ಜನಪ್ರಿಯ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಪಾಕಿಸ್ತಾನದೊಂದಿಗಿನ ಸಂಪರ್ಕಗಳು ಮತ್ತು ಕಾಶ್ಮೀರದ ಪೆಹಲ್ಗಾಮ್ ಭೇಟಿ ಅನುಮಾನಗಳನ್ನು ಹುಟ್ಟುಹಾಕಿದೆ. ಐಎಸ್‌ಐ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದ ಆರೋಪವೂ ಇದೆ.

ಜ್ಯೋತಿ ಮಲ್ಹೋತ್ರಾ... (Jyoti Malhotra), ಸದ್ಯ ಭಾರತದಲ್ಲಿ ತಲ್ಲಣ ಸೃಷ್ಟಿಸ್ತಿರೋ ಹೆಸರು ಇದು. ಯುಟ್ಯೂಬ್​ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ಜ್ಯೋತಿಯನ್ನು ಸದ್ಯ ಅರೆಸ್ಟ್​ ಮಾಡಲಾಗಿದೆ. ಯೂಟ್ಯೂಬ್​ ಮೂಲಕ ಪ್ರಪಂಚದ ದರ್ಶನ ಮಾಡ್ತಿದ್ದ ಈ ಸುಂದರಿಗೆ ಪಾಕಿಸ್ತಾನದ ಜೊತೆ ಭಾರಿ ಲಿಂಕ್​ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿಯೂ ಹಲವು ಗೆಳೆಯರನ್ನು ಹೊಂದಿರುವ ಬಗ್ಗೆ ಇದಾಗಲೇ ಆರಂಭಿಕ ತನಿಖೆಯಿಂದಲೂ ತಿಳಿದುಬಂದಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಸದ್ಯ ಈಕೆಯನ್ನು ಅರೆಸ್ಟ್​ ಮಾಡಲಾಗಿದೆ. ಕಳೆದ ವರ್ಷ ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಇಫ್ತಾರ್ ಔತಣಕೂಟದಲ್ಲಿ ಈಕೆ ಭಾಗವಹಿಸಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಇಫ್ತಾರ್‌ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈಕೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಕೂಡ ಮಾಡಿದ್ದಳು. ಅಷ್ಟೇ ಅಲ್ಲದೇ ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್‌ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇದೀಗ ಕಾಶ್ಮೀರದ ಪೆಹಲ್ಗಾಮ್​ಗೆ ಈಕೆ ಭೇಟಿ ಕೊಟ್ಟಿದ್ದು, ಅದರ ಫೋಟೋ ಕೂಡ ಅಪ್​ಲೋಡ್​ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ನಿಂತು ಈಕೆ ಮಾಡುತ್ತಿದ್ದ ವಿಡಿಯೋ, ಭಾರತದ ಕೆಲವೊಂದು ಸ್ಥಳಗಳ ಬಗ್ಗೆ ನೀಡುತ್ತಿದ್ದ ಗುಪ್ತ ಮಾಹಿತಿ ನೋಡಿ ಇದಾಗಲೇ ನೆಟ್ಟಿಗರೊಬ್ಬರು ಈಕೆ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಅದನ್ನು ಯಾರೂ ಹೆಚ್ಚು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಪ್ರಪಂಚ ಪರ್ಯಟನೆ ಮಾಡುವ ವ್ಲಾಗರ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವಾಗ, ಅವರಿಗೆ ಪರ- ವಿರೋಧ ಕಮೆಂಟ್​ಗಳು ಬರುವುದು ಸಹಜ ಎಂದೇ ಅದನ್ನು ಅಷ್ಟು ಹೆಚ್ಚಾಗಿ ಪರಿಗಣಿಸುವುದೂ ಇಲ್ಲ. ಆದರೆ ಇದೀಗ ಪೆಹಲ್ಗಾಮ್​ಗೆ ಜ್ಯೋತಿ ಭೇಟಿ ನೀಡಿದ್ದರ ಬಗ್ಗೆ ಹಲವಾರು ಅನುಮಾನಗಳು ಹುಟ್ಟುಹಾಕುತ್ತಿವೆ.

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

ಪೆಹಲ್ಗಾಮ್​ನ ಬಗ್ಗೆ ವಿಡಿಯೋ ಮಾಡಿ, ಆಕೆ ಅಲ್ಲಿಯ ಮಾಹಿತಿಗಳನ್ನು ಪಾಕಿಗಳಿಗೆ ತಿಳಿಸಿದ್ದಳಾ, ಯಾವ ಪ್ರದೇಶದಲ್ಲಿ ಹೇಗೆ ಭದ್ರತೆ ಇದೆ, ಎಲ್ಲಿ ಇಲ್ಲ ಎನ್ನುವ ಬಗ್ಗೆ ಸೂಕ್ಷ್ಮವಾಗಿ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿದ್ದಳಾ ಎನ್ನುವ ಗುಮಾನಿ ಕೂಡ ಈ ಫೋಟೋದಿಂದ ಬಯಲಾಗಬೇಕಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಾಗಲೇ ಜ್ಯೋತಿ ಬಗ್ಗೆ ಆಘಾತಕಾರಿ ಮಾಹಿತಿಗಳು ಹೊರ ಬೀಳುತ್ತಲೇ ಇವೆ. 

 ವಾಟ್ಸ್​ಆ್ಯಪ್​, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳ ಮೂಲಕ “ಜಟ್ ರಾಂಧವ” ಎಂದು ಅವರ ಸಂಖ್ಯೆಯನ್ನು ಉಳಿಸಿಕೊಂಡಿದ್ದ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಐಎಸ್​ಐ ಕಾರ್ಯಕರ್ತರೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದರು ಎನ್ನುವ ಸತ್ಯವೂ ಬೆಳಕಿಗೆ ಬಂದಿದೆ. ನಂತರ ಐಎಸ್​ಐ ಏಜೆಂಟ್ ಜೊತೆಗೂ ಆಕೆ ಸಂಪರ್ಕ ಹೊಂದಿದ್ದಳು. ಸರ್ಕಾರದಿಂದ ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲ್ಪಟ್ಟ ಡ್ಯಾನಿಶ್ ಈ ವರ್ಷ ಮೇ 13ರಂದು ಭಾರತದಿಂದ ಹೊರಹಾಕಲ್ಪಟ್ಟರು. ಆ ನಂತರ ಅವರು ಜ್ಯೋತಿ ಅವರನ್ನು ಅನೇಕ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದರು ಎಂಬ ಗಂಭೀರ ಆರೋಪ ಇದೆ. 

Rafale Fighter Jet: 'ಆಪರೇಷನ್​ ಸಿಂದೂರ'ದ ಹೀರೋ, ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...

Scroll to load tweet…