Published : Feb 20 2025, 08:20 AM IST| Updated : Feb 20 2025, 08:19 PM IST Karnataka News Live ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣ ವಚನ, ಪಿಎಂ ಮೋದಿ ಭಾಗಿ
ಸಾರಾಂಶ
ದೆಹಲಿಯಲ್ಲಿ 26 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೇರಿದೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣವಚನವ ಸ್ವೀಕರಿಸಿದ್ದಾರೆ. ಇದರ ಜೊತೆಗೆ ಕೆಲ ಸಿಚವರು ಪ್ರಮಾಣವಚನವ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಇಂದು ಸಂಜೆ ರೇಖಾ ಗುಪ್ತ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ. ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್, ಆತಿಶಿ ಮರ್ಲಿನಾ ನಂತರ ಇದೀಗ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅಧಿಕಾರ ವಹಿಸಿಕೊಂಡಿದ್ದಾರೆ. ಹಲವು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಿಎಂಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆದಿತ್ತು. ಖಾತೆಗಳ ಹಂತಿಕೆಯೂ ನಡೆದಿದೆ. ಗೃಹ ಖಾತೆ, ಹಣಕಾಸು ಖಾತೆಗಳನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ದೆಹಲಿ ಸರ್ಕಾರ, ರಾಷ್ಟ್ರ ಹಾಗೂ ರಾಜ್ಯದಲ್ಲಿ ನಡೆದ ಪ್ರಮುಖ ಬೆಳವಣಿಗಳಿಗೆ ಸಂಕ್ಷಿಪ್ತ ಸುದ್ದಿ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ರಂಜಾನ್ ವೇಳೆ ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ವಿನಾಯಿತಿ ಕೊಡಿ: ಸಿಎಂಗೆ ಕೆಪಿಸಿಸಿ ಪತ್ರ!
WPL T20 ಕ್ರಿಕೆಟ್ ಪಂದ್ಯದ ದಿನ ಮೆಟ್ರೋ ರೈಲು ಸಂಚಾರದ ಅವಧಿ ವಿಸ್ತರಿಸಿದ ಬಿಎಂಆರ್‌ಸಿಎಲ್!
ಕಿವೀಸ್ ಎದುರಿನ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೊಂದು ಶಾಕ್! ಗಾಯದ ಮೇಲೆ ಮತ್ತೊಂದು ಬರೆ
ಏಪ್ರಿಲ್‌ನಲ್ಲಿ ಸಿದ್ಧರಾಮಯ್ಯ ರಾಜೀನಾಮೆ, ಲಕ್ಷ್ಮೀ ಹೆಬ್ಬಾಳ್ಕರ್ ಮುಂದಿನ ಸಿಎಂ ಎಂದ ಜ್ಯೋತಿಷಿ ಪ್ರಶಾಂತ್ ಕಿಣಿ!
ಜಗನ್‌ಗೆ ಸೂಕ್ತ ಭದ್ರತೆಗೆ ಮನವಿ: ಆಂಧ್ರ ರಾಜ್ಯಪಾಲರ ಭೇಟಿ ಮಾಡಿದ ವೈಎಸ್‌ಆರ್‌ಪಿ ಶಾಸಕರು
ಮಾಜಿ ಸಿಎಂ ಹಾಗೂ ವೈಎಸ್‌ಆರ್‌ಪಿ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಭದ್ರತೆಯಲ್ಲಿ ಲೋಪವಾಗಿದೆ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಇಂದು ವೈಎಸ್‌ಆರ್‌ಪಿ ಶಾಸಕರು ಆಂಧ್ರ ಪ್ರದೇಶ ರಾಜ್ಯಪಾಲರನ್ನು ಭೇಟಿ ಮಾಡಿದರು.
Scroll to load tweet…
ರೇಖಾ ಗುಪ್ತಾ-ಮಮತಾ ಬ್ಯಾನರ್ಜಿ: ಭಾರತ ಕಂಡ 10 ಪ್ರಮುಖ ಮಹಿಳಾ ಮುಖ್ಯಮಂತ್ರಿಗಳು!
