ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಸಂಪೂರ್ಣ ಮಹಿಳೆಯರಿಂದ 2024ರ ಗಣರಾಜ್ಯೋತ್ಸವ ಪರೇಡ್!

ಮಹಿಳಾ ಸಬಲೀಕರಣ, ಶಸಸ್ತ್ರ ಪಡೆಗಳಲ್ಲಿ ಮಹಿಳಾ ಬಲ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಂಪೂರ್ಣ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ. 

Republic day 2024 parade could feature only women participants says PM modi govt source ckm

ನವದೆಹಲಿ(ಮೇ.07): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿನ ವರ್ಷದ ಗಣರಾಜ್ಯೋತ್ಸವದಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದೆ.ದೇಶದಲ್ಲಿ ಮಹಿಳಾ ಸಬಲೀಕರಣ, ಭಾರತೀಯ ಸೇನೆಯಲ್ಲಿ ಮಹಿಳಾ ಬಲ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. 2024ರ ಗಣರಾಜ್ಯೋತ್ಸವ ಪರೇಡ್‌ ಸಂಪೂರ್ಣ ಮಹಿಳೆಯರಿಂದಲೇ ನಡೆಯಲಿದೆ. ಈ ಕುರಿತು ಮೊದಲ ಹಂತದ ಮಾತುಕತೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

2024ರ ಗಣರಾಜ್ಯೋತ್ಸ ಪರೇಡ್‌ನಲ್ಲಿ ಎಲ್ಲಾ ದಳಗಳ ಮಹಿಳಾ ತುಕಡಿಗಳು ಪರೇಡ್ ನಡೆಸಲಿದೆ. ವಾಯುಸೇನೆ, ಭೂ ಸೇನಾ, ನೌಕಾ ಸೇನೆ ಮಾತ್ರವಲ್ಲ, ಅಶ್ವದಳ ಸೇರಿದಂತೆ ಇನ್ನಿತರ ಎಲ್ಲಾ ದಳಗಳು ಮಹಿಳಾ ಪ್ರತಿನಿಧಿಗಳಿಂದಲೇ ಪರೇಡ್ ನಡೆಯಲಿದೆ. ಸ್ಧಬ್ದ ಚಿತ್ರ ಪ್ರದರ್ಶನ, ಮ್ಯೂಸಿಕ್ ಬ್ಯಾಂಡ್ ಸೇರಿದಂತೆ ಎಲ್ಲವೂ ಮಹಿಳಾ ತುಕಡಿಗಳನ್ನೇ ಹೊಂದಿರಲಿದೆ.  ಕರ್ತವ್ಯ ಪಥದಲ್ಲಿ ನಡೆಯಲಿರುವ  ಈ ಐತಿಹಾಸಿಕ ಪರೇಡ್ ಮಹಿಳಾ ಪರೇಡ್ ಆಗಿ ಹೊರಹೊಮ್ಮಲಿದೆ. ಈ ಮೂಲಕ ವಿಶ್ವಕ್ಕೆ ಸಂದೇಶ ಸಾರಲು ಭಾರತ ಮುಂದಾಗಿದೆ.

ಗಣರಾಜ್ಯೋತ್ಸವ ಪರೇಡ್‌: ಉತ್ತರಾಖಂಡ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ, ಕರ್ನಾಟಕಕ್ಕೆ ಇಲ್ಲ

