ಹಣದ ವಿಚಾರಕ್ಕಾಗಿ 80 ವರ್ಷದ ಅಜ್ಜ- ಅಜ್ಜಿಯ ನಡುವೆ ಕಿತ್ತಾಟ, ಎಂಥ ಕಾಲ ಬಂತಪ್ಪ!

ವೃದ್ಧ ದಂಪತಿ ನಡುವಿನ ನಿರ್ವಹಣೆ ಸಂಬಂಧಿಸಿದ ವಿವಾದವನ್ನು ಆಲಿಸಿದ ಅಲಹಾಬಾದ್‌ ಹೈಕೋರ್ಟ್‌, ‘ಕಲಿಯುಗ ಆಗಲೇ ಬಂದಿರುವಂತಿದೆ’ ಎಂದು ಅಭಿಪ್ರಾಯಪಟ್ಟಿದೆ.

Kalyug has arrived allahabad highcourt hearing elderly couple maintenance dispute rav

ಪ್ರಯಾಗರಾಜ್‌ (ಸೆ.27): ವೃದ್ಧ ದಂಪತಿ ನಡುವಿನ ನಿರ್ವಹಣೆ ಸಂಬಂಧಿಸಿದ ವಿವಾದವನ್ನು ಆಲಿಸಿದ ಅಲಹಾಬಾದ್‌ ಹೈಕೋರ್ಟ್‌, ‘ಕಲಿಯುಗ ಆಗಲೇ ಬಂದಿರುವಂತಿದೆ’ ಎಂದು ಅಭಿಪ್ರಾಯಪಟ್ಟಿದೆ.

ಪತ್ನಿಗೆ ಪ್ರತಿ ತಿಂಗಳು ನಿರ್ವಹಣಾ ವೆಚ್ಚವಾಗಿ 5,000 ರು. ನೀಡಬೇಕೆಂಬ ಕೋರ್ಟ್‌ ಆದೇಶ ಪ್ರಶ್ನಿಸಿ ಹೈ ಕೋರ್ಟ್‌ ಮೆಟ್ಟಿಲೇರಿದ್ದ ಮುನೇಶ್‌ ಕುಮಾರ್‌ ಗುಪ್ತಾ (80) ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಸೌರಭ್‌ ಶ್ಯಾಮ್‌ ಶಂಶೇರಿ, ‘75-80 ವಯಸ್ಸಿನ ದಂಪತಿ ನಿರ್ವಹಣೆಗಾಗಿ ಕಾನೂನು ಕಾಳಗಕ್ಕೆ ಮುಂದಾಗಿರುವುದನ್ನು ನೋಡಿದರೆ ಕಲಿಯುವ ಬಂದಾಗಿದೆ ಅನ್ನಿಸುತ್ತದೆ’ ಎಂದು ಹೇಳಿದ್ದಾರೆ.

ಹಿಂದೂಗಳೇ ಹಿಂದಿರುಗಿ’ ಅಮೆರಿಕದ ಹಿಂದೂ ದೇವಾಲಯದ ಮೇಲೆ ದ್ವೇಷ ಬರಹ!

ತಿಂಗಳಿಗೆ 35,000 ರು. ದುಡಿಯುವ ಪತಿ ತನಗೆ ಆರ್ಥಿಕ ಬೆಂಬಲ ನೀಡಬೇಕು ಎಂದು ಕೋರಿದ್ದ ಗಾಯತ್ರಿ ದೇವಿಗೆ ಪ್ರತಿ ತಿಂಗಳು 5,000 ರು. ನೀಡಬೇಕು ಎಂದು ಕುಟುಂಬ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮುನೇಶ್‌ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios