ಹೆಚ್ಚಾಯ್ತು ಕರ್ನಾಟಕ ಬಂದ್ ಗೊಂದಲ, 14 ಲಕ್ಷ ಓಮಿಕ್ರಾನ್ ಕೇಸ್ ತಂದ ಅಪಾಯ, ಡಿ.29ರ Top 10 News!
ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ಕರೆ ಕೊಟ್ಟ ಕರ್ನಾಟಕ ಬಂದ್ ಇದೀಗ ಗೊಂದಲದ ಗೂಡಾಗಿದೆ. ಇತ್ತ ದೇಗುಲದಲ್ಲಿ ಕಾಂಡೋಮ್ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಪ್ರಕರಣ ಬೇಧಿಸಿದ್ದಾರೆ. ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಓಮಿಕ್ರಾನ್ ಕೇಸ್ ದಾಖಲಾಗಿದೆ. ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ, ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ ಸೇರಿದಂತೆ ಡಿಸೆಂಬರ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Crime News: ಕೊರಗಜ್ಜ ಸೇರಿದಂತೆ ಮಂಗಳೂರಿನ ದೇಗುಲಗಳಲ್ಲಿ ಕಾಂಡೋಮ್ ಹಾಕಿದ್ದವ ಅರೆಸ್ಟ್
ಕರಾವಳಿ ಭಾಗದ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
Ban On MES: ಕರ್ನಾಟಕ ಬಂದ್ ಮುಂದೂಡಿದ ಕರವೇ, ಕಾರಣ ಹೀಗಿದೆ!
ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ಶುಕ್ರವಾರದಂದು ಆಯೋಜಿಸಲಾಗಿದ್ದ ಕರ್ನಾಟಕ ಬಂದ್ ಮುಂದೂಡಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರ ಮನವೊಲಿಸಲು ಯತ್ನಿಸುವುದಾಗಿಯೂ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಬಂದ್ ವಿಚಾರವಾಗಿ ಸಂಘಟನೆಗಳ ನಡುವೆ ಯಾವುದೇ ಒಡಕಿಲ್ಲ ಎಂಬುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
Omicron Effect: ಹೆಚ್ಚಿದ ಅಪಾಯ, ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಕೇಸ್
ಪ್ರಪಂಚಾದ್ಯಂತ ಕೊರೋನಾ ವೈರಸ್ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು.
Ind vs SA, Boxing Day Test: ಟೀಂ ಇಂಡಿಯಾ ಡಿಕ್ಲೇರ್ ಪ್ಲಾನ್ ಬಿಚ್ಚಿಟ್ಟ ವೇಗಿ ಮೊಹಮ್ಮದ್ ಶಮಿ..!
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಫ್ರೀಡಂ ಟ್ರೋಫಿ 2021-22 ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ (Team India) ಭರ್ಜರಿ ಆರಂಭವನ್ನೇ ಪಡೆದಿದೆ.
ಜಬರ್‌ದಸ್ತ್ ಡಾನ್ಸ್‌ನಿಂದ ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ
ತಾಂಜೇನಿಯಾ: ಬಾಲಿವುಡ್‌ನ ಅನೇಕ ಹಾಡುಗಳಿಗೆ ಈಗಾಗಲೇ ಸಖತ್ ಆಗಿ ಹೆಜ್ಜೆ ಹಾಕಿ ಖ್ಯಾತಿ ಗಳಿಸಿರುವ ತಾಂಜೇನಿಯಾದ ಪ್ರತಿಭೆ ಕಿಲಿ ಪೌಲ್ (Kili Paul) ಈಗ ಮತ್ತೊಂದು ಫೇಮಸ್ ಡಾನ್ಸ್‌ನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದು, ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.
Badava Rascal Movie: ನಟ ರಾಕ್ಷಸ ಡಾಲಿ ಧನಂಜಯ್ ಜೊತೆ ರ‍್ಯಾಪಿಡ್ ಫೈರ್
ಡಾಲಿ ಧನಂಜಯ್ (Dolly Dhananjay) ಅಭಿನಯದ 'ಬಡವ ರಾಸ್ಕಲ್' (Badava Rascal) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಿಡಲ್ ಕ್ಲಾಸ್ ಹುಡುಗನ ಪಾಡು ಹೇಗಿರುತ್ತದೆ ಎಂದು ಸಿನಿಮಾದಲ್ಲಿ ಸೂಪರ್ ಆಗಿ ತೋರಿಸಲಾಗಿದೆ.
ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ!
ಕಾರಣ ಏನೇ ಇರಲಿ, ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇಟ್ಟುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಅಪ್ಪಿತಪ್ಪಿ ಎರಡೆರಡು ಪಾನ್ ಕಾರ್ಡ್ ನಿಮ್ಮ ಬಳಿಯಿದ್ದರೆ ಈಗ್ಲೇ ಒಂದನ್ನು ಸರೆಂಡರ್ ಮಾಡಿ. ಇಲ್ಲ ಅಂದ್ರೆ ತೊಂದರೆ ಕಟ್ಟಿಟ್ಟಬುತ್ತಿ.
ಭಾರತದಲ್ಲಿ ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಬಿಡುಗಡೆಯಾಗುತ್ತಿದೆ. ಓಲಾ, ಸಿಂಪಲ್ ಒನ್, ಬೌನ್ಸ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ದರ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ.