Asianet Suvarna News Asianet Suvarna News

ಕಾಶ್ಮೀರದಲ್ಲಿ ನಾಪತ್ತೆಯಾದ ಹಿಮ: ತಾಪಮಾನ ಹೆಚ್ಚಳಕ್ಕೆ ಕರಗಿದ ಪ್ರವಾಸೋದ್ಯಮ, ರೈತರಲ್ಲೂ ಆತಂಕ!

ಹಿಮದ ಕೊರತೆಯು ಕೇವಲ ಸ್ಕೀ ಉದ್ಯಮವನ್ನು ಆತಂಕಕ್ಕೆ ದೂಡಿರುವುದು ಮಾತ್ರವಲ್ಲದೆ, ಕಾಶ್ಮೀರದ ಆರ್ಥಿಕತೆಯ ಆಧಾರವಾಗಿರುವ ಪ್ರವಾಸೋದ್ಯಮ ಹಾಗೂ ಕೃಷಿಯ ಮೇಲೂ ಆತಂಕಕಾರಿ ಪರಿಣಾಮ ಬೀರುತ್ತಿದೆ.

kashmir s ski industry melts as temperatures rise in gulmarg ash
Author
First Published Jan 20, 2024, 8:15 PM IST

ಗುಲ್‌ಮಾರ್ಗ್‌ (ಜನವರಿ 20, 2024): ಹಿಮಾಲಯದಲ್ಲಿ ಚಳಿಗಾಲ ಅಂದರೆ ಹಿಮದ ಹೊದಿಕೆ ಎಂದೇ ಅರ್ಥೈಸುತ್ತದೆ. ಅದ್ರಲ್ಲೂ ಕಾಶ್ಮೀರದ ಗುಲ್‌ಮಾರ್ಗ್‌ ವಿಶ್ವದ ಅತಿ ಎತ್ತರದ ಸ್ಕೀ ರೆಸಾರ್ಟ್‌ಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ಸಾವಿರಾರು ಪ್ರವಾಸಿಗರು ಇಲ್ಲಿ ತುಂಬಿಕೊಂಡಿರುತ್ತಾರೆ. 

ಆದರೆ, ಈ ವರ್ಷ ಹಿಮಪಾತ ಮಾಯವಾಗಿದ್ದು, ಇಳಿಜಾರುಗಳು ಕೂಡ ಕಂದು ಬಣ್ಣ ಹಾಗೂ ಬೋಳು ಬೋಳಾಗಿದೆ. ಇದು ಬಿಸಿಯಾಗುತ್ತಿರುವ ಗ್ರಹದಿಂದ ಉಂಟಾದ ಹವಾಮಾನದ ಪ್ರಭಾವಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಜನವರಿಯಲ್ಲೂ ಕಾಶ್ಮೀರ, ಲಡಾಖ್‌ನಲ್ಲಿ ಚಳಿ, ಹಿಮ ಕಡಿಮೆಯಾಗಿದ್ಯಾಕೆ? ವಿಜ್ಞಾನಿಗಳು ಹೇಳಿದ್ದೀಗೆ..

ಹಿಮದ ಕೊರತೆಯು ಕೇವಲ ಸ್ಕೀ ಉದ್ಯಮವನ್ನು ಆತಂಕಕ್ಕೆ ದೂಡಿರುವುದು ಮಾತ್ರವಲ್ಲದೆ, ಕಾಶ್ಮೀರದ ಆರ್ಥಿಕತೆಯ ಆಧಾರವಾಗಿರುವ ಪ್ರವಾಸೋದ್ಯಮ ಹಾಗೂ ಕೃಷಿಯ ಮೇಲೂ ಆತಂಕಕಾರಿ ಪರಿಣಾಮ ಬೀರುತ್ತಿದೆ. ಇದನ್ನು ಕಾಶ್ಮೀರಿಗರ ಮಾತಲ್ಲೇ ಕೇಳಿ..

