ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳರನ್ನು ಸೃಷ್ಟಿಸಬೇಕು ಎಂದು ಪನ್ಬಟ್ಟು ಸಂಸ್ಥೆ ಹೇಳಿದೆ. ಇತ್ತೀಚೆಗೆ ಶರ್ಮಿಳಾ ಚಾಲಕಿಯಾಗಿದ್ದ ಬಸ್‌ನಲ್ಲಿ ಸಂಸದೆ ಕನಿಮೋಳಿ ಪ್ರಯಾಣಿಸಿದ್ದರು.

ಚೆನ್ನೈ (ಜೂನ್ 27, 2023): ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಕೊಯಮತ್ತೂರಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾಗೆ ನಟ ಕಮಲ್‌ ಹಾಸನ್‌ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಾಲಕಿಯಾಗಿ ಶರ್ಮಿಳಾ ಉದ್ಯೋಗ ನಿರ್ವಹಿಸಿಕೊಂಡು ಹೋಗಲು ಸಹಾಯ ಮಾಡಲು ಕಮಲ್‌ ಅವರ ‘ಕಮಲ್‌ ಪನ್ಬಟ್ಟು ಮೈಯಮ್‌’ (ಕಮಲ್‌ ಕಲ್ಚರಲ್‌ ಸೆಂಟರ್‌) ವತಿಯಿಂದ ಕಾರು ನೀಡಲಾಗಿದೆ ಎಂದು ಸಂಘಟನೆ ಹೇಳಿದೆ. 

‘ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳರನ್ನು ಸೃಷ್ಟಿಸಬೇಕು’ ಎಂದು ಪನ್ಬಟ್ಟು ಸಂಸ್ಥೆ ಹೇಳಿದೆ. ಇತ್ತೀಚೆಗೆ ಶರ್ಮಿಳಾ ಚಾಲಕಿಯಾಗಿದ್ದ ಬಸ್‌ನಲ್ಲಿ ಸಂಸದೆ ಕನಿಮೋಳಿ ಪ್ರಯಾಣಿಸಿದ್ದರು. ಈ ವೇಳೆ ಬಸ್‌ನ ಕಂಡಕ್ಟರ್‌ ಕನಿಮೊಳಿ ಬಳಿ ಹಣ ಪಡೆದು ಟಿಕೆಟ್‌ ನೀಡಿದ್ದರು. ಈ ಬಗ್ಗೆ ಶರ್ಮಿಳಾ ಮತ್ತು ಕಂಡಕ್ಟರ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನು ಓದಿ: ಕನಿಮೋಳಿಗೆ ಬಸ್‌ ಟಿಕೆಟ್‌ ತೆಗೆದುಕೊಳ್ಳಲು ಕಂಡಕ್ಟರ್‌ ಒತ್ತಾಯ: ತಮಿಳುನಾಡಿನ ಮೊದಲ ಬಸ್‌ ಚಾಲಕಿ ರಾಜೀನಾಮೆ!

ರಾಜೀನಾಮೆಗೆ ಕಾರಣ 
ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಬಸ್‌ ಟಿಕೆಟ್‌ ತೆಗದುಕೊಳ್ಳುವಂತೆ ಸೂಚಿಸಿದ್ದಕ್ಕೆ ಕಂಡ್ಟರ್‌ ಜೊತೆ ಉಂಟಾದ ವಿವಾದದ ಬಳಿಕ ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಸ್‌ನಲ್ಲಿ ಪ್ರಯಾಣಿಸುವ ಇಚ್ಛೆ ವ್ಯಕ್ತಪಡಿಸಿದ ಸಂಸದೆ ಕನಿಮೊಳಿ ಬಸ್‌ ಹತ್ತಿದ್ದರು. ಈ ವೇಳೆ ಟಿಕೆಟ್‌ ತೆಗೆದುಕೊಳ್ಳುವಂತೆ ಕಂಡಕ್ಟರ್‌ ಸೂಚಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶರ್ಮಿಳಾ ಹಾಗೂ ಕಂಡಕ್ಟರ್‌ ನಡುವೆ ವಾದ ನಡೆದಿದ್ದು, ‘ಸಂಸದೆಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಮಾಡಿದ್ದು ಅವಮಾನ’ ಎಂದು ಕಿಡಿ​ಕಾರಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿತ್ತು. 

ಆದರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಅವರು ಮಹಿಳಾ ಬಸ್ ಚಾಲಕರನ್ನು ಸನ್ಮಾನಿಸಿದ ಕೆಲವೇ ಗಂಟೆಗಳ ನಂತರ, 'ತಮ್ಮ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ' ಎಂದು ಆರೋಪಿಸಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು ಎಂದೂ ಆರೋಪಿಸಲಾಗಿತ್ತು.

ಇದನ್ನೂ ಓದಿ: Woman Driver: ಬಸ್ ಚಾಲಕಿ ಸೀಟ್ ನಲ್ಲಿ ಯುವ ಮಹಿಳೆ, ಜನರೆಲ್ಲ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು

ಶುಕ್ರವಾರ, ಡಿಎಂಕೆ ಸಂಸದೆ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಅವರು ಶುಕ್ರವಾರ ಗಾಂಧಿಪುರಂನಿಂದ ಪೀಲಮೇಡುಗೆ ಖಾಸಗಿ ಬಸ್‌ನಲ್ಲಿ 23 ವರ್ಷದ ಶರ್ಮಿಳಾ ಓಡಿಸುತ್ತಿದ್ದು ಆಕೆಯ ಕೌಶಲ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದ್ದರು. ಚಾಲಕರೂ ಆಗಿರುವ ಶರ್ಮಿಳಾ ಅವರ ತಂದೆ ಸಮ್ಮುಖದಲ್ಲಿ ಸಂಸದರು ಶರ್ಮಿಳಾ ಅವರಿಗೆ ವಾಚ್ ಉಡುಗೊರೆ ನೀಡಿದ್ದರು.

ಆದರೆ, ಸ್ವಲ್ಪ ಸಮಯದ ನಂತರ, ಶರ್ಮಿಳಾ ಅವರು ಬಸ್‌ನಲ್ಲಿದ್ದಾಗ ಕನಿಮೊಳಿ ಅವರೊಂದಿಗೆ ಅಸಭ್ಯವಾಗಿ ಮಾತನಾಡಿರುವ ಟ್ರೈನಿ ಬಸ್ ಕಂಡಕ್ಟರ್ ಮತ್ತು ಮಹಿಳೆಯ ಬಗ್ಗೆ ದೂರು ನೀಡಲು ಹೋದಾಗ ಬಸ್‌ನ ಮಾಲೀಕರು ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಹೇಳಿದ್ದಾರೆ. ತನ್ನ ಪ್ರಚಾರಕ್ಕಾಗಿ ಪ್ರಸಿದ್ಧ ವ್ಯಕ್ತಿಗಳನ್ನು ಕರೆತರುತ್ತಿದ್ದೇನೆ ಎಂದು ಬಸ್ಸಿನ ಮಾಲಕ ತನಗೆ ಹೇಳಿದ್ದು, ಈ ಹಿನ್ನೆಲೆ ಅಲ್ಲಿಂದ ಹೊರಡಲು ಹೇಳಿದರು. ಹಾಗೆ, ತನ್ನ ತಂದೆಯೊಂದಿಗೆ ಮ್ಯಾನೇಜರ್‌ ಅಸಭ್ಯವಾಗಿ ಮಾತನಾಡಿದ್ದಾರೆ ಎಂದೂ ಶರ್ಮಿಳಾ ಹೇಳಿಕೊಂಡಿದ್ದಾರೆ. ಆದರೆ ಶರ್ಮಿಳಾ ಅವರನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ಮಾಲೀಕರು ನಿರಾಕರಿಸಿದ್ದರು.

ಇದನ್ನೂ ಓದಿ: ಬಿಎಂಟಿಸಿಗೆ ಮಹಿಳಾ ಸಾರಥಿ, ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಚಾಲಕಿ ದುಗ್ಗಮ್ಮ