ಭಾರತದ ರಾಜಕೀಯವನ್ನು ರೂಪಿಸುವಲ್ಲಿ, ದೂರದೃಷ್ಟಿ ಮತ್ತು ದೃಢನಿಶ್ಚಯದಿಂದ ರಾಜ್ಯಗಳನ್ನು ಮುನ್ನಡೆಸುವಲ್ಲಿ ಮಹಿಳಾ ನಾಯಕರು ಅಪಾರ ಪಾತ್ರ ವಹಿಸಿದ್ದಾರೆ. ದೆಹಲಿಯ ಹೊಸ ಸಿಎಂ ಆದ ರೇಖಾ ಗುಪ್ತಾರಿಂದ ಹಿಡಿದು, ಮಮತಾ ಬ್ಯಾನರ್ಜಿಯಂಥ ಅನುಭವಿ ನಾಯಕಿಯವರೆಗೆ ದೇಶದ ರಾಜಕೀಯದ ಮೇಲೆ ಇವರು ಮೂಡಿಸಿರುವ ಪ್ರಭಾವ ಅಪಾರವಾದದ್ದು, ಭಾರತದ ರಾಜಕೀಯ ಇತಿಹಾಸವನ್ನು ರೂಪಿಸಲು ಸಹಾಯ ಮಾಡಿದ 10 ಪ್ರಮುಖ ಮಹಿಳಾ ಮುಖ್ಯಮಂತ್ರಿಗಳ ವಿವರ ಇಲ್ಲಿದೆ. ಸುಚೇತಾ ಕೃಪಾಲಿನಿಯಿಂದ ರೇಖಾ ಗುಪ್ತಾವರೆಗೆ ಒಟ್ಟು 18 ಮಂದಿ ಮಹಿಳೆಯರು ಭಾರತದ ರಾಜ್ಯಗಳ ಮುಖ್ಯಮಂತ್ರಿಯಾಗಿದ್ದಾರೆ.
ರೇಖಾ ಗುಪ್ತಾ-ಮಮತಾ ಬ್ಯಾನರ್ಜಿ: ಭಾರತ ಕಂಡ 10 ಪ್ರಮುಖ ಮಹಿಳಾ ಮುಖ್ಯಮಂತ್ರಿಗಳು!
ಕೆ ಮಂಜು ಪುತ್ರ ನಟ ಶ್ರೇಯಸ್ ಕಾರು ಆಕ್ಸಿಡೆಂಡ್, ಶಿರಾ ಬಳಿ ಘಟನೆ!
ಸ್ಯಾಂಡಲ್‌ವುಡ್ ನಟ, ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ಕಾರು ಆಕ್ಸಿಡೆಂಡ್ ಆಗಿದೆ. 'ವಿಷ್ಣುಪ್ರಿಯಾ' ಪ್ರಮೋಷನ್ ಗೆ ದಾವಣಗೆರೆಗೆ ತೆರಳುತ್ತಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಬಿಎಂಡಬ್ಲ್ಯು ಕಾರು ಅಪಘಾತಕ್ಕೆ ಒಳಗಾಗಿದೆ. ಶಿರ ಬಳಿ ಶ್ರೇಯಸ್ ಮಂಜು ಕಾರು ಅಪಘಾತಕ್ಕೊಳಗಾಗಿದೆ...
ಅರವಿಂದ್ ಕೇಜ್ರಿವಾಲ್ ಸೋಲಿಸಿದ್ದ ಪರ್ವೇಶ್ ವರ್ಮಾ ಸೇರಿದಂತೆ 6 ಮಂದಿ ಸಚಿವರ ಪ್ರಮಾಣವಚನ!
ದೆಹಲಿ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ
ರಾಮಲೀಲಾ ಮೈದಾನಕ್ಕೆ ಆಗಮಿಸಿದ ರೇಖಾ ಗುಪ್ತಾ
ದೆಹಲಿಯ ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರಾಮಲೀಲಾ ಮೈದಾನಕ್ಕೆ ಆಗಮಿಸುತ್ತಿದ್ದಾರೆ. ಅವರು ಮತ್ತು ಅವರ ಸಚಿವ ಸಂಪುಟ ಶೀಘ್ರದಲ್ಲೇ ಇಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
Scroll to load tweet…
ಅಮ್ಮ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ: ರೇಖಾ ಗುಪ್ತಾ ಪುತ್ರ
ದೆಹಲಿಯ ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪುತ್ರ ನಿಕುಂಜ್ ಗುಪ್ತಾ ಮಾತನಾಡಿ, ಒಬ್ಬ ಮಹಿಳೆಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಒಳ್ಳೆಯ ವಿಚಾರ. ಅವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಅವರ 30 ವರ್ಷಗಳ ಕಠಿಣ ಪರಿಶ್ರಮ ಯಶಸ್ವಿಯಾಗಿದೆ. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಮತ್ತು ಇದನ್ನೆಲ್ಲಾ ಸ್ವತಃ ಮಾಡಿದ್ದಾರೆ. ಅವರಿಗೆ ಈ ಅವಕಾಶ ನೀಡಿದ್ದಕ್ಕಾಗಿ ನಾವು ಪ್ರಧಾನಿ ಮೋದಿ, ಪಕ್ಷ ಮತ್ತು ಎಲ್ಲರಿಗೂ ಧನ್ಯವಾದ ಹೇಳುತ್ತೇವೆ ಎಂದು ಹೇಳಿದ್ದಾರೆ.