ಈ ಹಿಮರಹಿತ ಗುಲ್‌ಮಾರ್ಗ್‌ ನೋಡುವಾಗ, ನನಗೆ ಪ್ರತಿದಿನ ಅಳಬೇಕೆಂದು ಅನಿಸುತ್ತದೆ ಎಂದು ಸಾಹಸ ಪ್ರವಾಸ ನಿರ್ವಾಹಕ ಮುಬಾಶಿರ್ ಖಾನ್ ಹೇಳಿದ್ದಾರೆ. ತಮ್ಮ ವ್ಯಾಪಾರದ ಕುಸಿತದೊಂದಿಗೆ ಮದುವೆಯ ಪ್ಲ್ಯಾನ್‌ ಅನ್ನೂ ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ. ಹಾಗೂ, ತಾನು ಇಲ್ಲಿ ಕೆಲಸ ಮಾಡಿದ 20 ವರ್ಷಗಳಲ್ಲಿ, ಜನವರಿಯಲ್ಲಿ ಗುಲ್‌ಮಾರ್ಗ್‌ನಲ್ಲಿ ನಾನು ಮೊದಲ ಬಾರಿಗೆ ಹಿಮವೇ ಇಲ್ಲದಿರುವುದನ್ನು ನೋಡಿದ್ದೇನೆ ಎಂದೂ ಮಜೀದ್ ಬಕ್ಷಿ ಹೇಳಿದರು, 

ಹಿಮವಿಲ್ಲದ ಕಾಶ್ಮೀರ; ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದ ವಿಂಟರ್ ವಂಡರ್‌ಲ್ಯಾಂಡ್!

ಇನ್ನು, ಹೆಚ್ಚಿನ ಖರ್ಚು ಮಾಡುವ ಪ್ರವಾಸಿಗರಿಗೆ ಹೆಲಿಸ್ಕಿಯಿಂಗ್ ಸೇವೆಯು ನಿಷ್ಕ್ರಿಯವಾಗಿದೆ. ನಮ್ಮ ಅತಿಥಿಗಳು ಮುಖ್ಯವಾಗಿ ಸ್ಕೀಯರ್‌ಗಳು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದ್ದಾರೆ ಎಂದು ಹೋಟೆಲ್ ಮ್ಯಾನೇಜರ್ ಹಮೀದ್ ಮಸೂದಿ ಹೇಳಿದರು. ಹಾಗೆ, ಪ್ರವಾಸಕ್ಕೆ ಬರುವವರು ಹಿಮವಿಲ್ಲದಿರುವುದನ್ನು ನೋಡಿ ನಿರಾಶೆಗೊಂಡಿದ್ದಾರೆ ಎಂದೂ ಹೇಳಿದ್ದಾರೆ.

ಸ್ಕೀ ಲಿಫ್ಟ್‌ಗಳನ್ನು ಮುಚ್ಚಲಾಗಿದೆ, ಬಾಡಿಗೆ ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ಹೊಸದಾಗಿ ನಿರ್ಮಿಸಲಾದ ಐಸ್ ರಿಂಕ್ ಡ್ಯಾಂಕ್ ನೀರಿನ ಕೊಳವಾಗಿದೆ ಎಂದೂ ತಿಳಿದುಬಂದಿದೆ. ಈ ಮಧ್ಯೆ, ಪ್ರಸ್ತುತ ಶುಷ್ಕ ತಾಪಮಾನವು ಹವಾಮಾನ ವೈಪರೀತ್ಯದ ಘಟನೆಯಾಗಿದೆ - ಇದು ಭವಿಷ್ಯದಲ್ಲಿ ಹೆಚ್ಚು ತೀವ್ರವಾಗಿರುತ್ತದೆ ಮತ್ತು ಆಗಾಗ್ಗೆ ಆಗುತ್ತದೆ ಎಂದು ಊಹಿಸಲಾಗಿದೆ ಎಂದು ಕಾಶ್ಮೀರದ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಹವಾಮಾನ ವಿಜ್ಞಾನಿ ಶಕಿಲ್ ರೋಮ್‌ಶೂ ಆತಂಕ ವ್ಯಕ್ತಪಡಿಸಿದ್ದಾರೆ.

