Asianet Suvarna News Asianet Suvarna News

Covishield: 84ದಿನಗಳ ಮಧ್ಯಂತರದಲ್ಲೇ ತೆಗೆದುಕೊಳ್ಳಬೇಕು, ಹಿಂದಿನ ಆದೇಶ ರದ್ದುಗೊಳಿಸಿದ ಕೇರಳ

  • ಕೋವಿಶೀಲ್ಡ್ ಆದೇಶವನ್ನು ರದ್ದು ಮಾಡಿದ ಕೇರಳ ಹೈಕೋರ್ಟ್
  • ಕೇಂದ್ರ ಸರಕಾರದ ಮನವಿಗೆ ಬಗ್ಗಿದ ಕೇರಳ ನ್ಯಾಯಾಲಯ
  • ಎರಡನೇ ಡೋಸ್ ತೆಗೆದುಕೊಳ್ಳಲು ಸಮಯಾವಕಾಶ ಬೇಡ ಎಂದಿದ್ದ ಕೋರ್ಟ್
     
Kerala High Court Sets Aside Order On covishield second dose in kerala gow
Author
Bengaluru, First Published Dec 3, 2021, 3:35 PM IST

ತಿರುವನಂತಪುರಂ (ಡಿ.3): ಕೊರೊನಾ ವೈರಸ್ ಶಮನದ ಲಸಿಕೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ತನ್ನ ಸೆಪ್ಟೆಂಬರ್ ಆದೇಶವನ್ನು ರದ್ದುಗೊಳಿಸಿದ್ದು, ಕೋವಿಶೀಲ್ಡ್ (Covishield) ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ನಡುವೆ ಕೇಂದ್ರ ಸರ್ಕಾರವು  ಕಡ್ಡಾಯಗೊಳಿಸಿದ 84 ದಿನಗಳ ಮಧ್ಯಂತರವನ್ನು ಕೇರಳ ಹೈಕೋರ್ಟ್ (Kerala High Court) ಶುಕ್ರವಾರ ಎತ್ತಿಹಿಡಿದಿದೆ.

ಡಿಸೆಂಬರ್ 3ರ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿತು ಮತ್ತು ಕೋವಿಶೀಲ್ಡ್ ಲಸಿಕೆಯನ್ನು ತೆಗದುಕೊಳ್ಳುವ ವ್ಯಕ್ತಿಗಳಿಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕೇ ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿದ್ದ ಏಕಸದಸ್ಯ ತೀರ್ಪನ್ನು ರದ್ದುಗೊಳಿಸಿತು. ಜೊತೆಗೆ ಲಸಿಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು (Central Government)ತೆಗೆದುಕೊಂಡ ನೀತಿ, ನಿರ್ಧಾರಗಳು ಸರಿ ಇದ್ದು ಈ ಬಗ್ಗೆ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ. ವಿಭಾಗೀಯ ಪೀಠದ ಇಂದಿನ ತೀರ್ಪಿನ ಪ್ರಕಾರ, ನಿಗದಿತ 84 ದಿನಗಳ ಅವಧಿ ಮುಗಿದ ನಂತರ ಮಾತ್ರ ಎರಡನೇ ಡೋಸ್ ಅನ್ನು ವ್ಯಕ್ತಿ ಪಡೆಯಬಹುದಾಗಿದೆ. 

ಕೊರೋನಾ ರೂಪಾಂತರಿ Omicron ಎಷ್ಟು ಅಪಾಯಕಾರಿ? ತಜ್ಞರು ಹೇಳೋದೇನು?

ಈ ಹಿಂದಿನ ತೀರ್ಪು ಏನಾಗಿತ್ತು?:
ಜಸ್ಟಿಸ್ ಪಿಬಿ ಸುರೇಶ್ ಕುಮಾರ್ ಅವರು ಸೆಪ್ಟೆಂಬರ್ 3 ರಂದು ನೀಡಿದ ತೀರ್ಪಿನ ಪ್ರಕಾರ ಎರಡನೇ ಬಾರಿ ಲಸಿಕೆ ಪಡೆಯಲು ಸರಕಾರ ನಿಗದಿಪಡಿಸಿದ ದಿನವನ್ನು ಅವಲಂಬಿಸಬೇಕಿಲ್ಲ. ವ್ಯಾಕ್ಸಿನೇಷನ್ ಸ್ವಯಂಪ್ರೇರಿತವಾಗಿದೆ. ಸರ್ಕಾರದ ನಿಯಮವನ್ನು ಅಗತ್ಯವಿರುವ ಮಧ್ಯಂತರ  ಸಲಹೆಯಂತೆ ಮಾತ್ರ ಪರಿಗಣಿಸಬಹುದು ಎಂದಿದ್ದರು. ಮಾತ್ರವಲ್ಲ ಎರಡನೇ ಡೋಸ್ ಅನ್ನು ಪಡೆಯಲು ಇಚ್ಚಿಸುವವರಿಗೆ ಮೊದಲ ಡೋಸ್‌ ತೆಗೆದುಕೊಂಡ ನಾಲ್ಕು ವಾರಗಳ ನಂತರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ ವೇಳಾಪಟ್ಟಿಯನ್ನು ಮಾಡಬೇಕು, ಇದಕ್ಕಾಗಿ ಕೋವಿನ್ ಪೋರ್ಟಲ್‌ನಲ್ಲಿ ತಕ್ಷಣ ಅಗತ್ಯ ನಿಬಂಧನೆಗಳನ್ನು ಮಾಡುವಂತೆ ನ್ಯಾಯಮೂರ್ತಿ ಕುಮಾರ್ ಕೇಂದ್ರಕ್ಕೆ ನಿರ್ದೇಶಿಸಿದ್ದರು. 

ZyCoV-D vaccine| ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.!

ಏಕ-ನ್ಯಾಯಾಧೀಶರ ಆದೇಶವನ್ನು ಪರಿಗಣಿಸಿ ಕೇರಳದ (Kerala) ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳು  84 ದಿನಗಳ ಸಮಯದ ಅಂತರವನ್ನು ಕಾಯದೆ ಎರಡನೇ ಡೋಸ್ ಅನ್ನು ಪಡೆಯಲು ಮುಂದಾಗಿದ್ದು, ಈಗಾಗಲೇ ಖರಿದಿಸಿ ದಾಸ್ತಾನು ಮಾಡಿ ಇಟ್ಟಿದ್ದಾರೆ. 

Omicron Threat: ಕೊರೋನಾ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಲು ತಜ್ಞರ ಸಲಹೆ!

ಕೇಂದ್ರದ ಮನವಿಯಲ್ಲಿ ಏನಿದೆ?:
ಕೋವಿಡ್ -19 ಗೆ ಸಂಬಂಧಿಸಿದ ಲಸಿಕೆ ತಯಾರಿಕೆ ಮತ್ತು ನೀಡುವ ಸಲುವಾಗಿ COVID-19 (NEGVAC) ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ನೀಡಿದ  ಶಿಫಾರಸುಗಳ ಆಧಾರದ ಮೇಲೆ,  ರಾಷ್ಟ್ರೀಯ ಕೋವಿಡ್ -19 ಲಸಿಕೆ ನೀಡಿಕೆ ಕಾರ್ಯತಂತ್ರದ ಅಡಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 1 ನೇ ಡೋಸ್ ನೀಡಿದ ನಂತರ 12-16 ವಾರಗಳ ಮಧ್ಯಂತರದಲ್ಲಿ (ಅಂದರೆ 84 ದಿನಗಳ ನಂತರ) 2 ನೇ ಡೋಸ್ ಅನ್ನು ನೀಡುವ ಬಗ್ಗೆ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಡೋಸ್ ಮಧ್ಯಂತರವನ್ನು ಹಲವಾರು ಬಾರಿ ಪರಿಷ್ಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಕೇರಳ ಕೋರ್ಟ್ ಗೆ ತನ್ನ ಮನವಿಯಲ್ಲಿ ತಿಳಿಸಿದೆ.

Covishield as booster dose: ಒಮಿಕ್ರೋನ್ ಭೀತಿ, ಬೂಸ್ಟರ್ ಡೋಸ್‌ಗೆ ಅನುಮತಿ ಕೇಳಿದ ಸೀರಂ

ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ರೀತಿಯಲ್ಲಿ ಏಕಸದಸ್ಯಪೀಠದ  ನ್ಯಾಯಾದೀಶರು ತೆಗೆದುಕೊಂಡಿರುವ ತನ್ನ ನಿರ್ಧಾರನ್ನು ಕೇಂದ್ರ ಸರಕಾರ ತನ್ನ ಮೇಲ್ಮನವಿಯಲ್ಲಿ ಪ್ರಶ್ನಿಸಿದೆ. ವೈದ್ಯಕೀಯ ಆಧಾರದಲ್ಲಿ ನಿರ್ಧರಿಸಿರುವ 12 ವಾರಗಳ ಮೊದಲು ಎರಡನೇ ಡೋಸ್ ಅನ್ನು ಪಡೆದುಕೊಳ್ಳಲು  ಒತ್ತಾಯಿಸುವುದು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ  ಎಂದು ಮನವಿಯಲ್ಲಿ ಹೇಳಲಾಗಿದೆ.

Follow Us:
Download App:
  • android
  • ios