ಪಾವಗಡ [ಜ.03]:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋದ ಕಡೆಯಲ್ಲಾ ತೆರಳುವ ಪ್ರಧಾನಿ ಕಾರ್ಯಾಲಯ ಪ್ರಸಾರ ಭಾರತಿ ಉದ್ಯೋಗಿ ಹಾಗೂ ಇಲಾಖೆಯ ಪ್ರಧಾನ ಫೋಟೋ ಮತ್ತು ವಿಡಿಯೋಗ್ರಾಫರ್‌ ಯಡಲಮ್‌ ಕೃಷ್ಣಮೂರ್ತಿ ಲೋಕನಾಥ್‌ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಓಬಳಾಪುರ ಗ್ರಾಮದ ನಿವಾಸಿ ಎಂಬುದು ಬಹಿರಂಗೊಂಡಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ಇಲ್ಲಿನ ಸ್ಥಳೀಯ ಬಿಜೆಪಿ ಮತ್ತು ಸಾರ್ವಜನಿಕ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನಿ ಕಾರ್ಯಾಲಯದ ಪ್ರಧಾನ ಫೋಟೋ ಮತ್ತು ವಿಡಿಯೋ ಗ್ರಾಫರ್‌ ಇರುತ್ತಾರೆ. ಸರ್ಕಾರಿ ಕಾರ್ಯಕ್ರಮ ಹಾಗೂ ಇತರೆ ಪ್ರಧಾನಿಯ ಸಮಾಜಮುಖಿ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸುವುದು ಇವರ ಕೆಲಸ.

ಹಸಿರು ಶಾಲು ಹೊದ್ದೇ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ ಮೋದಿ..

ಇಂತಹ ಜವಾಬ್ದಾರಿಯುತ ಕೆಲಸದಲ್ಲಿ ನಿರತರಾದವರು, ಪ್ರಧಾನಿ ಕಾರ್ಯಾಲಯ ಪ್ರಸಾರ ಭಾರತಿಯ ಉದ್ಯೋಗಿ ಪ್ರಧಾನ ಫೋಟೋ ಮತ್ತು ವಿಡಿಯೋ ಗ್ರಾಫರ್‌ ಯಡಲಮ್‌ ಕೃಷ್ಣಮೂರ್ತಿ ಲೋಕನಾಥ್‌ ಪಾವಗಡ ತಾಲೂಕು ವೈ.ಎನ್‌.ಹೊಸಕೋಟೆ ಹೋಬಳಿಯ ಓಬಳಾಪುರ ಗ್ರಾಮದವರು. ಈ ವಿಚಾರ ಫೇಸ್‌ಬುಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!...

ಪ್ರಧಾನಿ ಹಿಂದೆ ನನ್ನ ಸ್ವಂತ ಜಿಲ್ಲೆ ತುಮಕೂರು ನಗರಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಜ.2ರಂದು ಸಾಮಾಜಿಕ ಜಾಲತಾಣವೊಂದರಲ್ಲಿ ಯಡಲಮ್‌ ಲೋಕನಾಥ್‌ ಹಂಚಿಕೊಂಡ ವಿಚಾರ ವೈರಲ್‌ ಆಗಿದೆ.