ಭವ್ಯ ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿ ಅಧಿಕೃತ ಆಯ್ಕೆ!

ಭಗವವಾನ್ ರಾಮಮಂದಿರ ಪ್ರಾಣಪ್ರತಿಷ್ಠೆಗೆ ವಿಶ್ವವೇ ಕಾತರಗೊಂಡಿದೆ. ಇದೀಗ ಕನ್ನಡಿಗರ ಸಂತಸ ಇಮ್ಮಡಿಗೊಂಡಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ ಮೂರ್ತಿ ಆಯ್ಕೆ ನಡೆದಿದೆ. ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀಬಾಲರಾಮನ ಮೂರ್ತಿ ಆಯ್ಕೆಗೊಂಡಿದೆ.
 

Karnataka sculptor Arun Yogiraj sculpted Bhagwan Shri Ramlalla Sarkar selected for Ram Mandir says Trust ckm

ಆಯೋಧ್ಯೆ(ಜ.15)  ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ಮುಖ್ಯ ವಿಗ್ರಹವಾಗಿ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮದ ನಡುವೆ ಕನ್ನಡಿಗರ ಸಂಭ್ರಮ ಇಮ್ಮಡಿಯಾಗಿದೆ. ಮೈಸೂರಿನ ಅರುಣ್ ಯೋಗಿರಾಜ್‌, ಕರ್ನಾಟಕದ ಇಡಗುಂಜಿಯ ಜಿ.ಎಲ್‌.ಭಟ್‌ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆಗೆ ರಾಮಲ್ಲಾ ವಿಗ್ರ ಕೆತ್ತನೆ ಜವಾಬ್ದಾರಿ ನೀಡಲಾಗಿತ್ತು. ಈ ಪೈಕಿ ಅರುಣ್ ಯೋಗಿರಾಜ್ ಕೆತ್ತನೆಯ ಕೃಷ್ಣ ಶಿಲೆಯ ಬಾಲರಾಮನ ವಿಗ್ರಹ ಅಂತಿಮವಾಗಿ ಆಯ್ಕೆಯಾಗಿದೆ ಎಂದು ತೀರ್ಥ ಟ್ರಸ್ಟ್ ಹೇಳಿದೆ.  

ಕೃಷ್ಣಶಿಲೆ ಆಯ್ಕೆಮಾಡಿಕೊಂಡು ಅರುಣ್ ಯೋಗಿರಾಜ್ ಬಾಲರಾಮನ ಮೂರ್ತಿ ಕೆತ್ತನೆ ಆರಂಭಿಸಿದ್ದರು. 6 ತಿಂಗಳಲ್ಲಿ ವಿಗ್ರಹ ಕೆತ್ತನೆ ಪೂರ್ಣಗೊಳಿಸಿದ್ದಾರೆ. ಕೊಪ್ಪಳದ ಶಿಲ್ಪಿ ಪ್ರಕಾಶ್ ಗುರುತಿಸಿದ ಕೃಷ್ಣಶಿಲೆಯಲ್ಲಿ ಆಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲಾಗಿದೆ.  1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಯೋಗಿರಾಜ್ ಅವರ ಕಪ್ಪು ಶಿಲೆಯ ಬಾಲರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. 

ಜ.23ರಿಂದ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತ, ಆಯೋಧ್ಯೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸುದ್ದಿಗೋಷ್ಠಿ!

ಗ್ರಹದ ಮೇಲೆ ನೀರು ಹಾಗೂ ಪಂಚಾಮೃತ ಅಭಿಷೇಕ ಮಾಡಿದರೂ ವಿಗ್ರಹದ ಕಲ್ಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಅಲ್ಲದೆ, ವಿಗ್ರಹದ ಅಭಿಷೇಕದಿಂದ ತೆಗೆದ ತೀರ್ಥ ಹಾಗೂ ಪಂಚಾಮೃತ ಸೇವಿಸಿದರೆ ಯಾರ ದೇಹದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಾಲರಾಮನ ವಿಗ್ರಹ ಆಯ್ಕೆ ಮಾಡಲಾಗಿದೆ. ಈ ಪೈಕಿ ಮೈಸೂರಿನ ಹೆಮ್ಮಯೆ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಆಯ್ಕೆಯಾಗಿರುವುದು ಕನ್ನಡಿಗ ಸಂಭ್ರಮ ಹೆಚ್ಚಿಸಿದೆ.

 

 

ಇತ್ತೀಚೆಗೆ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಆಯ್ಕಗೊಂಡಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ವೇಳೆ ಸ್ಪಷ್ಟನೆ ನೀಡಿದ ರಾಮಜನ್ಮಭೂಮಿ ಟ್ರಸ್ಟ್, ಟ್ರಸ್ಟ್ ಸಮಿತಿಯ ಸದಸ್ಯರು ವಿಗ್ರಹ ಆಯ್ಕೆಯನ್ನು ಜನವರಿ 15ರೊಳಗೆ ಅಂತಿಮಗೊಳಿಸುತ್ತಾರೆ. ಸದ್ಯ ಯಾವುದೇ ವಿಗ್ರಹ ಆಯ್ಕೆಯಾಗಿಲ್ಲ ಎಂದಿದ್ದರು. ಇದರಂತೆ ಟ್ರಸ್ಟ್ ಇದೀಗ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿಯನ್ನು ಅಂತಿಮಗೊಳಿಸಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ 11 ದಿನ ಕಠಿಣ ವೃತ, ಜೊತೆಗೊಂದು ಸಂದೇಶ!

Latest Videos
Follow Us:
Download App:
  • android
  • ios