ಗುಲ್‌ಮಾರ್ಗ್‌ನಲ್ಲಿ, ಹೋಟೆಲ್ ಬುಕ್ಕಿಂಗ್ ಮುಕ್ಕಾಲು ಭಾಗದಷ್ಟು ಕುಸಿದಿದೆ ಎಂದು ಪ್ರವಾಸೋದ್ಯಮ ವೃತ್ತಿಪರರು ಹೇಳಿದ್ದು, ನೂರಾರು ಗೈಡ್‌ಗಳು ಮತ್ತು ಸ್ಕೂಟರ್ ಚಾಲಕರು ಬಿಸಿಲಿನಲ್ಲಿ ಕಾಯುತ್ತಾ, ಹಿಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಶೇ. 70 ರಷ್ಟು ಸ್ಕೀಯಿಂಗ್ ಬುಕ್ಕಿಂಗ್ ರದ್ದಾಗಿದೆ ಎಂದೂ ತಿಳಿದುಬಂದಿದೆ.

ಕಾಶ್ಮೀರವು ಕಡಿಮೆ ಮಳೆಯನ್ನು ದಾಖಲಿಸಿದೆ ಮತ್ತು ಕಳೆದ ವರ್ಷದ ಶರತ್ಕಾಲದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಆರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು, ಕಾಶ್ಮೀರದಾದ್ಯಂತ ಮಳೆಯು ಕಳೆದ ವರ್ಷಗಳಿಗಿಂತ 80 ಪ್ರತಿಶತದಷ್ಟು ಕಡಿಮೆಯಾಗಿದೆ. ಗುಲ್‌ಮಾರ್ಗ್‌ ಕೆಲವು ಹಿಮ ಮಳೆಗಳನ್ನು ಪಡೆದರೂ, ಅದು ಶೀಘ್ರದಲ್ಲೇ ಕರಗಿತು.
ಇನ್ನೊಂದೆಡೆ, ಬದಲಾಗುತ್ತಿರುವ ಹವಾಮಾನದ ಮಾದರಿಗಳು ಈಗಾಗಲೇ ಕೃಷಿ ಪದ್ಧತಿಯನ್ನು ಬದಲಾಯಿಸಿವೆ. ಹಿಮ ಕರಗುವಿಕೆಯು ಸಾಮಾನ್ಯವಾಗಿ ತುಂಬಿರುವ ನದಿಗಳನ್ನು ರೀಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ವಾರ, ಕಾಶ್ಮೀರದ ಅಧಿಕಾರಿಗಳು ನೀರಿನ ಕೊರತೆ ಮತ್ತು ಕಾಡಿನ ಬೆಂಕಿಯ ಅಪಾಯದ ಬಗ್ಗೆ ಎಚ್ಚರಿಸಿದ್ದು, ಅನೇಕ ಕಾಡಿನ ಪ್ರದೇಶಗಳು ಒಣಗುತ್ತಿವೆ.

ಭತ್ತದ ಗದ್ದೆಗಳಿಗೆ ಯಥೇಚ್ಛ ನೀರು ಬೇಕಾಗಿರುವ ಕಾರಣ ಭತ್ತ ಬೆಳೆಯುತ್ತಿರೋ ರೈತರು ಹಣ್ಣು ಬೆಳೆಯಲು ಆರಂಭಿಸಿದ್ದಾರೆ. ಆದರೆ ಆ ಬೆಳೆ ಕೂಡ ಅಪಾಯದಲ್ಲಿದೆ. ಶುಷ್ಕ ತಾಪಮಾನ ಮತ್ತು ಬಿಸಿಲಿನಿಂದ ಕೆಲವು ಮರಗಳು ಈಗಾಗಲೇ ಹೂಬಿಡುತ್ತಿವೆ. ಅಂದರೆ, 2 ತಿಂಗಳಿಗಿಂತ ಮೊದಲೇ ಅರಳುತ್ತಿದೆ.
 

Follow Us:
Download App:
  • android
  • ios