ನವದೆಹಲಿ(ಜ.11):  ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆಗೆ ಸಜ್ಜಾಗಿದೆ. ಜನವರಿ 16 ರಿಂದ ಕೊರೋನಾ ಲಸಿಕೆ ಎಲ್ಲಾ ರಾಜ್ಯಗಳಲ್ಲಿ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಕೊರೋನಾ ಲಸಿಕೆ ವಿತರಣೆ, ಶೇಖರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ.

"

ರಾಜ್ಯಕ್ಕೆ ಲಸಿಕೆ ಬರಲು ಬಂತು ಮುಹೂರ್ತ, ಜನಸಾಮಾನ್ಯರಿಗೆ ಯಾವಾಗ ಸಿಗುತ್ತೆ ರೀ..?

ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿ ಹೇಳಿದ್ದಾರೆ. 3 ಕೋಟಿ ಹೆಲ್ತ್‌ಕೇರ್ ವರ್ಕಸ್‌ಗೆ ಉಚಿತ ಕೊರೋನಾ ಲಸಿಕೆ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ. 

ವಿಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಮೋದಿ, ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಕೊರೋನಾ ವೈರಸ್ ಹೊಡೆದೋಡಿಸಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಿದ್ದೇವೆ. ಇದೀಗ ಜೊತೆಯಾಗಿ ಲಸಿಕೆ ವಿತರಣೆಯಲ್ಲಿ ಕೈಜೋಡಿಸಿ ಈ ಮಹತ್ ಕಾರ್ಯವನ್ನು ಯಶಸ್ವಿಗೊಳಿಸಬೇಕಿದೆ ಎಂದು ಮೋದಿ ಎಲ್ಲಾ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಇದೇ ವೇಳೆ ಪ್ರಧಾನಿ ಮೋದಿ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರು, ಶಾಸಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳು, ಕೊರೋನಾ ವಾರಿಯರ್ಸ್ ಸೇರಿದಂತೆ ಫ್ರಂಟ್‌ಲೈನ್ ವರ್ಕಸ್‌ಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಯಾವ ಸಚಿವರು, ಶಾಸಕರು, ಸರದಿಗೂ ಮೊದಲೇ ಲಸಿಕೆ ಪಡೆಯಬಾರದು. ನಿಮ್ಮ ಸರದಿ ಬಂದಾಗ ಪಡೆಯಿರಿ ಎಂದು ಸೂಚನೆ ನೀಡಿದ್ದಾರೆ.

ಮೋದಿ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿನ ಲಸಿಕೆ ಶೇಖರಣೆ ಹಾಗೂ ವಿತರಣೆಗೆ ಕೈಗೊಂಡಿರುವ ತಯಾರಿಗಳ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕ ತಯಾರಿ ಹಾಗೂ ಸಿದ್ಧತೆ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇಷ್ಟೇ ಅಲ್ಲ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ತಕ್ಷಣವೇ ಕೋವಿಡ್ ಲಸಿಕೆ ವಿತರಣೆಗೆ ಮೋದಿ ಗ್ರೀನ್ ಸಿಗ್ನಿಲ್ ನೀಡಿದ್ದಾರೆ.

ಮೋದಿ ಗ್ರೀನ್ ಸಿಗ್ನಲ್‌ನಿಂದ ಯಾವುದೇ ಕ್ಷಣದಲ್ಲಿ ರಾಜ್ಯಕ್ಕೆ ಲಸಿಕೆ ಆಗಮಿಸಲಿದೆ.  ಮೊದಲು ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರದಿಂದ ವ್ಯಾಕ್ಸಿನ್ ಡಿಸ್‌ಪ್ಯಾಚ್ ಕುರಿತು ಇಮೇಲ್ ರವಾನೆಯಾಗಲಿದೆ.  ಮೇಲ್ ಬಂದ ನಂತ್ರ 4 ರಿಂದ 5 ಗಂಟೆಯಲ್ಲಿ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಕ್ಸಿನ್ ಆಗಮಿಸಲಿದೆ. ಆರೋಗ್ಯ ಅಧಿಕಾರಿಗಳು ಲಸಿಕೆಯನ್ನು ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಬೆಳಗಾವಿಯಲ್ಲಿರುವ ಸ್ಟೇಟ್ ವಾಕ್ಸಿನ್ ಸ್ಟೋರೇಜ್ ಸೆಂಟರ್‌ಗೆ ರವಾನಿಸಲಿದ್ದಾರೆ. ಇಲ್ಲಿ ಲಸಿಕೆಗಳು ಶೇಖರಣೆಯಾಗಲಿದೆ.