ಕೇರಳದ ಕೋಝಿಕೋಡ್‌ನಲ್ಲಿ ಪುಟ್ಟ ಬಾಲಕಿಯೊಬ್ಬಳು ಅಜಾಗರೂಕತೆಯಿಂದ ರಸ್ತೆ ದಾಟಲು ಯತ್ನಿಸಿದ್ದಾಳೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್‌ನ ಚಕ್ರದಡಿ ಸಿಲುಕುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಖಾಸಗಿ ಬಸ್ ಅಡಿಗೆ ಬೀಳುತ್ತಿದ್ದ ಬಾಲಕಿ ಪವಾಡದಂತೆ ಪಾರು
ಕೋಝಿಕೋಡ್: ವಾಹನಗಳು ವೇಗವಾಗಿ ಚಲಿಸುತ್ತಿದ್ದ ವೇಳೆ ಪುಟ್ಟ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ರಸ್ತೆ ದಾಟುವುದಕ್ಕೆ ಹೋಗಿದ್ದಾಳೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ಸೊಂದರಿಂದ ಆಕೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಹೌದು ಅದು ಅಕ್ಷರಶಃ ಕೂದಲೆಳೆ ಅಂತರವೇ ಆಗಿತ್ತು. ಬಾಲಕಿ ಇನ್ನೇನು ಒಂದು ಹೆಜ್ಜೆ ಮುಂದಿಟ್ಟಿದ್ದರೂ ಆಕೆ ಬದುಕುಳಿಯುತ್ತಿರಲಿಲ್ಲ. ಖಾಸಗಿ ವಾಹನದ ಬೃಹತ್ ಚಕ್ರಗಳಿಗೆ ಸಿಲುಕಿ ಆಕೆ ಅಪ್ಪಚ್ಚಿ ಆಗುತ್ತಿದ್ದಿದ್ದು ಪಕ್ಕಾ ಆದರೆ ಆ ಕ್ಷಣದಲ್ಲಿ ದೇವರೇ ತಡೆದಂತೆ ಆಕೆ ಹಿಂದೆ ಸರಿದಿದ್ದು ಆಕೆಯ ಜೀವ ಉಳಿದಿದೆ. ವೀಡಿಯೋ ನೋಡಿದ ಅನೇಕರು ಆ ಭಯಾನಕ ಕ್ಷಣ ನೋಡಿ ಒಂದು ಕ್ಷಣ ದಂಗಾಗಿದ್ದು, ದೇವರೇ ಕಾಪಾಡಿದ, ಪೋಷಕರು ಮಾಡಿದ ಪುಣ್ಯ ಆಕೆಯನ್ನು ಕಾಪಾಡಿತು ಎಂದು ಉದ್ಘರಿಸುತ್ತಿದ್ದಾರೆ.
ಇದನ್ನೂ ಓದಿ: ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ
ಕೇರಳದ ಕೋಝಿಕೋಡ್‌ನ ಕೊಡಿಯತ್ತೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಅದು ಡಿವೈಡರ್ ಇಲ್ಲದ ಎರಡು ಲೇನ್‌ಗಳ ರಸ್ತೆ ಇದಾಗಿದ್ದು, ಒಂದು ಲೇನ್ ರಸ್ತೆಯ ಒಂದು ಬದಿ ಆಟೋ ನಿಂತಿದೆ. ಬಹುಶಃ ಆ ಬಾಲಕಿ ಆಟೋದ ಇಳಿದಿರಬೇಕು. ಇಳಿದವಳೇ ರಸ್ತೆಯ ಇನ್ನೊಂದು ಬದಿಯಲ್ಲಿ ತನ್ನ ಸಂಬಂಧಿಕರೊಬ್ಬರು ನಿಂತಿರುವುದನ್ನು ಅವಳು ಗಮನಿಸಿದಳು. ಹೀಗಾಗಿ ಉತ್ಸಾಹದಿಂದ, ಆ ಮಗು ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಮರೆತು ಮುಂಬರುವ ವಾಹನಗಳ ಸಂಚಾರವನ್ನು ಗಮನಿಸದೇ ಸಂಬಂಧಿಕರ ಬಳಿಗೆ ಓಡಿ ಹೋಗಲು ಮುಂದಾಗಿದ್ದಾಳೆ.
