Karnataka Assembly Election ಚುನಾವಣೆಗೂ ಮೊದಲು ಕನ್ನಡಿಗರಿಗೆ ಪ್ರಧಾನಿ ಮೋದಿ ಮಹತ್ವದ ಸಂದೇಶ!

ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರಿಗೆ ಮಹತ್ವದ  ಸಂದೇಶ ನೀಡಿದ್ದಾರೆ. 

Karnataka Assembly Election 2023 PM Modi message to Kannadigas before poll ckm

ನವದೆಹಲಿ(ಮೇ.09):  ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ನಾಳೆ(ಮೇ.10) ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ.ಸುಗಮ ಮತದಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗರ ಕನಸು ನನ್ನ ಕನಸಾಗಿದೆ. ಪ್ರತಿಯೊಬ್ಬ ಕನ್ನಡಿಗ ನಿರ್ಣಯವೂ ನನ್ನ ನಿರ್ಣಯವಾಗಿದೆ ಎಂದಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಮತದಾರರು ಮೇ.10 ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. 

ನೀವು ನನಗೆ ಪ್ರತಿ ಬಾತಿ ಪ್ರೀತಿ ತೋರಿದ್ದೀರಿ. ನನಗೆ ಇದು ಈಶ್ವರನ ಆಶೀರ್ವಾದವಿದ್ದಂತೆ. ಅಜಾದಿಯ ಅಮೃತ ಕಾಲದಲ್ಲಿ ಸುಸ್ಥಿರ ಅಭಿವೃದ್ಧಿಗೆ ಭಾರತ ಸಂಕಲ್ಪ ಮಾಡಿದೆ. ಭಾರತದ ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕ ನೇತೃತ್ವದ ನೀಡುವ ಸಂಕಲ್ಪ ಮಾಡಿದೆ. ಭಾರತ ವಿಶ್ವದಲ್ಲಿ 5ನೇ ಅತೀ ದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಭಾರತವನ್ನು 3ನೇ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಾವು ಪಣತೊಟ್ಟಿದ್ದೇವೆ. ಇದು ಹೇಗೆ ಸಾಧ್ಯ? ಕರ್ನಾಟಕದ ಆರ್ಥಿಕತೆ ಬಲಿಷ್ಠಗೊಂಡರೆ ಇದು ಸಾಧ್ಯ. ಕಳೆದ ಮೂರುವರೆ ವರ್ಷದ  ಅಭಿವೃದ್ಧಿ, ಸುಸ್ಥಿರ ಕರ್ನಾಟಕಕ್ಕೆ ಅವಿರತ ಶ್ರಮವಹಿಸಿದೆ. ಕೊರೋನಾ ಸಂಕಷ್ಟದಲ್ಲೂ ಕರ್ನಾಟಕದ ಅಭಿವೃದ್ಧಿ ವೇಗವಾಗಿ ಸಾಗಿದೆ. 

ದಕ್ಷಿಣ ಕಾಶಿ ನಂಜುಂಡೇಶ್ವರನ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅತ್ಯುತ್ತಮ ಆಡಳತಿಂದ 90, 000 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.  ಕೇವಲ 3,000 ಕೋಟಿ ರೂಪಾಯಿ ಆಸುಪಾಸಿನಲ್ಲಿದ್ದ ವಿದೇಶಿ ಬಂಡವಾಳ ಹೂಡಿಕೆ ಇದೀಗ ದಾಖಲೆ ಪ್ರಮಾಣದಲ್ಲಿ ಆಗಿದೆ. ಈ ಹೂಡಿಕೆಯಿಂದ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಕೈಗಾರಿಕೆಗಳು ಬಲಗೊಳ್ಳಲಿದೆ. ಎಲ್ಲಾ ಕ್ಷೇತ್ರದಲ್ಲಿ ಕರ್ನಾಟಕವನ್ನು ನಂಬರ್ 1 ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. 