ಕೇಂದ್ರ ಗೃಹ ಸಚಿವಾಲ, ಕೇಂದ್ರ ಸಂಸ್ಕೃತಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವಾಲಯ ಮಹಿಳಾ ಪರೇಡ್ ಪ್ಲಾನ್ ಮುಂದಿಟ್ಟಿದೆ. ಈ ಕುರಿತು ಕೇಂದ್ರ ಸರ್ಕಾರ ಸೇನೆ ಹಾಗೂ ಇತರ ದಳಗಳಿಗೆ ಉತ್ತರಿಸಲು ಸೂಚನೆ ನೀಡಿದೆ. 2015ರಲ್ಲಿ ಮೂರು ಮಹಿಳಾ ಸೇನಾ ತುಕಡಿಗಳು ಮೊದಲ ಬಾರಿಗೆ ಪರೇಡ್‌ನಲ್ಲಿ ಪಾಲ್ಗೊಂಡಿತ್ತು. ಇನ್ನು 2019ರಲ್ಲಿ ಕ್ಯಾಪ್ಟನ್ ಶಿಕಾ ಸುರಭಿ ಬೈಕ್ ಸ್ಟಂಟ್ ಪ್ರದರ್ಶಿಸಿ ಗಮನಸೆಳೆದಿದ್ದರು. 2021ರಲ್ಲಿ ಕ್ಯಾಪ್ಟನ್ ತಾನ್ಯ ಶೆರ್ಗೀಲ್ ಸೇನೆಯ ಮೂರುು ತುಕಡಿಗಳನ್ನು ಮುನ್ನಡೆಸಿದ್ದರು. 2022ರಲ್ಲಿ ಫೈಟರ್ ಜೆಟ್ ಮಹಿಳಾ ಪೈಲೆಟ್ ಭಾವನಾ ಕಾಂತ್ ಜೆಟ್ ಮೂಲಕ ಸಾಹಸ ಪ್ರದರ್ಶನ ನಡೆಸಿದ್ದರು. ಇದೀಗ ಸಂಪೂರ್ಣ ಮಹಿಳಾ ತುಕಡಿಗಳಿಂದ ಪರೇಡ್ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

2023ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್‌ ಫತ್ಹಾ ಅಲ್‌ ಸಿಸಿ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇವರ ಜೊತೆಗೆ ಈಜಿಪ್ಟ್ ಸೇನೆಯ 120 ಯೋಧರು ಕೂಡಾ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದರು. ಸಾಹಸಮಯ ಬೈಕ್‌ ಪ್ರದರ್ಶನ ನೀಡುವ ಕಾಫ್ಸ್‌ರ್‍ ಆಫ್‌ ಸಿಗ್ನಲ್ಸ್‌ನ ಡೇರ್‌ಡೆವಿಲ್ಸ್‌ ಮೋಟಾರ್‌ ಸೈಕಲ್‌ ರೈಡ​ರ್‍ಸ್ ತಂಡಕ್ಕೆ ಮಹಿಳಾ ಕ್ಯಾಪ್ಟನ್ ಸಾರಥ್ಯ ವಗಿಸಿದ್ದರು. ಒಂಟೆಯ ಪಡೆಯು ಕೇವಲ ಮಹಿಳಾ ಸಿಬ್ಬಂದಿ ಒಳಗೊಂಡಿತ್ತು.

Disha Amrit: ಗಣರಾಜ್ಯೋತ್ಸವದಲ್ಲಿ ನೌಕಾ ಪರೇಡ್‌ ಮುನ್ನಡೆಸಿದ ಕುಡ್ಲಾದ ಕುವರಿ ದಿಶಾ ಅಮೃತ್‌

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ನಾರಿ ಶಕ್ತಿ ಸ್ಥಬ್ದ ಚಿತ್ರ ಪ್ರದರ್ಶಿಸಿತ್ತು.  ‘ನಾರೀ ಶಕ್ತಿ ಘೋಷಣೆ’ ಅಡಿಯಲ್ಲಿ ಶಿಕ್ಷಿತರಲ್ಲದಿದ್ದರೂ ತಳಸಮುದಾಯದಿಂದ ಬಂದು ಉನ್ನತ ಸಾಧನೆ ಮಾಡಿ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ರಾಜ್ಯದ ಹೆಮ್ಮೆಯ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿ ಗೌಡ, ಸಾಲುಮರದ ತಿಮ್ಮಕ್ಕ ಪ್ರದರ್ಶನ ಜೊತೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತದ ಟ್ಯಾಬ್ಲೋ ಪ್ರದರ್ಶನಗೊಂಡಿತ್ತು.

Latest Videos
Follow Us:
Download App:
  • android
  • ios