Vehicle Manufacturing Plant ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಬಜಾಜ್ ಪ್ಲಾನ್, 300 ಕೋಟಿ ಹೂಡಿಕೆ!

  • ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗೆ 300 ಕೋಟಿ ರೂ ಹೂಡಿಕೆ
  • ಒಲಾ ಸೇರಿದಿಂತೆ ಹಲವು ಕಂಪನಿಗಳ ಪೈಪೋಟಿ
  • ಎಲೆಕ್ಟ್ರಿಕ್ ವಾಹನಗಳತ್ತ ಗಮನ ಕೇಂದ್ರೀಕರಿಸಿದ ಬಜಾಜ್
Bajaj to invest rs 300 crore for 5 lakh production capacity New electric Vehicle Manufacturing Plant in Pune ckm

ನವದೆಹಲಿ(ಡಿ.29):  ಭಾರತದಲ್ಲಿ ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಬಿಡುಗಡೆಯಾಗುತ್ತಿದೆ. ಓಲಾ, ಸಿಂಪಲ್ ಒನ್, ಬೌನ್ಸ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ದರ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಸ್ಕೂಟರ್‌ಗೂ ಮೊದಲೇ ಬಜಾಜ್(Bajaj) ತನ್ನ ಐಕಾನಿ ಸ್ಕೂಟರ್ ಚೇತಕ್‌ನ್ನು ಎಲೆಕ್ಟ್ರಿಕ್ ಸ್ಕೂಟರ್(Chetak Electric Scooter) ಆಗಿ ಬಿಡುಗಡೆ ಮಾಡಿದೆ. ಆದರೆ ಹೆಚ್ಚಿನ ಪೈಪೋಟಿಯಿಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷಿತ ಮಾರಾಟ ಕಾಣಲಿಲ್ಲ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಬಜಾಜ್ ಪ್ಲಾನ್ ಮಾಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಘಟಕ(Vehicle Manufacturing Plant) ಆರಂಭಿಸಲು 300 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 

ಬಜಾಜ್ ಎಲೆಕ್ಟ್ರಿಕ್ ಇದೀಗ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟನ ತೆರೆಯುತ್ತಿದೆ. ಪುಣೆಯ ಅಕುರ್ಡಿ(Arkudi Pune) ಬಳಿ ನೂತನ ಘಟಕ ತಲೆಎತ್ತಿ ನಿಲ್ಲಲಿದೆ. ಅಕುರ್ಡಿ ಬಜಾಜ್ ಚೇತಕ್‌ಗೆ ಹುಟ್ಟಿಗೆ ಕಾರಣವಾದ ಸ್ಥಳ.  ದಶಕಗಳ ಹಿಂದೆ ಚೇತಕ್ ಸ್ಕೂಟರ್ ಉತ್ಪಾದನೆಯಾಗಿದ್ದು ಇದೇ ಅಕುರ್ಡಿಯಿಂದ ಬಳಿಕ ನಡೆದಿದ್ದು ಇತಿಹಾಸ. ಇದೀಗ ಬಜಾಜ್ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಇದೇ ಅಕುರ್ಡಿಯಲ್ಲಿ ಆರಂಭಗೊಳ್ಳುತ್ತಿದೆ.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಬಜಾಜ್ ಎಲೆಕ್ಟ್ರಿಕ್ ಘಚಕದಲ್ಲಿ ಪ್ರತಿ ವರ್ಷ 5 ಲಕ್ಷ ಎಲೆಕ್ಟ್ರಿಕ್ ವಾಹನ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಘಟಕ ಅತ್ಯಾಧುನಿಕ ಕೇಂದ್ರವಾಗಿರಲಿದೆ ಎಂದು ಬಜಾಜ್ ಹೇಳಿದೆ. ಕಟ್ಟಿಂಗ್ ಎಡ್ಜ್ ರೊಬೊಟಿಕ್ ಹಾಗೂ ಆಟೋಮೇಟೆಡ್ ವಾಹನ ಉತ್ಪಾದನೆ ಘಚಕವಾಗಲಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಲಾಜಿಸ್ಟಿಕ್, ಮೆಟಿರಿಯಲ್ ಹ್ಯಾಂಡ್ಲಿಂಗ್, ಬಿಡಿಭಾಗಗಳ ಜೋಡಣೆ, ಫ್ಯಾಬ್ರಿಕೇಶನ್, ಪೇಟಿಂಗ್ ಸೇರಿದಂತೆ ಎಲ್ಲವೂ ಆಟೋಮ್ಯಾಟಿಕ್ ಆಗಿರಲಿದೆ. ಇದರಿಂದ ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಾಗಲಿದೆ. ಇಷ್ಟೇ ಅಲ್ಲ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗಲಿದೆ. ಅರ್ಧ ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಘಟಕದಲ್ಲಿ 800 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಬಜಾಜ್ ಹೇಳಿದೆ.

