ಕಾನ್ಪುರದಲ್ಲಿ ಕೌಟುಂಬಿಕ ಕಲಹ ವಿಕೋಪಕ್ಕೆ ಹೋಗಿ, ಮಹಿಳೆಯೊಬ್ಬಳು ತನ್ನ ಮೈದುನನ ಖಾಸಗಿ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಗೆ ಆಸ್ಪತ್ರೆಯಲ್ಲಿ 55 ಹೊಲಿಗೆಗಳನ್ನು ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಉತ್ತರ ಪ್ರದೇಶ: ಕಾನ್ಪುರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಕೌಟುಂಬಿಕ ಕಲಹಕ್ಕೆ ಒಳಗಾದ ವ್ಯಕ್ತಿಯೊಬ್ಬ ತನ್ನ ಅಣ್ಣನ ಹೆಂಡತಿ ಅತ್ತಿಗೆಯಿಂದ ಕಚ್ಚಿಸಿಕೊಂಡು ಈಗ ಆಸ್ಪತ್ರೆ ಸೇರಿದ್ದಾನೆ. ಅಷ್ಟೇ ಅಲ್ಲ, ಕಚ್ಚಿದ ಜಾಗಕ್ಕೆ ವೈದ್ಯರು ಬರೋಬ್ಬರಿ 55 ಹೊಲಿಗೆಯ್ನ ಹಾಕಿದ್ದಾರೆ!
ಆಗಿದ್ದೇನು?
ರಜನೀಶ್ ಪ್ರಕರಣದ ಸಂತ್ರಸ್ತ. ಗಾಯತ್ರಿ, ರಜನೀಶ್ ಅವರ ಅತ್ತಿಗೆ. ಪುಷ್ಪರಾಜ್ ರಜನೀಶ ಅವರ ಅಣ್ಣ. ಸುಮನಾ, ರಜನೀಶ್ ಪತ್ನಿ. ಕಳೆದ ಶುಕ್ರವಾರ ಗಾಯತ್ರಿ ಮತ್ತು ಪುಷ್ಪರಾಜ್ ಮಗ ತನ್ನ ಚಿಕ್ಕಮ್ಮ ಸುಮನಾ ಮನೆಗೆ ಹೋಗಿದ್ದ. ಈ ವೇಳೆ ಮನೆಯ ವಿಚಾರಕ್ಕೆ ಗಾಯತ್ರಿ ಮಗನ ಜೊತೆಗೆ ಜಗಳ ಆಗಿದೆ. ಆಗ ರಜನೀಶ್, ಆತನಿಗೆ ಎರಡು ಪೆಟ್ಟು ಕೊಟ್ಟಿದ್ದಾನೆ ಎನ್ನಲಾಗಿದೆ.
ಚಿಕ್ಕಪ್ಪನಿಂದ ಹೊಡೆತ ತಿಂದ ಬಳಿಕ ಆತ, ಅಮ್ಮನ ಬಳಿ ಬಂದು ದೂರು ನೀಡಿದ್ದಾನೆ. ಅಮ್ಮಾ ನನಗೆ ಚಿಕ್ಕಪ್ಪ ಹೊಡೆದ ಎಂದು. ಅದಕ್ಕೆ ಗಾಯತ್ರಿ ರೊಚ್ಚಿಗೆದ್ದಿದ್ದಾಳೆ. ರಜನೀಶ್ ಮನೆಯ ಎದುರು ಹೋಗಿ ಗಲಾಟೆ ಮಾಡಿದ್ದಾಳೆ. ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿದೆ. ವಾಗ್ಯುದ್ಧ ಜೋರಾಗುತ್ತಿದ್ದಂತೆಯೇ ರಜನೀಶ್ ತನ್ನ ಬಟ್ಟೆಯನ್ನ ಬಿಚ್ಚಿ ಒಗೆದು ಆರ್ಭಟಿಸಿದ್ದಾನೆ ಎನ್ನಲಾಗಿದೆ.