ಶಿಕ್ಷಣ, ಉದ್ಯೋಗ, ವ್ಯವಾಹರದಲ್ಲೂ ಕರ್ನಾಟಕವನ್ನು ನಂಬರ್ 1 ಮಾಡಲು ಕೆಲಸ ಮಾಡುತ್ತಿದ್ದೇವೆ. ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆರ್ಥಿಕತೆ ಮೂಲಕ ಹೆಚ್ಚಿಸುವ ಕೆಲಸವಾಗಿದೆ. ಇಥೆನಾಲ್ ಬ್ಲೆಂಡಿಂಗ್ ಕೆಲಸವಾಗುತ್ತಿದೆ. ಡ್ರೋನ್ ಸೇರಿದಂತೆ ಅಧುನಿಕ ಸಲಕರಣೆಯನ್ನು ಬಳಸಲಾಗುತ್ತಿದೆ. ಕೃಷಿಯಲ್ಲಿ ಕರ್ನಾಟಕ ನಂಬರ್ 1 ಮಾಡಲು ಸಂಕಲ್ಪ ಮಾಡಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಕರ್ನಾಟಕವನ್ನು ನಂಬರ್ 1 ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಸಂಪೂರ್ಣ ಮಹಿಳೆಯರಿಂದ 2024ರ ಗಣರಾಜ್ಯೋತ್ಸವ ಪರೇಡ್!

ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಭಾರತಕ್ಕೆ ಮಾದರಿ. ನನಗೂ ಈ ಸಾಂಸ್ಕೃತಿಕ ಪಾರಂಪರೆ ಪೂಜ್ಯನೀಯವಾಗಿದೆ. ಭಗವಾನ್ ಬಸವೇಶ್ವರ, ನಾಡಪ್ರಭು ಕೆಂಪೇಗೌಡ, ಭಕ್ತ ಕನಕದಾಸ ಅವರ ಮಾರ್ಗದರ್ಶನ, ವ್ಯಕ್ತಿತ್ವ ಇಡೀ ವಿಶ್ವಕ್ಕೆ ಹೊಸ ಬೆಳಕು ನೀಡಿದ ಪೂಜ್ಯನೀಯರು. ಇವರ ಮಾರ್ಗದರ್ಶನದಿಂದ ಕರ್ನಾಟಕವನ್ನು ವಿಶ್ವದಲ್ಲೇ ಪ್ರಜ್ವಲಿಸುವಂತೆ ಮಾಡಲು ಶ್ರಮಿಸುತ್ತಿದ್ದೇವೆ. ಜೀವನ ಮಟ್ಟ ಸುಧಾರಣೆಯಾಗಬೇಕು. ಪ್ರತಿ ಕನ್ನಡಿಗನಲ್ಲಿರುವ ಕನಸು, ನನ್ನ ಕನಸಾಗಿದೆ. ನಿಮ್ಮ ಸಂಕಲ್ಪ ನನ್ನ ಸಂಕಲ್ಪವಾಗಿದೆ. ನಾವೆಲ್ಲ ಜೊತೆಯಾಗಿ ನಿಂತು ಉದ್ದೇಶ ಈಡೇರಿಕೆಗಾಗಿ ಹೆಜ್ಜೆ ಇಡೋಣ. ಇದರಿಂದ ಯಾವುದೇ ಶಕ್ತಿಗೂ ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.

ಪ್ರತಿಯೊಬ್ಬ ಕನ್ನಡಿಗರಿಗಾಗಿ ಅವಿರತ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಪ್ರತಿಯೊಬ್ಬ ಮತದಾರ ಮೇ.10 ರಂದು ಮತದಾನ ಮಾಡಿ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಮತದಾನ ಮಾಡಿ. ಇದು ನನ್ನ ಕಳಕಳಿಯ ಮನವಿ ಎಂದು ಮೋದಿ ವಿಡಿಯೋ ಸಂದೇಶದ ಮೂಲಕ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios