ಬಸ್‌ನಲ್ಲಿ ಪ್ರಯಾಣಿಸುವ ಇಚ್ಛೆ ವ್ಯಕ್ತ ಪಡಿಸಿದ ಸಂಸದೆ ಕನಿಮೊಳಿ ಬಸ್‌ ಹತ್ತಿದ್ದರು. ಈ ವೇಳೆ ಟಿಕೆಟ್‌ ತೆಗೆದುಕೊಳ್ಳುವಂತೆ ಕಂಡಕ್ಟರ್‌ ಸೂಚಿಸಿದ್ದಾರೆ.

ಕೊಯಮತ್ತೂರು (ಜೂನ್ 24, 2023): ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಬಸ್‌ ಟಿಕೆಟ್‌ ತೆಗದುಕೊಳ್ಳುವಂತೆ ಸೂಚಿಸಿದ್ದಕ್ಕೆ ಕಂಡ್ಟರ್‌ ಜೊತೆ ಉಂಟಾದ ವಿವಾದದ ಬಳಿಕ ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುವ ಇಚ್ಛೆ ವ್ಯಕ್ತ ಪಡಿಸಿದ ಸಂಸದೆ ಕನಿಮೊಳಿ ಬಸ್‌ ಹತ್ತಿದ್ದರು. ಈ ವೇಳೆ ಟಿಕೆಟ್‌ ತೆಗೆದುಕೊಳ್ಳುವಂತೆ ಕಂಡಕ್ಟರ್‌ ಸೂಚಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶರ್ಮಿಳಾ ಹಾಗೂ ಕಂಡಕ್ಟರ್‌ ನಡುವೆ ವಾದ ನಡೆದಿದ್ದು, ‘ಸಂಸದೆಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಮಾಡಿದ್ದು ಅವಮಾನ’ ಎಂದು ಕಿಡಿ​ಕಾರಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. 

ಆದರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಅವರು ಮಹಿಳಾ ಬಸ್ ಚಾಲಕರನ್ನು ಸನ್ಮಾನಿಸಿದ ಕೆಲವೇ ಗಂಟೆಗಳ ನಂತರ, 'ತಮ್ಮ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ' ಎಂದು ಆರೋಪಿಸಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು ಎಂದೂ ಆರೋಪಿಸಲಾಗಿದೆ.

ಇದನ್ನು ಓದಿ: Woman Driver: ಬಸ್ ಚಾಲಕಿ ಸೀಟ್ ನಲ್ಲಿ ಯುವ ಮಹಿಳೆ, ಜನರೆಲ್ಲ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು

ಶುಕ್ರವಾರ, ಡಿಎಂಕೆ ಸಂಸದೆ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಅವರು ಶುಕ್ರವಾರ ಗಾಂಧಿಪುರಂನಿಂದ ಪೀಲಮೇಡುಗೆ ಖಾಸಗಿ ಬಸ್‌ನಲ್ಲಿ 23 ವರ್ಷದ ಶರ್ಮಿಳಾ ಓಡಿಸುತ್ತಿದ್ದು ಆಕೆಯ ಕೌಶಲ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದ್ದರು. ಚಾಲಕರೂ ಆಗಿರುವ ಶರ್ಮಿಳಾ ಅವರ ತಂದೆ ಸಮ್ಮುಖದಲ್ಲಿ ಸಂಸದರು ಶರ್ಮಿಳಾ ಅವರಿಗೆ ವಾಚ್ ಉಡುಗೊರೆ ನೀಡಿದರು.

ಆದರೆ, ಸ್ವಲ್ಪ ಸಮಯದ ನಂತರ, ಶರ್ಮಿಳಾ ಅವರು ಬಸ್‌ನಲ್ಲಿದ್ದಾಗ ಕನಿಮೋಳಿ ಅವರೊಂದಿಗೆ ಅಸಭ್ಯವಾಗಿ ಮಾತನಾಡಿರುವ ಟ್ರೈನಿ ಬಸ್ ಕಂಡಕ್ಟರ್ ಮತ್ತು ಮಹಿಳೆಯ ಬಗ್ಗೆ ದೂರು ನೀಡಲು ಹೋದಾಗ ಬಸ್‌ನ ಮಾಲೀಕರು ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಹೇಳಿದ್ದಾರೆ. ತನ್ನ ಪ್ರಚಾರಕ್ಕಾಗಿ ಪ್ರಸಿದ್ಧ ವ್ಯಕ್ತಿಗಳನ್ನು ಕರೆತರುತ್ತಿದ್ದೇನೆ ಎಂದು ಬಸ್ಸಿನ ಮಾಲಕ ತನಗೆ ಹೇಳಿದ್ದು, ಈ ಹಿನ್ನೆಲೆ ಅಲ್ಲಿಂದ ಹೊರಡಲು ಹೇಳಿದರು. ಹಾಗೆ, ತನ್ನ ತಂದೆಯೊಂದಿಗೆ ಮ್ಯಾನೇಜರ್‌ ಅಸಭ್ಯವಾಗಿ ಮಾತನಾಡಿದ್ದಾರೆ ಎಂದೂ ಶರ್ಮಿಳಾ ಹೇಳಿಕೊಂಡಿದ್ದಾರೆ. ಆದರೆ ಶರ್ಮಿಳಾ ಅವರನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ಮಾಲೀಕರು ನಿರಾಕರಿಸಿದರು.

ಇದನ್ನೂ ಓದಿ: ಬೇರೊಬ್ಬನ ಜೊತೆ ಪತ್ನಿಯ ಸರಸ, ಪ್ರಶ್ನಿಸಿದ ಗಂಡ ಅತ್ತೆಯ ಹೈತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಚಾಲಕಿ ಸುಂದರಿ!

ಇನ್ನು, ಮಹಿಳೆ ಓಡಿಸುವ ಬಸ್‌ನಲ್ಲಿ ಪ್ರಯಾಣಿಸುವ ಬಗ್ಗೆ ಮಾತನಾಡಿದ ಕನಿಮೊಳಿ, “ಸಾಮಾನ್ಯವಾಗಿ, ನಾವು ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ಹೇಳಿದಾಗ, ಮಹಿಳೆ ಬಸ್ ಅಥವಾ ಲಾರಿ ಓಡಿಸಬಹುದೇ ಎಂದು ಕೆಲವರು ಕೇಳುತ್ತಾರೆ. ಇಂದು ಮಹಿಳೆಯೊಬ್ಬರು ಬಸ್ ಓಡಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ತುಂಬಾ ಸಂತೋಷದ ವಿಷಯ ಮತ್ತು ಇತರ ಮಹಿಳೆಯರಿಗೆ ಅವರು ಯಾವುದೇ ಕೆಲಸವನ್ನು ಮಾಡಬಹುದು ಎಂಬ ಸಂದೇಶವನ್ನು ಕಳುಹಿಸುತ್ತದೆ. ಈ ಹಿಂದೆ ನಾನು ಅವಳೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ನಾನು ಕೊಯಮತ್ತೂರಿಗೆ ಬಂದಾಗಲೆಲ್ಲಾ ಅವಳು ಓಡಿಸುವ ಬಸ್‌ನಲ್ಲಿ ಪ್ರಯಾಣಿಸಲು ಕೇಳಿದಳು. ಅದಕ್ಕಾಗಿಯೇ, ಈಗ ನಾನು ಇಲ್ಲಿದ್ದೇನೆ, ನಾನು ಅವಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದೆ’’ ಎಂದು ಕನಿಮೊಳಿ ಸುದ್ದಿಗಾರರಿಗೆ ತಿಳಿಸಿದರು.

ಈ ಮಧ್ಯೆ, “ಕನಿಮೊಳಿ ಮೇಡಂ ಅವರು ಬಸ್‌ನಲ್ಲಿದ್ದಾಗ ಅವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಬಸ್ ಪೀಳಮೇಡುವಿನಲ್ಲಿ ನಿಂತಿತು ಮತ್ತು ನಂತರ ಅವರು ನನ್ನೊಂದಿಗೆ ಮಾತನಾಡಿದರು. ಅವರು ನನ್ನನ್ನು ತಬ್ಬಿಕೊಂಡರು ಮತ್ತು ಅವರ ಬೆಂಬಲದ ಭರವಸೆ ನೀಡಿದರು. ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ. ನನಗೆ ಗಿಫ್ಟ್ ಕೊಟ್ಟಿದ್ದಾರೆ” ಎಂದೂ ಹೇಳಿದರು.

ಇದನ್ನೂ ಓದಿ: ಬಿಎಂಟಿಸಿಗೆ ಮಹಿಳಾ ಸಾರಥಿ, ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಚಾಲಕಿ ದುಗ್ಗಮ್ಮ

ಕೆಲ ದಿನಗಳ ಹಿಂದೆ ಕೊಯಮತ್ತೂರು (ದಕ್ಷಿಣ) ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಕೂಡ ಶರ್ಮಿಳಾ ಓಡಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದರು.

ಇದನ್ನೂ ಓದಿ: ಉಬರ್ ಮಹಿಳಾ ಚಾಲಕಿ ಮೇಲೆ ಬೀರ್ ಬಾಟಲ್‌ನಿಂದ ಹಲ್ಲೆ : ದೆಹಲಿಯಲ್ಲಿ ಭೀಭತ್ಸ ಘಟನೆ