ಬೆಂಗಳೂರು(ಜ.11):  ಕೊರೋನಾ ಲಸಿಕೆ ಹಂಚಿಕೆ ಹಾಗೂ ನೀಡುವಿಕೆ ಕುರಿತು ಪ್ರದಾನಿ ನರೇಂದ್ರ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪಾಲ್ಗೊಂಡಿದ್ದರು.  ರಾಜ್ಯದಲ್ಲಿ ತಯಾರಿ ಹಾಗೂ ಹಂಚಿಕೆ ಕುರಿತು ಮಾಹಿತಿ ಪಡೆದುಕೊಂಡ ಮೋದಿ ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಕುರಿತು ಯಡಿಯೂರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ; ಉಚಿತ ಲಸಿಕೆ ಜೊತೆಗೆ ವಿಶೇಷ ಮನವಿ ಮಾಡಿದ ಪ್ರಧಾನಿ!.

ಮೊದಲ ಹಂತದಲ್ಲಿ ದೇಶದಲ್ಲಿನ 3 ಕೋಟಿ ಹೆಲ್ತ್ ವರ್ಕಸ್‌ಗೆ ಲಸಿಕೆ ನೀಡಲಾಗುವುದು. ಇದರಲ್ಲಿ ರಾಜ್ಯದಲ್ಲಿ 16 ವಾಕ್ಸಿನೇಷನ್ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.  ರಾಜ್ಯದಲ್ಲೂ 16 ರಿಂದ ಲಸಿಕೆ ನೀಡುವಿಕೆ ಆರಂಭಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕದ 235 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಲಸಿಕೆ ಶೇಖರಣೆಗೆ ಕೋಲ್ಡ್ ಸ್ಟೋರೇಜ್, ಹಂಚಿಕೆ, ವಿತರಣೆ, ನೀಡುವಿಕೆ ಸೇರಿದಂತೆ ಎಲ್ಲಾ ಹಂತದಲ್ಲೂ ನಿಗಾವಹಿಸಲಾಗುವುದು. ಹಂತ ಹಂತವಾಗಿ ಕೊರೋನಾ ಲಸಿಕೆ ಜನರಿಗೆ ಸಿಗಲಿದೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.