Asianet Suvarna News Asianet Suvarna News

ತನ್ನ ನೀತಿಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ, 2 ಸಾವಿರ ನೋಟು ಹಿಂಪಡೆದ ಕೇಂದ್ರಕ್ಕೆ ಸಿದ್ಧರಾಮಯ್ಯ ಚಾಟಿ!

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಶುಕ್ರವಾರ ಮಾಡಿ ಹಠಾತ್‌ ನಿರ್ಧಾರದಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಆದರೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಟೀಕೆ ಮಾಡಿವೆ.

Karnataka CM siddaramaiah Comments on RBI withdraws Rs 2000 bank notes san
Author
First Published May 19, 2023, 9:04 PM IST

ಬೆಂಗಳೂರು (ಮೇ.19): ಹಠಾತ್‌ ನಿರ್ಧಾರದಲ್ಲಿ ಶುಕ್ರವಾರ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಸೆಪ್ಟೆಂಬರ್‌ 30ರ ಒಳಗಾಗಿ ಜನರು ತಮ್ಮಲ್ಲಿರುವ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಬಹುದು ಇಲ್ಲವೇ ಬ್ಯಾಂಕ್‌ಗಳಲ್ಲಿ ವಿನಿಯಮ ಮಾಡಿಕೊಳ್ಳಬಹುದು ಎಂದೂ ಹೇಳಿದೆ. ಆದರೆ, ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ಎಲ್ಲೂ ಬ್ಯಾನ್‌ ಎನ್ನುವ ಪದವನ್ನು ಬಳಸಿಲ್ಲ. ಸೆ. 30ರ ಒಳಗಾಗಿ ಬದಲಾಯಿಸಿಕೊಳ್ಳಿ ಎಂದಿರುವ ಆರ್‌ಬಿಐ ಅದರ ನಂತರ ಏನಾಗುತ್ತದೆ ಎಂದು ಹೇಳಿಲ್ಲ. ಇದರ ನಡುವೆ ವಿಪಕ್ಷಗಳು ಇದನ್ನು ಮತ್ತೊಂದು ನೋಟ್‌ಬ್ಯಾನ್‌ ಎಂದು ಹೇಳಿದೆ. ಆದರೆ, ಪ್ರಸ್ತುತ ಚಲಾವಣೆಯಲ್ಲಿ ಇರುವ 2 ಸಾವಿರ ರೂಪಾಯಿ ನೋಟುಗಳು ಶೇ. 10.8ರಷ್ಟು ಮಾತ್ರ. ಅಂದರೆ, ಮಾರುಕಟ್ಟೆಯಲ್ಲಿ 3.02 ಲಕ್ಷ ಕೋಟಿಯಷ್ಟು ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿವೆ. ಇನ್ನು 2 ಸಾವಿರ ರೂಪಾಯಿ ನೋಟುಗಳನ್ನು ಆರ್‌ಬಿಐ ವಾಪಾಸ್‌ ಪಡೆದುಕೊಳ್ಳಲಿದೆ ಅನ್ನೋದು ಈ ಹಿಂದೆಯೇ ಸುದ್ದಿಯಾಗಿತ್ತು. ಅದಕ್ಕೆ ಕಾರಣ, 2018ರಲ್ಲಿಯೇ 2 ಸಾವಿರ ರೂಪಾಯಿಯ ನೋಟುಗಳ ಹೊಸ ಮುದ್ರಣವನ್ನು ಆರ್‌ಬಿಐ ನಿಲ್ಲಿಸಿತ್ತು. ಈ ನಡುವೆ ಆರ್‌ಬಿಐನ ನಿರ್ಧಾರ ವಿಪಕ್ಷಗಳಿಗೆ ಕೇಂದ್ರ ಸರ್ಕಾರವನ್ನು ಟೀಕಿಸಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

