ಬೆಂಗಳೂರು(ಜ.11): ಜನವರಿ 16 ರಿಂದ ದೇಶದಲ್ಲಿ ಲಸಿಕೆ ನೀಡುವಿಕೆ ಆರಂಭಗೊಳ್ಳಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಜೊತೆ ಆರೋಗ್ಯ ಸಚಿವ ಕೆ ಸುಧಾಕರ್ ಪಾಲ್ಗೊಂಡಿದ್ದರು. ಸಭೆ ಬಳಿಕ ಸುಧಾಕರ್, ಲಸಿಕೆ ಬಳಕೆ, ಮೊದಲ ಹಂತದಲ್ಲಿ ಯಾರಿಗೆ ಲಸಿಕೆ ಸಿಗಲಿದೆ ಅನ್ನೋ ಮಾಹಿತಿ ನೀಡಿದ್ದಾರೆ. 

ಮೋದಿ ಸಭೆ ಬಳಿಕ ಯಡಿಯೂರಪ್ಪ ಪ್ರತಿಕ್ರಿಯೆ; ರಾಜ್ಯದಲ್ಲಿ ಲಸಿಕೆ ಬಳಕೆ ಮಾಹಿತಿ ನೀಡಿದ CM

ಜನವರಿ 16ರಿಂದ ಲಸಿಕೆ ವಿತರಣೆಯಾಗಬೇಕಿದೆ. ಹೀಗಾಗಿ ಸದ್ಯದಲ್ಲಿ ರಾಜ್ಯಕ್ಕೆ ಲಸಿಕೆ ಆಗಮಿಸಲಿದೆ ಎಂದು ಸುಧಾಕರ್ ಹೇಳಿದ್ದಾರೆ. ಮೊದಲ ಹಂತದಲ್ಲಿ ಫ್ರಂಟ್‌ಲೈನ್ ವರ್ಕಸ್‌ಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.  ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ; ಉಚಿತ ಲಸಿಕೆ ಜೊತೆಗೆ ವಿಶೇಷ ಮನವಿ ಮಾಡಿದ ಪ್ರಧಾನಿ!

ರಾಜ್ಯದಲ್ಲಿನ 16 ಲಕ್ಷ ಹೆಲ್ತ್ ವರ್ಕಸ್, ಕೊರೋನಾ ವಾರಿಯರ್ಸ್‌ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ಮೊದಲ ಡೋಸ್ ಪಡೆದ 28 ದಿನಗಳ ಬಲಿಕ 2ನೇ ಡೋಸ್ ಪಡೆಯಬೇಕು. 45 ದಿನದಲ್ಲಿ ದೇಹಗಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಸುಧಾಕರ್ ಹೇಳಿದ್ದಾರೆ. ಇನ್ನು ಲಸಿಕೆ ಕುರಿತು ಆತಂಕ ಬೇಡ. ಸಂಪೂರ್ಣ ಸುರಕ್ಷಿತವಾಗಿದೆ ಎಂದರು. 

ಕರ್ನಾಟಕದ 235 ಕೇಂದ್ರಗಳಲ್ಲಿ ಲಸಿಕೆ ವಿತರಣೆಯಾಗಲಿದೆ. ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಖುದ್ದು ಈ ಕುರಿತು ವರದಿ ತರಿಸಿಕೊಂಡು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.