Scroll to load tweet…
ದೆಹಲಿಗೆ ಮಹಿಳಾ ಮುಖ್ಯಮಂತ್ರಿ ನೇಮಿಸಿದ್ದಕ್ಕೆ ಧನ್ಯವಾದ: ಚಂದೋಲಿಯಾ
ನಾರಿ ಶಕ್ತಿಯನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ನಾನು ಧನ್ಯವಾದ ಹೇಳುತ್ತೇನೆ... ಭಾರತದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರು... ತ್ವರಿತ ಅಭಿವೃದ್ಧಿಗಾಗಿ ಕೆಲಸ ಮಾಡುವ ಯುವ ಮುಖಗಳು ಸಂಪುಟದಲ್ಲಿವೆ ಎಂದು ದೆಹಲಿಯಲ್ಲಿ ಮಹಿಳಾ ಸಿಎಂ ಆಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಸಂಸದ ಯೋಗೇಂದ್ರ ಚಂದೋಲಿಯಾ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಬಜೆಟ್ ಇಂದು ಮಂಡನೆ
ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಸುರೇಶ್ ಕುಮಾರ್ ಖನ್ನಾ ಇಂದು ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದು, ಅದಕ್ಕೂ ಮೊದಲು ತಮ್ಮ ನಿವಾಸದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
Scroll to load tweet…
ಸಚಿವನಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ದೇಗುಲದಲ್ಲಿ ಪ್ರಾರ್ಥನೆ
ಇಂದು ದೆಹಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಝಂಡೆವಾಲನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Scroll to load tweet…
ರಾಮಲೀಲಾ ಮೈದಾನದ ಹೊರಗೆ ಬಿಜೆಪಿ ಕಾರ್ಯಕರ್ತರ ಡಾನ್ಸ್
ದೆಹಲಿಯ ರಾಮಲೀಲಾ ಮೈದಾನದ ಹೊರಗೆ ಸಂಭ್ರಮಾಚರಣೆ ಮುಂದುವರೆದಿದ್ದು, ಇಬ್ಬರು ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ನೃತ್ಯ ಮಾಡುವ ದೃಶ್ಯ ವೈರಲ್ ಆಗಿದೆ. ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಇಲ್ಲಿ ನಡೆಯಲಿದೆ.
Scroll to load tweet…
ಹಿಮಾಚಲದ ಚೋಪಲ್‌ನಲ್ಲಿ ಮಳೆ, ಹಿಮಪಾತ: ಚೋಪಲ್-ದೇಹಾ ಪ್ರಮುಖ ರಸ್ತೆ ಬಂದ್
ಹಿಮಾಚಲ ಪ್ರದೇಶದ ನರಕಂದ ಚೋಪಲ್ ಉಪವಿಭಾಗದ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಮತ್ತು ಮಳೆ ಮುಂದುವರೆದಿದೆ. ಹೀಗಾಗಿ ಚೋಪಲ್-ದೇಹಾ ಪ್ರಮುಖ ರಸ್ತೆ ಮತ್ತು ಐದು-ಲಿಂಕ್ ರಸ್ತೆಗಳನ್ನು ಮುಚ್ಚಲಾಗಿದೆ. ಹಿಮ ತೆರವುಗೊಳಿಸಲು ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ರಸ್ತೆಗಳು ತೆರವುಗೊಳ್ಳುವವರೆಗೆ ವಾಹನಗಳು ಓಡಾಡದಂತೆ ನಿರ್ಬಂಧಿಸಲಾಗಿದೆ. ಇಲ್ಲಿಯವರೆಗೆ ವಿದ್ಯುತ್ ಮತ್ತು ನೀರು ಸರಬರಾಜು ಸಾಮಾನ್ಯವಾಗಿದೆ.
Scroll to load tweet…
ರಾಮಲೀಲಾ ಮೈದಾನದಲ್ಲಿ ಭಾರೀ ಭಿಗಿ ಭದ್ರತೆ