ಆಗ ಗಾಯತ್ರಿ ತನ್ನ ಮೈದುನ ರಜನೀಶ್ನನ್ನು ಕೈಯಿಂದ ದೂಡಿ ಕೆಳಗೆ ಬೀಳಿಸಿದ್ದಾಳೆ. ಆಯ ತಪ್ಪಿಬಿದ್ದ ರಜನೀಶ್ನ ಮೇಲೆರಗಿ ಆತನ ಖಾಸಗಿ ಭಾಗದ ಸುತ್ತ ಕಚ್ಚಿದ್ದಾಳೆ ಎಂಬ ಆರೋಪವನ್ನು ರಜನೀಶ್ ಮಾಡಿದ್ದಾನೆ. ಯಾವಾಗ ಅತ್ತಿಗೆ ಗಾಯತ್ರಿ ಮಾರಕವಾಗಿ ಕಚ್ಚಿದಳೋ, ಆಗ ರಜನೀಶ್ ಜೋರಾಗಿ ಕಿರುಚಾಡಿಕೊಂಡಿದ್ದಾನೆ. ಆಗ ರಜನೀಶ್ ಅಪ್ಪ ಹಾಗೂ ಸ್ಥಳೀಯರು ಓಡೋಡಿ ಬಂದು ರಜನೀಶ್ನನ್ನು ಕಾಪಾಡಿದ್ದಾರೆ ಎನ್ನಲಾಗಿದೆ.
ಕೂಡಲೇ ರಜನೀಶ್ ಅವರನ್ನು ಸ್ಥಳೀಯ ಹ್ಯಾಲೆಟ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ವೈದ್ಯರು ಗಾಯವನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದ್ದಾರೆ. ವರದಿಗಳ ಪ್ರಕಾರ, ರಜನೀಶ್ ಅವರ ಜನನಾಂಗದ ಸುತ್ತ 55 ಹೊಲಿಗೆಗಳನ್ನ ಹಾಕಿದ್ದಾರಂತೆ. ಸದ್ಯ ರಜನೀಶ್ ಅವರು ಆಸ್ಪತ್ರೆಯ ಬೆಡ್ನಲ್ಲಿ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇತ್ತ ವೈದ್ಯರು ರಜನೀಶ್ ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದ್ದಾರೆ.
ಇತ್ತ ರಜನೀಶ್ ಅವರ ಪತ್ನಿ ಸುಮನಾ ಹಾಗೂ ರಜನೀಶ್ ತಂದೆ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ. ತನ್ನ ಪತಿಯನ್ನು ಕಚ್ಚಿ ಗಾಯಗೊಳಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇವಲ ಗಾಯತ್ರಿ ಮಾತ್ರವಲ್ಲದೇ, ಗಾಯತ್ರಿಯ ಪತಿ ಪುಷ್ಪರಾಜ್ ವಿರುದ್ಧವೂ ದೂರು ನೀಡಿದ್ದಾರೆ. ಪುಷ್ಪರಾಜ್ ಅವರು, ಘಟನೆ ನಡೆದ ದಿನ ಮನೆಯಲ್ಲಿ ಇರಲಿಲಿಲ್ಲ. ಅವರು ಅಹ್ಮದಾಬಾದ್ನಲ್ಲಿ ಕೆಲಸ ಮಾಡೋದು. ಸದ್ಯ ಅಲ್ಲಿಂದ ಮನೆಗೆ ವಾಪಸ್ ಆಗಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿ ಕೃಷ್ಣಕಾಂತ್ ಯಾದವ್ ಪ್ರಕರಣವನ್ನು ದೃಢಪಡಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡು ಯಾರದ್ದು ಸರಿ, ಯಾರದ್ದು ತಪ್ಪು? ಘಟನೆಗೂ ಮೊದಲು ಏನಾಯಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