Bajaj Pulsar 250: ಇನ್‌ಸ್ಟಾಗ್ರಾಂ ಯೂಸರ್‌ಗೆ ಹೊಸ ಬಜಾಜ್ ಪಲ್ಸರ್ 250 ಉಚಿತ, ಆದರೆ ಒಂದು ಕಂಡೀಷನ್!

ಪುಣೆಯ ನೂತನ ಘಟಕದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. 2022ರ ಜೂನ್ ವೇಳೆಗೆ ಮೊದಲ ಎಲೆಕ್ಟ್ರಿಕ್ ವಾಹನವನ್ನು ನೂತನ ಘಟಕದಿಂದ ರೋಲ್ ಔಟ್ ಮಾಡಲಾಗುವುದು ಎಂದು ಬಜಾಜ್ ಹೇಳಿದೆ. ನೂತನ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಘಟಕದಲ್ಲಿ ಕೇವಲ ಸ್ಕೂಟರ್ ಮಾತ್ರ ಉತ್ಪಾದಿಸುತ್ತಿಲ್ಲ. ಇದರ ಜೊತೆಗೆ ಸಣ್ಣ ಸಾರಿಗೆ ವಾಹನಗಳ ಉತ್ಪಾದನೆಯಾಗಲಿದೆ. ಹೀಗಾಗಿ ಬಜಾಜ್ ಇದೀಗ ಎಲೆಕ್ಟ್ರಿಕ್ ಆಟೋ ರಿಕ್ಷಾ ಉತ್ಪಾದನೆಗೂ ಮುಂದಾಗಿದೆ ಅನ್ನೋ ಸುಳಿವನ್ನು ನೀಡಿದೆ. ಈ ಮೂಲಕ ಆಟೋ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಎಲೆಕ್ಟ್ರಿಕ್‌ನಲ್ಲೂ ವಿಸ್ತರಿಸಲು ಬಜಾಜ್ ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಇತರ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಬಜಾಜ್ ಗಮನ ಕೇಂದ್ರಿಕರಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ಮಯ ಸಾರಿಗೆ ಮಾಡಲು ಮುಂದಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಭಾರತವನ್ನು ಆಳಲಿದೆ ಅನ್ನೋದು ಎಲ್ಲಾ ಆಟೋಮೊಬೈಲ್ ಕಂಪನಿಗಳ ಮಾತು. ಇದಕ್ಕಾಗಿ ಬಹುತೇಕ ಆಟೋಮೊಬೈಲ್ ಕಂಪನಿಗಳು ತಮ್ಮ ಇಂಧನ ವಾಹನಗನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಬಿಡುಗಡೆ ಮಾಡುತ್ತಿದೆ.

ಚೆನ್ನೈ, ಹೈದ್ರಾಬಾದ್‌ನಲ್ಲೂ ಬಜಾಜ್ ಚೇತಕ್ ಇ ಸ್ಕೂಟರ್

ಬಜಾಜ್ ಪಲ್ಸರ್, ಡೋಮಿನಾರ್, ಅವೆಂಜರ್, ಸಿಟಿ100, ಡಿಸ್ಕವರ್ ಸೇರಿದಂತೆ ಬಜಾಜ್ ಪೆಟ್ರೋಲ್ ಎಂಜಿನ್ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬೈಕ್ ವಿಭಾಗದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಇದೀಗ ಎಲೆಕ್ಟ್ರಿಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. 
 

Latest Videos
Follow Us:
Download App:
  • android
  • ios