ತಿರು​ವ​ನಂತ​ಪು​ರ (ಮಾ.12): 2018ರಲ್ಲಿ ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದು​ರಾದ ಘಟ​ನಾ​ವ​ಳಿ​ಗಳ ಬಗ್ಗೆ ಕೇರ​ಳದ ದೇವಸ್ವಂ ಸಚಿವ ಕಡ​ಕಂಪಲ್ಲಿ ಸುರೇಂದ್ರನ್‌ ಅವರು ವಿಷಾದ ವ್ಯಕ್ತ​ಪ​ಡಿ​ಸಿ​ದ್ದಾರೆ.

 ಸ್ತ್ರೀಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಆದೇಶ ಪಾಲನೆಗೂ ಮುನ್ನ ಭಕ್ತರು, ರಾಜ​ಕೀಯ ಮುಖಂಡರು ಮತ್ತು ಸಾರ್ವ​ಜ​ನಿಕರ ಅಭಿ​ಪ್ರಾಯ ಪಡೆಯಲಾಗುವುದು ಎಂದಿದ್ದಾರೆ. 

ಅರೆನಗ್ನ ದೇಹದ ಮೇಲೆ ಮಗನಿಂದ ಚಿತ್ರ ಬರೆಸಿಕೊಂಡ ಅಯ್ಯಪ್ಪ ಹೋರಾಟಗಾತಿ ರೆಹನಾ! ..

ಚುನಾವಣೆ ವೇಳೆ ಅವರು ಈ ಹೇಳಿಕೆ ನೀಡಿರುವುದು ರಾಜಕೀಯ ಉದ್ದೇಶಕ್ಕಾಗಿ ಎಂದು ವಿಶ್ಲೇಷಿಸಲಾಗಿದೆ. ಈ ನಡುವೆ ಮಹಿ​ಳೆ​ಯರ ಪ್ರವೇ​ಶಕ್ಕೆ ಅವ​ಕಾಶ ಕಲ್ಪಿ​ಸಿದ ತಮ್ಮದೇ ಸರ್ಕಾ​ರದ ಬಗ್ಗೆ ಕ್ಷಮೆ ಕೋರು​ವಂತೆ ಕಾಂಗ್ರೆಸ್‌ ಮತ್ತು ಬಿಜೆಪಿ, ಸಚಿವ ಸುರೇಂದ್ರನ್‌ ಅವ​ರನ್ನು ಒತ್ತಾ​ಯಿ​ಸಿವೆ.