ಇದನ್ನೂ ಓದಿ: ವಾರಣಾಸಿ ಸಿನಿಮಾ ಶೂಟ್: ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು
ಇದೇ ವೇಳೆ ವೇಗವಾಗಿ ಖಾಸಗಿ ಬಸ್ ಬಂದಿದ್ದು,ಆ ಬಸ್ ಚಾಲಕನಿಗೂ ಆಟೋದ ಮುಂದಿನಿಂದ ಬಾಲಕಿ ಓಡಿದ್ದರಿಂದಾಗಿ ಆಕೆ ಕೊನೆಕ್ಷಣದಲ್ಲಿ ಕಾಣಿಸಿದ್ದಿರಬಹುದು. ಅದೃಷ್ಟವಶಾತ್ ಬಸ್‌ನ ಚಕ್ರ ಬಾಲಕಿ ಮೇಲೆ ಹರಿಯುವುದು ಪವಾಡದಂತೆ ತಪ್ಪಿದ್ದು, ಬಸ್‌ನ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ತುಸು ಮುಂದೆ ಹೋಗಿ ಬಸ್ ನಿಲ್ಲಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಇತ್ತ ಬಾಲಕಿ ಮರಳಿ ಆಟೋದ ಬಳಿ ಬಂದಿದ್ದಾಳೆ.

ಘಟನೆಯಿಂದಾಗಿ ಬಾಲಕಿ ಸ್ಪಷ್ಟವಾಗಿ ಭಯಗೊಂಡಿದ್ದು, ಆಕೆಯ ಪೋಷಕರು ಅಥವಾ ಇತರ ವಯಸ್ಕರು ಕುಳಿತಿದ್ದ ಆಟೋರಿಕ್ಷಾ ಕಡೆಗೆ ಓಡಿ ಬಂದಿದ್ದಾಳೆ. ಇತ್ತ ಆಟೋರಿಕ್ಷಾ ತನ್ನ ಮುಂದಿದ್ದರಿಂದ ತನಗೆ ಆಕೆ ಕಾಣಿಸಿಲ್ಲ ಎಂದು ಬಸ್ ಚಾಲಕ ಹೇಳಿದ್ದಾನೆ. ಅನಾಹುತದಿಂದ ಮಗುವನ್ನು ಪಾರು ಮಾಡುವಲ್ಲಿ ಯಶಸ್ವಿಯಾದ ಬಸ್ ಚಾಲಕ ಘಟನೆಯಿಂದ ಆಘಾತಗೊಂಡಿದ್ದಾರೆ. ಈ ಆಘಾತದಿಂದ ಹೊರಬರಲು ಅವರು ಎರಡು ದಿನ ರಜೆ ತೆಗೆದುಕೊಂಡರು ಎಂದು ವರದಿಯಾಗಿದೆ. ಅಲ್ಲದೇ ಅವರು ಬಸ್ ನಿಲ್ಲಿಸಿ ಮಗುವಿನ ಪೋಷಕರ ಬಳಿ ಮಾತನಾಡಿಸುವುದಕ್ಕೆ ಬಂದಿದ್ದು, ಈ ವೇಳೆ ಮಗುವಿಗೆ ಏನು ಆಗಿಲ್ಲದ ಕಾರಣ ಮಗುವಿನ ಪೋಷಕರು ಬಸ್ ನಿಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿ ಅವರನ್ನು ಅಲ್ಲಿಂದ ಕಳುಹಿಸಿದ್ದಾಗಿ ವರದಿಯಾಗಿದೆ.


