Asianet Suvarna News Asianet Suvarna News

2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!

2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್‌ಸಿಬಿ ಹಿಂತೆಗೆದುಕೊಂಡಿದೆ. ಸೆಪ್ಟೆಂಬರ್ 30ರೊಳಗೆ ಸಾರ್ವಜನಿಕರು ತಮ್ಮಲ್ಲಿರುವ 2,000 ರೂ ನೋಟುಗಳನ್ನು ಖಾತೆಯಲ್ಲಿ ಜಮೆ ಮಾಡಲು ಅಥವಾ ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

RBI Withdrawal RS 2000 denomination banknotes from circulation will continue as legal tender ckm
Author
First Published May 19, 2023, 7:05 PM IST

ನವದೆಹಲಿ(ಮೇ.19): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2,000 ರೂಪಾಯಿ ಮುಖಬೆಲೆಯ ನೋಟನ್ನು ಆರ್‌ಸಿಬಿ ಹಿಂತೆಗೆದುಕೊಂಡಿದೆ. ಆದರೆ 2,000 ರೂಪಾಯಿ ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ಹೇಳಿದೆ.  ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.

ಸಾರ್ವಜನಿಕರು ತಮ್ಮಲ್ಲಿರುವ 2,000 ರೂಪಾಯಿ  ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಒಂದು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಒಂದು ದಿನ ಒಬ್ಬ ವ್ಯಕ್ತಿಗೆ ಗರಿಷ್ಛ 20,000 ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ.23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಹೇಳಿದೆ. 

 

ನಿಷ್ಕ್ರಿಯ ಖಾತೆಗಳಲ್ಲಿನ ಹಣ ವಾರಸುದಾರರಿಗೆ ಹಿಂತಿರುಗಿಸಲು 100 ದಿನಗಳ RBI ಕಾರ್ಯಕ್ರಮ; ಜೂ.1ರಿಂದ ಪ್ರಾರಂಭ

2016ರಲ್ಲಿ ಕೇಂದ್ರ ಸರ್ಕಾರ 2016ರಲ್ಲಿ 500 ರೂಪಾಯಿ ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು. ಬಳಿಕ ನವೆಂಬರ್ 2016ರಲ್ಲಿ ಆರ್‌ಸಿಬಿಐ  ಕಾಯ್ದೆ 1934ರ ಅಡಿಯಲ್ಲಿ 24(1) ಪ್ರಕಾರ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಯಿತು.  ಬಳಿಕ 200 ರೂಪಾಯಿ, 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಯಿತು. 2018-19ರ ಸಾಲಿನಲ್ಲೇ ಆರ್‌ಸಿಬಿ 2,000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿತ್ತು.

Bank Holidays: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ಕ್ಲೋಸ್; ಇಲ್ಲಿದೆ RBI ರಜಾಪಟ್ಟಿ

2016-17ರ ಅವಧಿಯಲ್ಲಿ ಶೇಕಡಾ 89 ರಷ್ಟು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು. 2018ರ ಮಾರ್ಚ್ ತಿಂಗಳಲ್ಲಿ 2,000 ಮುಖಬೆಲೆಯ ಒಟ್ಟು ₹6.73 ಲಕ್ಷ ಕೋಟಿ ರೂಪಾಯಿ ಚಲಾವಣೆಯಲ್ಲಿತ್ತು. ಚಲಾವಣೆಯಲ್ಲಿದ್ದ ಭಾರತೀಯ ರೂಪಾಯಿ ನೋಟುಗಳ ಪೈಕಿ ಶೇಕಡಾ 37.3% ರಷ್ಟು 2,000 ಮುಖಬೆಲೆಯ ನೋಟುಗಳಿತ್ತು. 2023ರ ಮಾರ್ಚ್ ವೇಳೆಗೆ 2,000 ನೋಟುಗಳ ಚಲಾವಣೆ 3.62 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. 

Follow Us:
Download App:
  • android
  • ios