'ಚಿಪ್ ಕೂಡ ವಾಪಾಸ್ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್ ಟ್ರೋಲ್!
ಹಠಾತ್ ನಿರ್ಧಾರದಲ್ಲಿ ಆರ್‌ಬಿಐ 2000 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧಾರ ಮಾಡಿದೆ. ಇದರ ಬೆನ್ನಲ್ಲಿಯೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತಾಗಿ ಭರ್ಜರಿ ಟ್ರೋಲ್ ಮಾಡಲಾಗಿದೆ.
ಬೆಂಗಳೂರು (ಮೇ.19): ಭಾವಪೂರ್ಣ ಶ್ರದ್ಧಾಂಜಲಿ, 2 ಸಾವಿರ ರೂಪಾಯಿ ಇನ್ನು ನೆನಪು ಮಾತ್ರ, 2 ಸಾವಿರ ರೂಪಾಯಿ ನೋಟ್ ಜೊತೆ ಚಿಪ್ ಕೂಡ ವಾಪಾಸ್ ಕೊಡ್ಬೇಕಾ?.. ಹೀಗೆ ಆರ್‌ಬಿಐನ ಹಠಾತ್ 2000 ರೂಪಾಯಿ ನೋಟು ಹಿಂಪಡೆಯುವ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯಿಸಿದೆ. ಇನ್ನೊಂದೆಡೆ ಆರ್‌ಬಿಐ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ, ಸ್ವಯಂಘೋಷಿತ ವಿಶ್ವಗುರುವಿನಿಂದ 2 ಸಾವಿರ ರೂಪಾಯಿ ನೋಟು ಬ್ಯಾನ್. ಇದು ಮೋದಿ ಸರ್ಕಾರದ 2ನೇ ದುರಂತಮಯ ನಿರ್ಧಾರ' ಎಂದು ಗೇಲಿ ಮಾಡಿದೆ. ಇನ್ನೂ ಕೆಲವರು ಇದನ್ನು ನೋಟು ಅಮಾನ್ಯೀಕರಣ 2.0 ಎಂದು ಹೇಳಿದ್ದಾರೆ. 'ಭಾರತದ ಒಟ್ಟು ಕರೆನ್ಸಿ ನೋಟುಗಳ 86% ರಷ್ಟನ್ನು ರದ್ದುಗೊಳಿಸಿದ ನಂತರ ಮೋದಿ ಅವರು 2016 ರಲ್ಲಿ ತಂದ 2000 ರೂ ನೋಟುಗಳನ್ನು ಈಗ ರದ್ದುಗೊಳಿಸಿದ್ದಾರೆ. ಕಾಲೇಜಿಗೆ ಹೋಗದ ಆದರೆ ಎರಡು ನಕಲಿ ಪದವಿಗಳನ್ನು ಹೊಂದಿರುವವರನ್ನು ನೀವು ಪ್ರಧಾನಿಯನ್ನಾಗಿ ಮಾಡಿದಾಗ ಇದು ಸಂಭವಿಸುತ್ತದೆ' ಎಂದು ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ. 2 ಸಾವಿರ ರೂಪಾಯಿಯನ್ನು ಚಲಾವಣೆಗೆ ತಂದಿದ್ದೂ ಮಾಸ್ಟರ್‌ಸ್ಟ್ರೋಕ್, ಬ್ಯಾನ್ ಮಾಡಿದ್ದೂ ಕೂಡ ಮಾಸ್ಟರ್‌ಸ್ಟ್ರೋಕ್, ಮೋದಿ ಸರ್ಕಾರದಲ್ಲಿ ಎಲ್ಲವೂ ಮಾಸ್ಟರ್ ಸ್ಟ್ರೋಕ್ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
'ನನ್ನ ಬಳಿ 2 ಸಾವಿರ ರೂಪಾಯಿ ನೋಟಿದೆ. ಇದರಲ್ಲಿರುವ ಚಿಪ್‌ಅನ್ನೂ ಕೂಡ ವಾಪಾಸ್ ಮಾಡ್ಬೇಕಾ..' ಎಂದು ಈ ನಿರ್ಧಾರವನ್ನು ಗೇಲಿ ಮಾಡುವಂತೆ ಒಬ್ಬರು ಟ್ವೀಟ್ ಮಾಡಿದ್ದಾರೆ. ಈ ನಿರ್ಧಾರದೊಂದಿಗೆ ರೇಡಿಯಂ ಲೈಟ್ ಹೊರಸೂಸುವ 2 ಸಾವಿರ ರೂಪಾಯಿ ನೋಟುಗಳು ಇನ್ನು ಮಾರುಕಟ್ಟೆಯಲ್ಲಿ ಇರೋದಿಲ್ಲ' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
'ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಎಲ್ಲಾ ಗೃಹಿಣಿಯರಿಗೂ 2 ಸಾವಿರ ರೂಪಾಯಿ ನೀಡುವ ತೀರ್ಮಾನ ಮಾಡಿದೆ. ಅದಕ್ಕಾಗಿಯೇ ಮೋದಿ ಸರ್ಕಾರವೀಗ 2 ಸಾವಿರ ರೂಪಾಯಿ ನೋಟನ್ನೇ ಬ್ಯಾನ್ ಮಾಡಿದೆ..' ಎಂದು ನರ್ನೇ ಕುಮಾರ್ ಎನ್ನುವವರು ಬರೆದುಕೊಂಡಿದ್ದಾರೆ. 'ಕಾಂಗ್ರೆಸ್‌ನ ಕರ್ನಾಟಕ ಯಶಸ್ಸನ್ನು ಡೈವರ್ಟ್ ಮಾಡುವ ಕಾರಣಕ್ಕಾಗಿ ಮತ್ತೊಂದು ತುಘಲಕ್ ಫರ್ಮಾನು ಹೊರಡಿಸಲಾಗಿದೆ' ಎಂದು ಈ ನಿರ್ಧಾರವನ್ನು ಕರ್ನಾಟಕದಲ್ಲಿ ಹೊಸ ಸರ್ಕಾರದ ಪ್ರಮಾಣವಚನಕ್ಕೆ ಸಾಮ್ರಾಟ್ ಎನ್ನುವವರು ಲಿಂಗ್ ಮಾಡಿದ್ದಾರೆ. 'ಆರ್‌ಬಿಐ ₹2000 ನೋಟು ಚಲಾವಣೆಯಿಂದ ಹಿಂಪಡೆದಿದೆ. ನ್ಯಾನೊ-ಜಿಪಿಎಸ್ ಚಿಪ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರಬೇಕು..' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!
ಕೈಯಲ್ಲಿ ಒಂದೂ ಎರಡು ಸಾವಿರ ರೂಪಾಯಿ ನೋಟು ಹೊಂದಿರದೇ ಇದ್ದವರ ಸಂಭ್ರಮ ಹೀಗಿರಲಿದೆಯಂತೆ..
ಆಟೋ ಸೆಕ್ಷರ್‌ನಲ್ಲಿ ಚಿಪ್ ಶಾರ್ಟೇಜ್ ಎದ್ದು ಕಾಣುತ್ತಿದೆ. ಅದಕ್ಕಾಗಿ 2 ಸಾವಿರ ರೂಪಾಯಿಯನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಇದರಲ್ಲಿನ ಚಿಪ್‌ಅನ್ನು ತೆಗೆದು, ಅಟೋ ಉದ್ಯಮಕ್ಕೆ ನೀಡುವ ಪ್ಲ್ಯಾನ್ ಮಾಡಲಾಗಿದೆಯಂತೆ.