ಟೀಂ ಇಂಡಿಯಾಗೆ ನಮನ್ ಧೀರ್ ಎಂಟ್ರಿಯಿಂದ ಹಲವು ಸ್ಟಾರ್ ಆಟಗಾರರ ಸ್ಥಾನಕ್ಕೆ ಕುತ್ತು ಬಂದಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಇವರ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಇವರ ಆಟದಿಂದ ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಐವರು ಆಟಗಾರರಿಗೆ ನಡುಕ ಶುರುವಾಗಿದೆ.

ಟೀಂ ಇಂಡಿಯಾಗೆ ನಮನ್‌ ಧೀರ್‌ ಎಂಟ್ರಿ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಕೊನೆಯ ಓವರ್‌ನಲ್ಲೂ ಕೂಡ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸೂಪರ್‌ ಆಲ್‌ರೌಂಡರ್.‌ ವೆಸ್ಟ್‌ ವಿಂಡೀಸ್‌ ಹಾಗೂ ನ್ಯೂಜಿಲೆಂಡ್‌ ಸಿರೀಸ್‌ನಲ್ಲಿ ಅವರ ಆರ್ಭಟವು ಟೀಂ ಇಂಡಿಯಾದ ಹಲವು ಸ್ಟಾರ್‌ ಆಟಗಾರರಿಗೆ ಗೇಟ್‌ಪಾಸ್‌ ನೀಡಲಿದೆ ಎಂಬ ಚರ್ಚೆ ಶುರುವಾಗಿದೆ.

ಐದು ಬಿಗ್‌ ಸ್ಟಾರ್‌ಗಳಿಗೆ ನಡುಕ

ನಮನ್‌ ಧೀರ್‌ ಆಟವು ಟೀಂ ಇಂಡಿಯಾದ ಐದು ಬಿಗ್‌ ಸ್ಟಾರ್‌ಗಳ ಸ್ಥಾನವು ಅಲುಗಾಡುವಂತೆ ಮಾಡಿದೆ. ಪ್ರಸ್ತುತ ಅವರ ಪ್ರದರ್ಶನದ ಬಗ್ಗೆ ಮಾತನ್ನಾಡೋದಾದರೆ.. ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 226 ರನ್ ಬೇಕಾಗಿತ್ತು. ಒಂದು ಹಂತದಲ್ಲಿ ತಂಡ ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ ನಮನ್ ಧೀರ್ 15 ಎಸೆತಗಳಲ್ಲಿ ಅಜೇಯ 42 ರನ್ ಗಳಿಸುವ ಮೂಲಕ ಗೇಮ್‌ ಚೇಂಜರ್‌ ಆದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಪರಿಣಾಮ ಟೀಂ ಇಂಡಿಯಾ 19.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 230 ರನ್ ಗಳಿಸಿ 4 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇನ್ನು ಇವತ್ತು ನಡೆದ ಎರಡನೇ ಟಿ20 ಪಂದ್ಯದಲ್ಲೂ ನಮನ್ ಧೀರ್ ಅದ್ಭುತ ಬ್ಯಾಟಿಂಗ್ ಮಾಡಿದರು. 17 ಎಸೆತಗಳಲ್ಲಿ 31 ರನ್ ಗಳಿಸಿದರು. ಆ ಮೂಲಕ ತಂಡದಲ್ಲಿ ನಮನ್‌ ಧೀರ್‌ ಫಿನಿಶರ್‌ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಏನು ಹೇಳ್ತಿದೆ ನಮನ್‌ ಧೀರ್‌ ಅಂಕಿ-ಅಂಶ?

ಇಲ್ಲಿಯವರೆಗೆ ಆರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ 80 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 42. ಅವರು ಒಟ್ಟು 28 ಎಸೆತಗಳನ್ನು ಎದುರಿಸಿದ್ದಾರೆ. ಏಳು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸ್ಟ್ರೈಕ್ ರೇಟ್ 285.71. ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್‌ ಕಿತ್ತಿದ್ದಾರೆ..

ಯಾರಿಗೆಲ್ಲ ಭಯ ಶುರುವಾಗಿದೆ?

ನಮನ್‌ ಧೀರ್‌ ಪ್ರಸ್ತುತ ಫಿನಿಶರ್‌ ಆಗಿ ಕಾಣಿಸಿ ಕೊಳ್ತಿದ್ದಾರೆ. ಹೀಗಾಗಿ ಮೊದಲ ಸಾಲಿನಲ್ಲಿ ರಿಂಕು ಸಿಂಗ್‌ ಬರುತ್ತಾರೆ. ರಿಂಕು ಸಿಂಗ್‌ ಟೀಂ ಇಂಡಿಯಾದ ಗ್ರೇಟ್‌ ಫಿನಿಶರ್.‌ ಒತ್ತಡದಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಅವರಲ್ಲಿದೆ. ನಮನ್ ಧೀರ್ ರಿಂಕು ಸಿಂಗ್‌ಗೆ ಪ್ರಬಲ ಪೈಪೋಟಿ ನೀಡುವ ಆಟಗಾರ.

ಸುಂದರ್ ಮತ್ತು ದುಬೆ

ವಾಷಿಂಗ್ಟನ್ ಸುಂದರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುತ್ತಾರೆ. ಶಿವಂ ದುಬೆ ದೀರ್ಘ ಸಿಕ್ಸರ್‌ಗಳನ್ನು ಹೊಡೆಯುವುದಕ್ಕೆ ಹೆಸರುವಾಸಿ. ನಮನ್ ಬ್ಯಾಟಿಂಗ್ ತಂಡಕ್ಕೆ ಹೆಚ್ಚುವರಿ ಆಯ್ಕೆ ನೀಡುತ್ತದೆ. ಮೂವರೂ ಆಟಗಾರರು ವಿಭಿನ್ನ ಪಾತ್ರಗಳನ್ನು ಹೊಂದಿದ್ದಾರೆ. ಜೊತೆಗೆ ಹಾರ್ದಿಕ್‌ ಪಾಂಡ್ಯ ಅವರ ಬುಡಕ್ಕೆ ಬೆಂಕಿ ಬಿದ್ದಿದೆ ಎಂದೇ ಹೇಳಬಹುದು. ಯಾಕೆಂದರೆ ಸಂಕಷ್ಟದ ಸಂದರ್ಭದಲ್ಲಿ ನಮನ್‌ ಧೀರ್‌ ಬೌಲಿಂಗ್‌ ಕೂಡ ಮಾಡಬಲ್ಲರು. ವಿಕೆಟ್‌ ಕೀಳುವ ತಾಖತ್ತು ಕೂಡ ನಮನ್‌ ಧೀರ್‌ಗೆ ಇದೆ.