ಮೋದಿ ಅಷ್ಟೇ ಅಲ್ಲ ಅವರಪ್ಪನೂ ಹೋಗ್ತಾನೆ, ನಡೀ ಇಲ್ಲಿಂದ, ಇದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ ಮಾತು. ಇದೀಗ ಈ ಮಾತು ಕಾಂಗ್ರೆಸ್ ಹಾಗೂ ಖರ್ಗೆಗೆ ಮುಳುವಾಗಿದೆ. ಮೋದಿ ತಂದೆಯನ್ನು ರಾಜಕೀಯ ಹೇಳಿಕೆಗೆ ಎಳೆದು ತಂದ ಖರ್ಗೆ ವಿರುದ್ದ ಎಲ್ಲೆಡೆಗಳಿಂದ ಟೀಕೆ ಕೇಳಿ ಬರುತ್ತಿದೆ.
ಪಾಟ್ನಾ (ಅ.25) ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ದ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುವುದು ಹೊಸದೇನಲ್ಲ. ಪ್ರತಿ ಭಾಷಣ, ಪ್ರತಿ ಪ್ರತಿಕ್ರಿಯೆಯಲ್ಲಿ ಪ್ರಖರ ಮಾತುಗಳು ಇದ್ದೇ ಇರುತ್ತೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ, ಬಿಜೆಪಿ ಹಾಗೂ ಆರ್ಎಸ್ಎಸ್ ಜೊತೆಗೆ ಮೋದಿ ತಂದೆಯನ್ನು ಎಳೆದು ತಂದು ವಿವಾದ ಸೃಷ್ಟಿಸಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ತಾಳ್ಮೆ ಕಳೆದುಕೊಂಡು ಮೋದಿ ಮಾತ್ರವಲ್ಲ ಅವರಪ್ಪನು ಹೋಗ್ತಾನೆ ಎಂದಿದ್ದಾರೆ. ಈ ಮಾತು ಕೋಲಾಹಲ ಸೃಷ್ಟಿಸಿದೆ.
ಮೋದಿಯನ್ನು ಜೈಲಿಗೆ ಕಳುಹಿಸಿತ್ತೇವೆ
ಬಿಹಾರ ಮಾಜಿ ಮುಖ್ಯಮಂತ್ರಿ ಕೃಷ್ಣ ಸಿಂಗ್ 139ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ ಕೆರಳಿದ್ದಾರೆ. ಮೋದಿ ಚುನಾವಣೆ ಅಕ್ರಮ ಮಾಡುತ್ತಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಖರ್ಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಸಾಮಾನ್ಯ ವ್ಯಕ್ತಿ, ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಕೂಗಿ ಹೇಳಿದ್ದಾರೆ. ಈ ಮಾತಿನಿಂದ ಮಲ್ಲಿಕಾರ್ಜುನ ಖರ್ಗೆ ಕೆರಳಿದ್ದಾರೆ. ವ್ಯಕ್ತಿ ಒಂದೆರೆಡು ಬಾರಿ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಕೂಗಿ ಹೇಳುತ್ತಿದ್ದಂತೆ ಖರ್ಗೆ ತಾಳ್ಮೆ ಕಳೆದುಕೊಂಡಿದ್ದಾರೆ
ಮೋದಿ, ಅಪರಪ್ಪನೂ ಹೋಗ್ತಾನೆ
ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಮೋದಿ ಕಾ ಬಾಪ್ ಬಿ ಜಾಯೇಗಾ (ಮೋದಿಯ ತಂದೆ ಕೂಡ ಹೋಗ್ತಾನೆ) ಎಂದಿದ್ದಾರೆ. ಇದೇ ಮಾತನ್ನು ಮಲ್ಲಿಖಾರ್ಜುನ ಖರ್ಗೆ ಪುನರುಚ್ಚರಿಸಿದ್ದಾರೆ. ಇಷ್ಟೇ ಅಲ್ಲ ನಡಿ ಇಲ್ಲಿಂದ ಎಂದಿದ್ದಾರೆ. ಖರ್ಗೆ ಮಾತು ಕೇಳಿಸಿಕೊಂಡ ಕಾಂಗ್ರೆಸ್ ಸಿಬ್ಬಂದಿಗಳು ನೇರವಾಗಿ ಕೂಗಿ ಹೇಳಿದ ವ್ಯಕ್ತಿಯನ್ನು ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ರಂಪಾಟ ನಡೆದಿದೆ. ಕಾಂಗ್ರೆಸ್ ವಿರುದ್ಧ ಘೋಷಣೆಗಳು ಮೊಳಗಿದೆ. ಇತ್ತ ಮೋದಿ ಚೋರ್, ಗದ್ದಿ ಚೋರ್ ಘೋಷಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮೊಳಗಿಸಿದ್ದಾರೆ. ಹೀಗಾಗಿ ಕೆಲ ಹೊತ್ತು ಸಭೆಯಲ್ಲಿ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸರಿ, ಸರಿ ಎಂದು ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮುಂದುವರಿಸಿದ್ದಾರೆ. ಅಷ್ಟರಲ್ಲೇ ಖರ್ಗೆ ಮಾತುಗಳು ವಿವಾದವಾಗಿದೆ. ಮೋದಿ ತಂದೆ ಯಾವುದೇ ರಾಜಕೀಯದಲ್ಲಿ ಇರಲಿಲ್ಲ. ವಿನಾಕಾರಣ ಮೋದಿ ತಂದೆಯನ್ನು ಎಳೆದು ತಂದಿದ್ದೇಕೆ, ಮೋದಿ ತಾಯಿಯನ್ನು ನಿಂದಿಸುವ ಪದ್ಧತಿಯನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಹಲವರು ಮಾಡಿದ್ದಾರೆ. ಇದೀಗ ಮೋದಿ ತಂದೆಯನ್ನು ರಾಜಕೀಯ ಹೇಳಿಕೆಯಲ್ಲಿ ಪ್ರತಿಕ್ರಿಯೆಯಲ್ಲಿ ಎಳೆದು ತಂದಿದ್ದು ಯಾಕೆ ಎಂದು ಪ್ರಶ್ನಿಸಲಾಗುತ್ತಿದೆ. ಮೋದಿ ತಪ್ಪು ಮಾಡಿದ್ದರೆ, ಜೈಲಿಗೆ ಹಾಕಿ, ಆದರೆ ಮೋದಿ ತಂದೆ ಏನು ಮಾಡಿದ್ದಾರೆ, ಕಾಂಗ್ರೆಸ್ ಪದ ಪ್ರಯೋಗ ಎಲ್ಲೇ ಮೀರುತ್ತಿರುವುದು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಮೋದಿ ತಂದೆ ಕುರಿತು ಆಡಿದ ಕೀಳು ಮಾತುಗಳಿಂದ ಇದೀಗ ಮಲ್ಲಿಕಾರ್ಜುನ ಖರ್ಗೆ ಮಾಡಿದ ಇಡೀ ಭಾಷಣ ಇದೀಗ ಟೀಕೆಗೆ ಗುರಿಯಾಗುತ್ತಿದೆ. ಇದಕ್ಕೂ ಮೊದಲು ಖರ್ಗೆ, ಆರ್ಎಸ್ಎಸ್ ಹಾಗೂ ಆರ್ಎಸ್ಎಸ್ ಸಿದ್ಧಾಂತ ಇರುವವರೆಗೆ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯವಿಲ್ಲ ಎಂಬ ಖರ್ಗೆ ಹೇಳಿಕೆಗೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ .







