Asianet Suvarna News Asianet Suvarna News

ಹಿಂದೂಗಳೇ ಹಿಂದಿರುಗಿ’ ಅಮೆರಿಕದ ಹಿಂದೂ ದೇವಾಲಯದ ಮೇಲೆ ದ್ವೇಷ ಬರಹ!

ಕ್ಯಾಲಿಫೋರ್ನಿಯಾದ ಸಾಕ್ರಮೆಂಟೊದಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಅಪರಿಚಿತರು ‘ಹಿಂದೂಗಳೇ ಹಿಂದಿರುಗಿ’ ಎಂದು ಗೀಚಿದ್ದಾರೆ. ಮಣಿಪುರದಲ್ಲಿ ಶಿವನ ಮಂದಿರಕ್ಕೆ ನುಗ್ಗಿ ಬೆಂಕಿ ಹಚ್ಚಲಾಗಿದ್ದು, ಈ ಘಟನೆಗಳು ಆಕ್ರೋಶಕ್ಕೆ ಕಾರಣವಾಗಿವೆ.

hindus go back baps temple vandalised in US second incident in month rav
Author
First Published Sep 27, 2024, 9:41 AM IST | Last Updated Sep 27, 2024, 9:55 AM IST

ವಾಷಿಂಗ್ಟನ್‌ (ಸೆ.27): ಕ್ಯಾಲಿಫೋರ್ನಿಯಾದ ಸಾಕ್ರಮೆಂಟೊದಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಅಪರಿಚಿತರು ಇದೀಗ ‘ಹಿಂದೂಗಳೇ ಹಿಂದಿರುಗಿ’ ಎಂದು ಗೀಚುವ ಮೂಲಕ ವಿಕೃತಿ ಮೆರೆದಿದ್ದಾರೆ. ಸೆ.17ರಂದು ನ್ಯೂ ಯಾರ್ಕ್‌ನ ಬಿಎಪಿಎಸ್‌ ಶ್ರೀ ಸ್ವಾಮಿನಾರಾಯಣ ದೇವಾಲಯದ ಧ್ವಂಸದ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ. ‘ನಾವು ದ್ವೇಷವನ್ನು ಖಂಡಿಸುತ್ತೇವೆ. ಈ ಘಟನೆಯಿಂದ ಅತೀವ ದುಃಖವಾಗಿದೆ. ಹೃದಯದಲ್ಲಿ ದ್ವೇಷ ತುಂಬಿಕೊಂಡವರು ಸೇರಿದಂತೆ ಎಲ್ಲರಿಗಾಗಿ ಪ್ರಾರ್ಥಿಸುತ್ತೇವೆ’ ಎಂದು ಬಿಎಪಿಎಸ್‌ ಸಂಸ್ಥೆ, ಈ ಸಂಬಂಧ ಕಾನೂನು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸನಾತನ ಧರ್ಮದ ರಕ್ಷಣೆಯೇ ನಾವು ಮಾಡಲಿಲ್ಲ ಅಂದ್ರೆ, ಹಿಂದೂ ಆಗಿ ಏನು ಪ್ರಯೋಜನ: ಮಾಧವಿ ಲತಾ

ಮಣಿಪುರ ಶಿವ ದೇಗುಲಕ್ಕೆ ಅಪರಿಚಿತರಿಂದ ಬೆಂಕಿ: ವಾರದಲ್ಲೇ 2ನೇ ಘಟನೆ

ಇಂಫಾಲ: ಅಪರಿಚಿತರ ಗುಂಪೊಂದು ಶಿವನ ಮಂದಿರಕ್ಕೆ ನುಗ್ಗಿ ಬೆಂಕಿ ಹಚ್ಚಿರುವ ಘಟನೆ ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ದೇವಸ್ಥಾನಕ್ಕೆ ಭಾಗಶಃ ಹಾನಿಯಾಗಿದೆ. ಇದು ಪಶುಪತಿ ನಾಥನ ಸನ್ನಿಧಿಯಲ್ಲಿ ಒಂದು ವಾರದಲ್ಲಿ ನಡೆದ 2ನೇ ದಾಳಿಯಾಗಿದೆ. ಕಿಡಿಗೇಡಿಗಳ ಈ ಕೃತ್ಯ ದೇವಸ್ಥಾನದಲ್ಲಿರುವ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಗುರುವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಅಪರಿಚಿತರು, ದೇವಾಲಯದ ಒಳಗಡೆಯಿಂದ ಮರದ ದಿಮ್ಮಿಗಳಿಗೆ ಬೆಂಕಿ ಹಚ್ಚಿ ದೇವಸ್ಥಾನದ ಅಂಗಳದೊಳಗೆ ಎಸೆಯುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಈ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Latest Videos
Follow Us:
Download App:
  • android
  • ios