ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ!

ಕಾರಣ ಏನೇ ಇರಲಿ, ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇಟ್ಟುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಅಪ್ಪಿತಪ್ಪಿ ಎರಡೆರಡು ಪಾನ್ ಕಾರ್ಡ್ ನಿಮ್ಮ ಬಳಿಯಿದ್ದರೆ ಈಗ್ಲೇ ಒಂದನ್ನು ಸರೆಂಡರ್ ಮಾಡಿ. ಇಲ್ಲ ಅಂದ್ರೆ ತೊಂದರೆ ಕಟ್ಟಿಟ್ಟಬುತ್ತಿ.

Having Two Pan Cards Surrender Online or face punishment

ಪಾನ್ ಕಾರ್ಡ್ (PAN Card )ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ನಂತೆಯೇ ಪಾನ್ ಕಾರ್ಡ್ ಕೂಡ ವ್ಯಾಪಾರ-ವಹಿವಾಟಿಗೆ ಕಡ್ಡಾಯವಾಗಿದೆ. 10 ಅಂಕೆಯ ಈ ಪಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಬ್ಯಾಂಕಿ (Bank)ನ ಸೇವೆ ಹಾಗೂ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಪಾನ್ ಕಾರ್ಡ್ ಇಲ್ಲವೆಂದ್ರೆ ನಿಮ್ಮ ಕೆಲಸ ಮುಂದಕ್ಕೆ ಹೋಗುವುದಿಲ್ಲ.ಅನೇಕ ಬಾರಿ ಜನರು ವಂಚನೆಗಾಗಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಇಲಾಖೆಯಿಂದಲೇ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಲಾಗಿರುತ್ತದೆ. ಇದು ಅನೇಕ ಕಾರಣಗಳಿಂದ ನಡೆಯುತ್ತದೆ. 

ಯಾಕೆ ಎರಡೆರಡು ಪಾನ್ ಕಾರ್ಡ್ ಗ್ರಾಹಕ (Customer)ನ ಕೈ ಸೇರುತ್ತದೆ ಗೊತ್ತಾ? 
ಬಹು ಅರ್ಜಿಗಳನ್ನು ಸಲ್ಲಿಸಿದಾಗ :
ಹಲವು ಬಾರಿ ಅರ್ಜಿದಾರರು ಮೊದಲು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುತ್ತಾನೆ. ಆದರೆ ದೀರ್ಘ ಕಾಯುವಿಕೆ ನಂತರವೂ ಪಾನ್ ಕಾರ್ಡ್ ಕೈಗೆ ಸಿಕ್ಕಿರುವುದಿಲ್ಲ. ಈ ಸಮಯದಲ್ಲಿ ಆತ ಇನ್ನೊಂದು ಅರ್ಜಿಯನ್ನು ಸಲ್ಲಿಸುತ್ತಾನೆ. ಮೊದಲು ಸಲ್ಲಿಸಿದ ಅರ್ಜಿ ಸ್ವೀಕಾರಗೊಂಡು ಪಾನ್ ಸಿದ್ಧವಾಗಿರುತ್ತದೆ. ಎರಡನೇ ಅರ್ಜಿ ಬಂದ ನಂತರ ಅದೂ ಸಿದ್ಧವಾಗುತ್ತದೆ. ಹಾಗಾಗಿ ಎರಡು ಬಾರಿ ಪಾನ್ ಅರ್ಜಿದಾರನ ಕೈ ಸೇರುತ್ತದೆ. 

ನವೀಕರಣ (Update)ದ ವೇಳೆ : ಒಬ್ಬ ವ್ಯಕ್ತಿಗೆ ಪಾನ್ ಕಾರ್ಡ್ ನವೀಕರಣ ಮಾಡಬೇಕಿರುತ್ತದೆ. ಆದರೆ ನವೀಕರಣ ಮಾಡದೆ ಹೊಸ ಪಾನ್ ಗೆ ಅರ್ಜಿ ಸಲ್ಲಿಸುತ್ತಾನೆ. ಇದರಿಂದ ಎರಡು ಪಾನ್ ಕಾರ್ಡ್ ವ್ಯಕ್ತಿಗೆ ಸಿಗುತ್ತದೆ. 
ಮದುವೆ (Marriage)ಯ ನಂತರ ನವೀಕರಣ : ಮದುವೆಯ ನಂತರ ಪಾನ್ ಕಾರ್ಡ್ ನವೀಕರಣ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿಯೂ ಜನರು ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸುತ್ತಾರೆ. ಇದು ತಪ್ಪು. ನವೀಕರಣಕ್ಕೆ ವಿನಂತಿ ಮಾಡಿಕೊಳ್ಳಬೇಕು. ಇನ್ನೊಂದು ಪಾನ್ ಗೆ ಅರ್ಜಿ ಸಲ್ಲಿಸಿದ್ರೆ ಎರಡು ಪಾನ್ ಸಿಗುತ್ತದೆ. 

ಎನ್‌ಆರ್‌ಐ : ಒಬ್ಬ ಎನ್‌ಆರ್‌ಐ ಹಲವು ವರ್ಷಗಳ ನಂತರ ಭಾರತಕ್ಕೆ ಬಂದು ಇಲ್ಲಿ ವ್ಯಾಪಾರ ಮಾಡಲು ಯೋಚಿಸಿದರೆ, ವಾಣಿಜ್ಯ ವಹಿವಾಟುಗಳಿಗಾಗಿ ಪಾನ್ ಕಾರ್ಡ್ ಅಗತ್ಯವಿರುತ್ತದೆ. ಈಗಾಗಲೇ ಪಾನ್ ಕಾರ್ಡ್ ಇದ್ದರೂ ಆತ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಾನೆ. ಆಗ ಆತನ ಬಳಿ ಎರಡು ಪಾನ್ ಆಗುತ್ತದೆ.

ಚಿನ್ನಕ್ಕೆ ಹಾಲೋಮಾರ್ಕ್, ರಾಷ್ಟ್ರವ್ಯಾಪಿ ಜಾರಿ, ಏನಿದು?

ಎರಡೆರಡು ಪಾನ್ ಕಾರ್ಡ್ ನಿಮ್ಮದಾಗಿದ್ದರೆ ನೀವು ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗುತ್ತದೆ. ಎನ್ ಎಸ್ ಡಿಎಲ್(NSDL )ನ ಅಧಿಕೃತ ವೆಬ್‌ಸೈಟ್‌ಗೆ https://www.onlineservices.nsdl.com/paam/endUserRegisterCont.net ಗೆ ಹೋಗಿ ಅಲ್ಲಿ ನೀವು ಒಂದು ಪಾನ್ ಕಾರ್ಡ್ ಆಯ್ಕೆ ಮಾಡಿಕೊಂಡು,ಇನ್ನೊಂದನ್ನು ರದ್ದು ಮಾಡಬಹುದು. ಆನ್ಲೈನ್ ನಲ್ಲಿ ಮಾತ್ರವಲ್ಲ ಆಫ್ಲೈನ್ ನಲ್ಲಿ ಕೂಡ ನೀವು ಪಾನ್ ಕಾರ್ಡ್ ರದ್ದುಗೊಳಿಸಹುದು. ಇದಕ್ಕೆ ಎನ್ ಎಸ್ ಡಿಎಲ್ (NSDL) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಾಮಾನ್ಯ ಫಾರ್ಮ್  ಡೌನ್‌ಲೋಡ್ ಮಾಡಬೇಕು. ನಂತರ ಅರ್ಜಿಯನ್ನು ಭರ್ತಿ ಮಾಡಿ,ಮತ್ತೊಂದು ಪಾನ್ ಕಾರ್ಡ್‌ನೊಂದಿಗೆ ಎನ್ ಎಸ್ ಡಿಎಲ್  ಕಚೇರಿಗೆ ಸಲ್ಲಿಸಬೇಕು.

ಆನ್ ಟೈಮಲ್ಲಿ ಟ್ಯಾಕ್ಸ್ ಕಟ್ಟದಿದ್ದರೆ ದಂಡ ತೆತ್ತಬೇಕು

ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಏನಾಗುತ್ತೆ? : 
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಎರಡು ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ನಿಮ್ಮ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ನಂತಹ ಎಲ್ಲಾ ಅರ್ಜಿಗಳನ್ನು ಬ್ಯಾಂಕ್ ರದ್ದುಗೊಳಿಸುತ್ತದೆ. ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಅದನ್ನು ವಂಚನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿಯನ್ನು ಅನುಮಾನಾಸ್ಪದ ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಬ್ಯಾಂಕ್‌ಗಳು ಇಂತಹವರನ್ನು ಕಪ್ಪುಪಟ್ಟಿಗೆ ಸೇರಿಸುತ್ತವೆ. ಒಂದು ವೇಳೆ ನೀವು ಒಂದು ಪಾನ್ ಕಾರ್ಡನ್ನು ಸೆರೆಂಡರ್ ಮಾಡಿಲ್ಲವೆಂದರೆ  ನೀವು 10 ಸಾವಿರ ರೂಪಾಯಿವರೆಗೆ ದಂಡ ಕಟ್ಟಬೇಕಾಗುತ್ತದೆ. 

Latest Videos
Follow Us:
Download App:
  • android
  • ios