ಸ್ಯಾಂಡಲ್‌ವುಡ್ ನಟ, ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ಕಾರು ಆಕ್ಸಿಡೆಂಡ್ ಆಗಿದೆ. 'ವಿಷ್ಣುಪ್ರಿಯಾ' ಪ್ರಮೋಷನ್ ಗೆ ದಾವಣಗೆರೆಗೆ ತೆರಳುತ್ತಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಕಾರುಬಿಎಂಡಬ್ಲ್ಯು ಕಾರು ಅಪಘಾತಕ್ಕೆ ಒಳಗಾಗಿದೆ. ಶಿರ ಬಳಿ ಶ್ರೇಯಸ್ ಮಂಜು ಕಾರು ಅಪಘಾತಕ್ಕೊಳಗಾಗಿದೆ...
ಸ್ಯಾಂಡಲ್‌ವುಡ್ ನಟ, ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ಕಾರು ಆಕ್ಸಿಡೆಂಡ್ ಆಗಿದೆ. 'ವಿಷ್ಣುಪ್ರಿಯಾ' ಪ್ರಮೋಷನ್ ಗೆ ದಾವಣಗೆರೆಗೆ ತೆರಳುತ್ತಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಕಾರುಬಿಎಂಡಬ್ಲ್ಯು ಕಾರು ಅಪಘಾತಕ್ಕೆ ಒಳಗಾಗಿದೆ. ಶಿರ ಬಳಿ ಶ್ರೇಯಸ್ ಮಂಜು ಕಾರು ಅಪಘಾತಕ್ಕೊಳಗಾಗಿದೆ ಎನ್ನಲಾಗಿದೆ.
ಆದರೆ, ಈ ಕಾರು ಆಕ್ಸಿಡೆಂಟ್‌ನಿಂದ ನಟ ಶ್ರೇಯಸ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಓವರ್ ಟೇಕ್ ಮಾಡಲು ಬಂದ ಲಾರಿ
ಶ್ರೇಯಸ್ ಇದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಅನ್ನೋ ಮಾಹಿತಿ ಇದೆ. ಸಿನಿಮಾ ಪ್ರಮೋಶನ್‌ಗೆ ಹೋಗುತ್ತಿದ್ದ ನಟ ಶ್ರೇಯಸ್ ಹಾಗೂ ಜೊತೆಯಲ್ಲಿ ಇದ್ದವರು ಇದರಿಂದ ಶಾಕ್ ಅಗಿದ್ದಾರೆ.
ಕನ್ನಡ ಸ್ಟಾರ್ ನಟರ ಕೈ ತಪ್ಪಿದ ಸಿನಿಮಾಗಳಿವು, ಅವ್ರ ಫ್ಯಾನ್ಸ್‌ಗೆ ಹೇಳ್ಬೇಡಿ.. ಜಸ್ಟ್ ನೋಡಿ..!
ಕೆ ಮಂಜು ನಿರ್ಮಾಣದಲ್ಲಿ, ಶ್ರೇಯಸ್ ಮಂಜು ನಟನೆಯ ವಿಷ್ಣುಪ್ರಿಯಾ ಚಿತ್ರವು ನಾಳೆ, ಅಂದರೆ 21 ಫೆಬ್ರವರಿ 2025ರಂದು ಇಡೀ ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ಶ್ರೇಯಸ್ ಮಂಜು ನಟನೆಯಲ್ಲಿ ಈ ಚಿತ್ರವು ಮೂಡಿ ಬಂದಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈ ಚಿತ್ರದ ಪ್ರಮೋಶನ್ ಈಗಾಗಲೇ ಸಾಕಷ್ಟು ನಡೆದಿದೆ. ಆದರೆ, ನಾಳೆ ಚಿತ್ರ ಬಿಡುಗಡೆ ಇರೋ ಕಾರಣಕ್ಕೆ ಇಂದು ಚಿತ್ರದ ನಟ ಶ್ರೇಯಸ್ ಪ್ರಮೋಶ್‌ಗೆಂದು ಶಿರಾಗೆ ಹೋಗುತ್ತಿದ್ದರು.
ನಟ ಶ್ರೇಯಸ್ ಮಂಜು ಅವರು ಶಿರಾ ಬಳಿ ಹೋಗುತ್ತಿದ್ದಾಗೆ, ಹಿಂದಿನಿಂದ ಬಂದ ಲಾರಿಯೊಂದು ನಟನ ಬಿಎಂಡಬ್ಲು ಕಾರನ್ನು ಓವರ್‌ಟೇಕ್ ಮಾಡಲು ಹೋಗಿ ಹಿಂದಿನಿಂದ ಆ ಕಾರಿಗೆ ಗುದ್ದಿದೆ. ಇದರಿಂದ ಕಾರು ಸಾಕಷ್ಟು ಜಖಂ ಆಗಿದೆ. ಆದರೆ, ನಟ ಶ್ರೇಯಸ್ ಸೇರಿದಂತೆ ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?
ಅಂದಹಾಗೆ, ಶ್ರೇಯಸ್ ನಟನೆಯ 'ವಿಷ್ಣುಪ್ರಿಯಾ' ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟ ಶ್ರೇಯಸ್ ಅವರಿಗೆ ಜೋಡಿಯಾಗಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದಾರೆ. ಈ ಚಿತ್ರವು ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಸದ್ಯ ಈ ಚಿತ್ರದ ನಾಯಕ ನಟ ಅಪಘಾತ ಆಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದು ಖುಷಿಯ ಸಂಗತಿಯೇ ಸರಿ!