'ನರೇಂದ್ರ ಮೋದಿ ಅವರಿಂದ ಮತ್ತೊಂದು ನೋಟ್‌ ಬ್ಯಾನ್‌.  ತನ್ನದೇ ನೀತಿಗಳ ಬಗ್ಗೆ ಸ್ವತಃ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ನೋಟುಗಳನ್ನು ಬ್ಯಾನ್‌ ಮಾಡುವುದೇ ನಿಮ್ಮ ಯೋಜನೆಯಾಗಿದ್ದರೆ, 2016ರಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನು ಪರಿಚಯಿಸಿದ್ದೇಕೆ? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ' ಎಂದು ಕರ್ನಾಟಕದ ನಿಯೋಜಿತ ಸಿಎಂ ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಇಲ್ಲದ ನೋಟ್ ಬ್ಯಾನ್ ನಿರ್ಧಾರದಿಂದ 2016 ರಲ್ಲಿ ಕ್ಯೂನಲ್ಲಿ ನಿಂತು ಹೈರಾಣಾದರು. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರ ಬಳಿ ಹಣವಿಲ್ಲ. ಯಾವ ಪುರುಷಾರ್ಥಕ್ಕಾಗಿ ₹ 2,000 ಮುಖ ಬೆಲೆಯ (RBI 2000 RS Note) ನೋಟ್ ಹಿಂಪಡೆತ. ಯಾವುದೇ, ದೂರದೃಷ್ಟಿತ್ವ ಇಲ್ಲದೇ ಜಾರಿಗೊಳಿಸಿ, ಜನ ಸಾಮಾನ್ಯರಿಗೆ ತೊಂದರೆ ಕೊಡುವುದೆ ಬಿಜೆಪಿಯ ಮಹಾನ್ ಸಾಧನೆ' ಎಂದು ಕರ್ನಾಟಕ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದೆ.

2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!

2016ರ ನವೆಂಬರ್ 8ರ ಭೂತ ಮತ್ತೊಮ್ಮೆ ರಾಷ್ಟ್ರವನ್ನು ಕಾಡಲು ಮರಳಿದೆ. ನೋಟು ಅಮಾನ್ಯೀಕರಣದ ಬಹು ಪ್ರಚಾರದ ಕ್ರಮವು ಈ ರಾಷ್ಟ್ರಕ್ಕೆ ಒಂದು ಸ್ಮಾರಕ ವಿಪತ್ತಾಗಿ ಮುಂದುವರಿದಿದೆ. ಹೊಸ 2000 ನೋಟುಗಳ ಪ್ರಯೋಜನಗಳ ಕುರಿತು ದೇಶಕ್ಕೆ ಉಪದೇಶ ಮಾಡಿದ ಪ್ರಧಾನಿ, ಇಂದು ಮುದ್ರಣವನ್ನು ನಿಲ್ಲಿಸಿದಾಗ ಆ ಭರವಸೆಗಳೆಲ್ಲ ಏನಾಯಿತು? ಇಂತಹ ಹೆಜ್ಜೆಯ ಉದ್ದೇಶವನ್ನು ಸರ್ಕಾರ ವಿವರಿಸಬೇಕು. ಸರ್ಕಾರ ತನ್ನ ಜನವಿರೋಧಿ ಮತ್ತು ಬಡವರ ವಿರೋಧಿ ಅಜೆಂಡಾವನ್ನು ಮುಂದುವರೆಸಿದೆ. ಮಾಧ್ಯಮಗಳು ಇಂತಹ ಕಠಿಣ ಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತವೆ ಮತ್ತು ಜಗತ್ತಿನಲ್ಲಿ 'ಚಿಪ್ ಕೊರತೆ' ಎಂದು ಹೇಳುವುದಿಲ್ಲ ಎಂದು ಭಾವಿಸುತ್ತೇವೆ' ಎಂದು ಪವನ್‌ ಖೇರಾ ಟ್ವೀಟ್‌ ಮಾಡಿದ್ದಾರೆ.

'ಚಿಪ್‌ ಕೂಡ ವಾಪಾಸ್‌ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್‌ ಟ್ರೋಲ್‌!

ಸ್ವಯಂಘೋಷಿತ ವಿಶ್ವಗುರುವಿನಿಂದ 2 ಸಾವಿರ ರೂಪಾಯಿ ನೋಟು ಬ್ಯಾನ್‌. ಇದು ಮೋದಿ ಸರ್ಕಾರದ 2ನೇ ದುರಂತಮಯ ನಿರ್ಧಾರ. ಮೊದಲು ನೀತಿ ಮಾಡಿ ನಂತರ ಯೋಚನೆ ಮಾಡುವ ವ್ಯಕ್ತಿ ಮೋದಿ' ಎಂದು ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios