ಪಟ್ಟಾಗಿದೆ. ಗುರುವಾರ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.